IPL betting: ಐಪಿಎಲ್ ಬೆಟ್ಟಿಂಗ್ ಭೂತಕ್ಕೆ ಯುವಕನೋರ್ವ ಬಲಿ, 11 ಸಾವಿರ ರೂಪಾಯಿಗೆ ಕೊಂದು ಹಾಕಿದರು
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆಯಲ್ಲಿ ಹೌದು ಬೆಟ್ಟಿಂಗ್ ಭೂತಕ್ಕೆ ಯುವಕನ ಬ್ರೂಟಲ್ ಮರ್ಡರ್ ಆಗಿದೆ. ಗೆದ್ದ ಹಣವನ್ನ ಕೇಳಿದಕ್ಕೆ ಕಟ್ಟಿಗೆ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಂದು ಹಾಕಿದ್ದಾರೆ...
ಐಪಿಎಲ್ ಬೆಟ್ಟಿಂಗ್ ಭೂತಕ್ಕೆ ( IPL betting) ಯುವಕನೋರ್ವ ಬಲಿಯಾಗಿದ್ದಾನೆ.. ಬೆಟ್ಟಿಂಗ್ ಹಣ ನೀಡುವ ವಿಚಾರಕ್ಕೆ ಶುರುವಾದ ಕಿರಿಕ್ ಕೊಲೆಯಲ್ಲಿ ಅಂತ್ಯವಾಗಿದೆ.. ಅಸಲಿಗೆ ಕೊಲೆಯಾದನಾದ್ರು ಯಾರು? ಐಪಿಎಲ್ ಬೆಟ್ಟಿಂಗ್ ದಂಧೆ ಮಂಡ್ಯದಲ್ಲಿ ಎಷ್ಟರ ಮಟ್ಟಿಗೆ ಹರಡಿದೆ? ಇದಕ್ಕೆ ಪೊಲೀಸ್ ಇಲಾಖೆ ಹೇಳುವುದಾದ್ರು ಏನು ಅಂತೀರಾ ಈ ಸ್ಟೋರಿ ನೋಡಿ.. ಬಿಕ್ಕಿ ಬಿಕ್ಕಿ ಅಳುತ್ತಿರೊ ಮಹಿಳೆಯರು.. ಅಯ್ಯೊ ಹೀಗಾಗ ಬಾರದಿತ್ತು ಎಂದು ರೋದಿಸುತ್ತಿರೊ ಗ್ರಾಮಸ್ಥರು..ತುಂಡಾಗಿ ಬಿದ್ದ ಕಟ್ಟಿಗೆಯ ಚೂರುಗಳು.. ಈ ಎಲ್ಲಾ ದೃಶ್ಯ ಕಣ್ಣಿಗೆ ಬಿದ್ದಿದ್ದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ (maddur, mandya) ಚಿಕ್ಕರಸಿನಕೆರೆಯಲ್ಲಿ ಹೌದು ಬೆಟ್ಟಿಂಗ್ ಭೂತಕ್ಕೆ ಯುವಕನ ಬ್ರೂಟಲ್ ಮರ್ಡರ್ ಆಗಿದೆ. ಗೆದ್ದ ಹಣವನ್ನ ಕೇಳಿದಕ್ಕೆ ಕಟ್ಟಿಗೆ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಂದು ಹಾಕಿದ್ದಾರೆ (murder). ಮೇಲಿನ ಫೋಟೊದಲ್ಲಿ ಕಾಣ್ತಾಯಿದ್ದಾನೆ ನೋಡಿ ಈತನೇ ಈ ಸ್ಟೋರಿಯ ದುರಂತ ನಾಯಕ. ಹೆಸರು ಪುನೀತ್ ಅಂತ, ಈತ ಎಳೆನೀರು ವ್ಯಾಪಾರಿ. ಗೆದ್ದ ಹಣವನ್ನ ಕೇಳಿದಕ್ಕೆ ದೊಣ್ಣೆ ಹಾಗೂ ಕಟ್ಟಿಗೆಯಿಂದ ಹೊಡೆದು ಕೊಂದು ಹಾಕಿದ್ದಾರೆ.
ಅಸಲಿಗೆ ಮೊನ್ನೆ ಸಂಜೆ ಎಳೆನೀರು ವ್ಯಾಪಾರ ಮುಗಿಸಿ ಕೊಂಡು ಮನೆಗೆ ಬಂದಿದ್ದ. ಸ್ನೇಹಿತ ದರ್ಶನ್ ಶರತ್ ಬಳಿ ಗುಜರಾತ್ ಹಾಗೂ ಚೆನ್ನೈ ತಂಡಗಳ ನಡುವಣ ಕ್ವಾಲಿಫಯರ್ ಮ್ಯಾಚ್ ಗೆ ಬೆಟ್ಟಿಂಗ್ ಕಟ್ಟಿದ್ದ ದರ್ಶನ್ ಚೆನ್ನೈ ಪರ ಬೆಟ್ ಕಟ್ಟಿದ್ದರೆ, ಇತ್ತ ಶರತ್ ಗುಜರಾತ್ ಟೈಟನ್ ಪರ ಬೆಟ್ಟಿಂಗ್ ಕಟ್ಟಿದ್ದ. ಕೊನೆಗೆ ಚೆನ್ನೈ ತಂಡ ಗೆದ್ದಿತ್ತು. ಹಾಗಾಗಿ ದರ್ಶನ್ ಗೆ ಶರತ್ 11 ಸಾವಿರ ಹಣ ನೀಡ್ಬೇಕಿತ್ತು.
ಆದ್ರೆ ಕೊಟ್ಟ ಮಾತಿನಂತೆ ಬೋರಾಪುರ ಗ್ರಾಮದ ಶರತ್ ಹಣ ನೀಡಿರಲಿಲ್ಲ. ಹಾಗಾಗಿ ಸಂಜೆ ದರ್ಶನ್ ಹಾಗೂ ಶರತ್ ನಡುವೆ ಕಿರಿಕ್ ಶುರುವಾಗಿತ್ತು. ಮಾತಿಗೆ ಮಾತು ಬೆಳೆದು ದರ್ಶನ್ ಗೆ ಶರತ್ ಹಲ್ಲೆ ನಡೆಸಿದ್ದ. ಈ ವಿಚಾರವನ್ನ ದರ್ಶನ್ ತನ್ನ ಗೆಳೆಯ ಪುನೀತ್ ಗೆ ತಿಳಿಸಿದ್ದ. ರೊಚ್ಚಿಗೆದ್ದ ಪುನೀತ್ ಶರತ್ ಬಳಿ ಹೋಗಿ ನ್ಯಾಯ ಪಂಚಾಯಿತಿ ನಡೆಸಿದರು. ಈ ವೇಳೆ ಮಾತಿಗೆ ಮಾತು ಬೆಳೆದು ಶರತ್ ಎಂಡ್ ಗ್ಯಾಂಗ್ ಪುನೀತ್ ತಲೆಗೆ ಕಟ್ಟಿಗೆ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದೆ. ಪರಿಣಾಮ ಪುನೀತ್ ಅಸುನೀಗಿದ್ದಾನೆ.
ಇನ್ನು ಹಲ್ಲೆಗೊಳಗಾದ ಪುನೀತ್ ನನ್ನು ಕೆ.ಎಂ. ದೊಡ್ಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯ್ತು. ಅಲ್ಲಿಂದ ಮುಂದೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನೆ ಮಾಡಲಾಯ್ತು. ಆದರೂ ಚಿಕಿತ್ಸೆ ಫಲಿಸದೆ ಪುನೀತ್ ಸಾವನ್ನಪ್ಪಿದ. ಸದ್ಯ ಪ್ರಕರಣ ದಾಖಲಿಸಿಕೊಂಡ ಮದ್ದೂರು ಪೊಲೀಸರು ಆರೋಪಿ ಶರತ್ ಹಾಗೂ ಆತನ ಸಹಚರರನ್ನ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಅದೇನೆ ಆಗ್ಲಿ ಐಪಿಎಲ್ ಎಂಬ ಪೆಡಂಭೂತ ಒಂದು ಜೀವವನ್ನ ಬಲಿ ತೆಗೆದು ಕೊಂಡಿದ್ದು ಮಾತ್ರ ನಿಜಕ್ಕೂ ದುರಂತವೇ.
ವರದಿ: ಸೂರಜ್ ಪ್ರಸಾದ್, ಟಿವಿ9, ಮಂಡ್ಯ ಚಿತ್ರದುರ್ಗ ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ