ಮಂಡ್ಯ: ಜಾಮೀಯ ಮಸೀದಿ (Masjid) ಇದ್ದ ಸ್ಥಳದಲ್ಲಿ ಮೂಡಲ ಬಾಗಿಲು ಶ್ರೀ ಆಂಜನೇಯ ದೇವಾಲಯವಿತ್ತು ಎಂದು ಆರೋಪಿಸಿರುವ ಹಿಂದೂ ಸಂಘಟನೆಗಳು (Hindu Organizations), ಇಂದು (ಜೂನ್ 4) ಶ್ರೀರಂಗಪಟ್ಟಣ ಚಲೋ ಜಾಥಾ ನಡೆಸುತ್ತಿವೆ. ಈಗಾಗಲೇ ಜಾಥಾಗೆ ಚಾಲನೆ ಸಿಕ್ಕಿದ್ದು, ಬೈಕ್, ಕಾರುಗಳಲ್ಲಿ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಂಡವಪುರದಿಂದ ಶ್ರೀರಂಗಪಟ್ಟಣಕ್ಕೆ ಹೊರಟಿದ್ದಾರೆ. ಇನ್ನು ಕೆಲ ಕಾರ್ಯಕರ್ತರು ಶ್ರೀರಂಗಪಟ್ಟಣದ ಕಿರಂಗೂರು ಸರ್ಕಲ್ನಲ್ಲಿ ಹೈಡ್ರಾಮಾ ಮಾಡಿದ್ದಾರೆ.
ಕಾರ್ಯಕರ್ತರು ಶ್ರೀರಂಗಪಟ್ಟಣಕ್ಕೆ ಪ್ರವೇಶಿಸದಂತೆ ಪೊಲೀಸರು ತಡೆ ಹಿಡಿದಿದ್ದಾರೆ. ಈ ವೇಳೆ ಪೊಲೀಸರು ಮತ್ತು ಹಿಂದೂ ಸಂಘಟನೆಗಳ ಮುಖಂಡರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ರಸ್ತೆಯಲ್ಲಿ ಅಡ್ಡಲಾಗಿ ನಿಂತು ಕಾರ್ಯಕರ್ತರು ಘೋಷಣೆ ಕೂಗಿದರು.
ಇನ್ನು ಬನ್ನಿ ಶ್ರೀರಂಗಪಟ್ಟಣದ ಕಿರಂಗೂರು ಸರ್ಕಲ್ ಬಳಿಯಿರುವ ಮಂಟಪದಲ್ಲಿ ತಾತ್ಕಾಲಿಕವಾಗಿ ಆಂಜನೇಯ ಮೂರ್ತಿ ಪ್ರತಿಷ್ಠಾಪಿಸಿ ಹಿಂದೂಪರ ಸಂಘಟನೆ ಕಾರ್ಯಕರ್ತರು ಭಜನೆ ಮಾಡಿದರು. ಶ್ರೀರಾಮ್ ಜೈ ರಾಮ್ ಜೈ ಜೈ ರಾಮ್ ಎಂಬ ಘೋಷವಾಕ್ಯ ಕೂಗಿದರು. 144 ಸೆಕ್ಷನ್ ಜಾರಿಯಾಗಿರುವ ಹಿನ್ನೆಲೆ ಪೊಲೀಸರು ಬನ್ನಿ ಮಂಟಪ ಬಳಿ ತಡೆದಿದ್ದಾರೆ. ಈ ನಡುವೆ ಜಾಮಿಯ ಮಸೀದಿಯಲ್ಲಿ ಮಧ್ಯಾಹ್ನ ಒಂದು ಗಂಟೆಯ ನಮಾಜ್ ಎಂದಿನಂತೆ ನಡೆದಿದೆ.
ಇದನ್ನೂ ಓದಿ: One Day Trip:ಒತ್ತಡ ಬದಿಗಿಟ್ಟು, ಬೆಂಗಳೂರಿನಿಂದ ಈ ಸ್ಥಳಗಳಿಗೆ ಒಂದು ದಿನದ ಟ್ರಿಪ್ ಹೋಗಿ
ಕುಮಾರಸ್ವಾಮಿ ಹೇಳಿದ್ದೇನು?:
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಲ್ಲಿ ದೇಗುಲ ಇರುವುದು ನಿಜ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಈಗ ಏನೆಲ್ಲಾ ನಡೆಯುತ್ತಿದಯೋ ನಡೆಯಲಿ. ಇದು ಎಲ್ಲಿಗೆ ಹೋಗುತ್ತೋ ನೋಡೊಣ. ಅಲ್ಲಿಯ ಜನ ಮನೆ ಕಟ್ಟಿಕೊಳ್ಳೋಕೆ ಅವಕಾಶ ಕೊಡಿ ಅಂತಿದ್ದಾರೆ. ಇವರೆಲ್ಲಾ ಹೊರಗಿಂದ ಬಂದು ದೇವಸ್ಥಾನ ಕಟ್ತಿವಿ ಅಂತಿದ್ದಾರೆ. ನಾವು ಧರ್ಮ ಉಳಿಸೋಕೆ ಬದ್ದ. ಇವರ ಹೋರಾಟ ಧರ್ಮ ಉಳಿಸುವುದಕ್ಕಲ್ಲ. ಇವರ ಹೋರಾಟದ ಹಿಂದೆ ಬೇರೆಯ ಉದ್ದೇಶವೇ ಇದೆ. ದೇಶದಲ್ಲಿ ಧರ್ಮ ಉಳಿಯಬೇಕು. ಇದು ಸರ್ವಜನಾಂಗದ ಶಾಂತಿಯ ತೋಟವಾಗಿ ಉಳಿಯಬೇಕು ಎಂದು ಹೇಳಿದರು.
ಚಲೋ ಬಗ್ಗೆ ಕಲಬುರಗಿಯಲ್ಲಿ ಮಾತನಾಡಿದ ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್, ಶ್ರೀರಂಗಪಟ್ಟಣದಲ್ಲಿ ಅತಿಕ್ರಮಣ ಮಾಡಿರುವವರನ್ನು ತಡೆಯಬೇಕು. ಪೂಜೆ ಮಾಡಲು, ಪ್ರತಿಭಟನೆ ಮಾಡೋರನ್ನ ಹತ್ತಿಕ್ಕುವ ಕೆಲಸ ಆಗ್ತಿದೆ. ರಾಜ್ಯ ಸರ್ಕಾರ ಹೋರಾಟ ತಡೆಯುವ ಕೆಲಸವನ್ನು ಮಾಡಬಾರದು ಎಂದು ಹೇಳಿದರು.
ಶ್ರೀರಂಗಪಟ್ಟಣದ ಉಪವಿಭಾಗಧಿಕಾರಿ ಶಿವಾನಂದ ಮೂರ್ತಿ ಮಾತನಾಡಿ, ಜಾಮೀಯಾ ಮಸೀದಿ ವಕ್ಫ್ ಬೋರ್ಡ್ ಗೆ ಸೇರಿಸಿಲಾಗಿದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಿ ಕೊಂಡು ಮಾಹಿತಿ ನೀಡುತ್ತೇವೆ. ಸಂರಕ್ಷಿತಾ ಪುರತತ್ವ ಕಟ್ಟಡದಲ್ಲಿ ಮದರಸಾ ನಡೆಯುತ್ತಿರುವ ಬಗ್ಗೆ ಕೇಂದ್ರದ ಗಮನಕ್ಕೆ ತಂದು ಸ್ಪಷ್ಟಪಡಿಸುತ್ತೇವೆ. ಮದರಸದ ಬಗ್ಗೆ ಸ್ಪಷ್ಟೀಕರಣಕ್ಕೆ ಕೇಂದ್ರದ ಪುರತತ್ವ ಇಲಾಖೆಗೆ ಬರೆಯುತ್ತೇವೆ. ಕಾನೂನಾತ್ಮಕವಾಗಿ ನಿಮ್ಮ ಬೇಡಿಕೆ ಬಗ್ಗೆ ಪರಿಶೀಲಿಸುತ್ತೇವೆ ಎಂದರು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:25 pm, Sat, 4 June 22