ಆಟೋ-ಕಾರು ಮುಖಾಮುಖಿ ಡಿಕ್ಕಿ: ಮೂವರು ದುರ್ಮರಣ, ಮಂಡ್ಯದಲ್ಲೊಂದು ಭೀಕರ ಘಟನೆ

ಹಣ ಕದ್ದ ಆರೋಪದಿಂದ ಜಿಗುಪ್ಸೆಗೊಂಡು ಯುವಕ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ನಗರದ ಎಪಿಎಂಸಿ ಪಿಎಸ್‌ಐ ಸೋಮೇಶ್ ಗೆಜ್ಜಿ ಅಮಾನತ್ತು ಮಾಡಲಾಗಿದೆ.

ಆಟೋ-ಕಾರು ಮುಖಾಮುಖಿ ಡಿಕ್ಕಿ: ಮೂವರು ದುರ್ಮರಣ, ಮಂಡ್ಯದಲ್ಲೊಂದು ಭೀಕರ ಘಟನೆ
ಪ್ರಾತಿನಿಧಿಕ ಚಿತ್ರ
Updated By: ಗಂಗಾಧರ​ ಬ. ಸಾಬೋಜಿ

Updated on: Jul 14, 2022 | 10:16 AM

ಮಂಡ್ಯ: ಆಟೋ ಕಾರು ಮುಖಾಮುಖಿ ಡಿಕ್ಕಿಯಾಗಿ (Accident) ಮೂರು ಜನರ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮಳವಳ್ಳಿಯಲ್ಲಿ ನಡೆದಿದೆ. ವೇಗವಾಗಿ ಬಂದ ಕಾರು ಆಟೋಗೆ ಡಿಕ್ಕಿ ಪರಿಣಾಮ ಆಟೋದಲ್ಲಿದ್ದ ಮೂವರು ದುರ್ಮರಣ ಹೊಂದಿದ್ದಾರೆ. ಆಟೋ ಚಾಲಕ ಶ್ರೀನಿವಾಸ್. ರವಿ ಕುಮಾರ್. ಭಾಸ್ಕರ್ ಮೃತರು. ಡಿಕ್ಕಿಯ ರಭಸಕ್ಕೆ ರಸ್ತೆ ಪಕ್ಕದ ಗುಂಡಿಗೆ ಆಟೋ ಬಿದಿದ್ದು, ಆಟೋ ಮೇಲೆ ಕಾರು ಬಿದಿದ್ದಿದೆ. ಸ್ಥಳಕ್ಕೆ ಮಳವಳ್ಳಿ ಠಾಣಾ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದು, ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ: ಚಾಕು ಇರಿತದಿಂದ ಗಾಯಗೊಂಡಿದ್ದ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಪತಿ ಆಯೂಬ್ ಖಾನ್ ಸಾವು

ಕೆನರಾ ಬ್ಯಾಂಕ್‌ನಲ್ಲಿ ಕಳ್ಳತನಕ್ಕೆ ಯತ್ನ:

ರಾಯಚೂರು: ನಗರದ ಕೆನರಾ ಬ್ಯಾಂಕ್‌ನಲ್ಲಿ ಕಳ್ಳತನಕ್ಕೆ ಯತ್ನಿಸಿರುವಂತಹ ಘಟನೆ ನಗರದ ಲಿಂಗಸುಗೂರು ರಸ್ತೆಯ ಕೆನರಾ ಬ್ಯಾಂಕ್​ನಲ್ಲಿ ನಡೆದಿದೆ. ಬ್ಯಾಂಕ್‌ನ ಬಾತ್ ರೂಂ ಕಿಟಕಿ ಹೊಡೆದು ಕಳ್ಳ ಒಳನುಗ್ಗಿದ್ದು, ಬ್ಯಾಂಕ್‌ನಲ್ಲಿನ ನಾಲ್ಕು ಸಿಸಿ ಕ್ಯಾಮರಾ ಕಿತ್ತು ಹಾಕಿ ಕಳ್ಳತನಕ್ಕೆ ಯತ್ನಿಸಲಾಗಿದೆ. ಎಲ್ಲಡೆ ಹುಡುಕಾಡಿದರು ಹಣ ಸಿಗದೇ ಬರಿಗೈಲಿ ಕಳ್ಳ ವಾಪಸ್ ಹೋಗಿದ್ದಾನೆ. ಕಳ್ಳನ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳದಿಂದ ಪರಿಶೀಲನೆ ಮಾಡಲಾಗಿದೆ. ಪಶ್ಚಿಮ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಮೊದಲ ಪತ್ನಿ ಬಳಿ ಹೋಗ ಬೇಡ ಎಂದು ತಕರಾರು; ಮಾರಕಾಸ್ತ್ರದಿಂದ ಹೊಡೆದು ಮಹಿಳೆ ಹತ್ಯೆಗೆ ಯತ್ನಿಸಿದ ರಾಮ ಸೇನೆ ಜಿಲ್ಲಾಧ್ಯಕ್ಷ

ವಿದ್ಯುತ್ ಪ್ರವಹಿಸಿ ಗೃಹಿಣಿ ಸಾವು:

ತುಮಕೂರು: ಸೆಟ್​​ಟಾಪ್ ಬಾಕ್ಸ್ ವಿದ್ಯುತ್ ಪ್ರವಹಿಸಿ ಗೃಹಿಣಿ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಸೂರೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಗಳಮ್ಮ (61) ಮೃತ ದುರ್ದೈವಿ. ಮನೆಯಲ್ಲಿ ತೇವದ ಬಟ್ಟೆಯಿಂದ ಟಿವಿ ಸ್ಟ್ಯಾಂಡ್ ಮೇಲಿನ ಸೆಟ್​​ಟಾಪ್ ಶುಚಿಗೊಳಿಸುವಾಗ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾಳೆ. ಕೂಡಲೇ ತೋವಿನಕೆರೆ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಯುವಕ ಆತ್ಮಹತ್ಯೆ ಪ್ರಕರಣ: ಎಪಿಎಂಸಿ ಪಿಎಸ್‌ಐ ಸೋಮೇಶ್ ಗೆಜ್ಜಿ ಅಮಾನತ್ತು

ವಿಜಯಪುರ: ಹಣ ಕದ್ದ ಆರೋಪದಿಂದ ಜಿಗುಪ್ಸೆಗೊಂಡು ಯುವಕ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ನಗರದ ಎಪಿಎಂಸಿ ಪಿಎಸ್‌ಐ ಸೋಮೇಶ್ ಗೆಜ್ಜಿ ಅಮಾನತ್ತು ಮಾಡಲಾಗಿದೆ. ಯುವಕನ ಆತ್ಮಹತ್ಯೆ ಪ್ರಕರಣದಲ್ಲಿ ಪಿಎಸ್‌ಐ ವಿರುದ್ಧ ದೂರು ಕೇಳಿ ಬಂದ ಹಿನ್ನೆಲೆ ಎಸ್ಪಿ ಹೆಚ್​​.ಡಿ ಆನಂದಕುಮಾರ ಅವರಿಂದ ಅಮಾನತ್ತು ಮಾಡಲಾಗಿದೆ. ವ್ಹೀಲ್ ಅಲೈನ್ಮೆಂಟ್​ಗೆ ಬಂದಿದ್ದ ಪಿಎಸ್‌ಐ ಸಹೋದರನ ಕಾರಲ್ಲಿದ್ದ 1 ಲಕ್ಷ ಕದ್ದಿರುವ ಆರೋಪವನ್ನು ಯುವಕ ಸೋಮನಾಥ ನಾಗಮೋತಿ ಹೊತ್ತಿದ್ದ. ಆತ್ಮಹತ್ಯೆಗೂ ಮುನ್ನ ಫೇಸ್ಬುಕ್‌ನಲ್ಲಿ ಸುಸೈಡ್ ಮಾಡಿಕೊಳ್ಳೊದಾಗಿ ಹೇಳಿ ವಿಡಿಯೋ ಹರಿಬಿಟ್ಟಿದ್ದ. ಪಿಎಸ್ಐ ಸೋಮೇಶ್ ಗೆಜ್ಜಿ, ಸಹೋದರ ಸಚಿನ್ ಗೆಜ್ಜಿ ವಿರುದ್ಧ ಹಲ್ಲೆ, ಬೆದರಿಕೆ ಆರೋಪ ಕೇಳಿ ಬಂದಿತ್ತು. ಟೈರ್ಸ್ ಆ್ಯಂಡ್ ವ್ಹೀಲ್ಸ್ ಶಾಪ್ ಮಾಲಿಕರಾದ ರವಿ ದೇಗಿನಾಳ, ಸಂತೋಷ ದೇಗಿನಾಳ‌ ಹೆಸರಲ್ಲೂ ಡೆತ್ ನೋಟ್ ಬರೆದಿಟ್ಟಿದ್ದ. ಈ ಕುರಿತು ದೂರು ಕೇಳಿ ಬಂದ ಹಿನ್ನಲೆ ಪಿಎಸೈ ಅಮಾನತ್ತು ಮಾಡಲಾಗಿದೆ. ಸೋಮನಾಥ ಮಾನಸಿಕತೆಯಿಂದ ಬಳಲಿತ್ತಿದ್ದ. ಆತನ ಸಾವಿನಲ್ಲಿ ಸಂಶಯವಿಲ್ಲಾ ಎಂದು ಆತನ ತಾಯಿ ಹಾಗೂ ಪತ್ನಿ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಕುಖ್ಯಾತ ಮನೆಗಳ್ಳರ ಬಂಧನ:

ಬೆಂಗಳೂರು: ಸಂಪಿಗೆಹಳ್ಳಿ ಪೊಲೀಸರ ಕಾರ್ಯಾಚರಣೆಯಿಂದ ಕುಖ್ಯಾತ ಮನೆಗಳ್ಳರ ಬಂಧನ ಮಾಡಲಾಗಿದೆ. ಜಾನ್ ಪ್ರವೀಣ್, ಧನಲಕ್ಷ್ಮಿ, ಹಾಗೂ ಆನಂದಿ ಬಂಧಿತರು. ಮೇ 5ರಂದು ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು ಕಳ್ಳತನ ನಡೆಸಿದ್ದರು.
ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನ ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪೈಕಿ ಜಾನ್ ಪ್ರವೀಣ್ ಹಾಗೂ ಆನಂದಿ ದಂಪತಿ. ಕದ್ದ ಮಾಲನ್ನ ಭವರ್ ಲಾಲ್ ಎಂಬಾತನಿಗೆ ಆರೋಪಿಗಳು ನೀಡುತ್ತಿದ್ದರು. ಆರೋಪಿಗಳ ಮಾಹಿತಿಯ ಮೇರೆಗೆ ಭವರ್ ಲಾಲ್ ಸಹ ಬಂಧನ ಮಾಡಿದ್ದು, ಒಟ್ಟು 17.35 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣ ವಶಕ್ಕೆ ಪಡೆಯಲಾಗಿದೆ.