ಮಂಡ್ಯ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ (Jamia mosque) ಶೇ.100ರಷ್ಟು ಮಸೀದಿಯೇ ಎಂದು ಟಿಪ್ಪು ವಕ್ಫ್ ಬೋರ್ಡ್ ಉಪಾಧ್ಯಕ್ಷ ಆಸಿಫ್ ಸೇಠ್ ಹೇಳಿಕೆ ನೀಡಿದ್ದಾರೆ. ಜಾಮಿಯಾ ಮಸೀದಿ ಬಳಿ ಮಾತನಾಡಿದ ಅವರು, ಮಸೀದಿ ಇರುವ ಜಾಗ ವಕ್ಫ್ ಬೋರ್ಡ್ಗೆ ಸೇರಿದ್ದಾಗಿದೆ. ಇದರ ನಿರ್ವಹಣೆಯನ್ನ ಎಎಸ್ಐ ಮಾಡುತ್ತಿದೆ. ಟಿಪ್ಪು ವಕ್ಫ್ ಬೋರ್ಡ್ ಯಾವಾಗ ಸ್ಥಾಪನೆ ಆಯ್ತೋ ಅಂದಿನಿಂದ ಇದು ವಕ್ಫ್ ಬೋರ್ಡ್ ಆಸ್ತಿಯಾಗಿದೆ. ಟಪ್ಪು ಸ್ವಾತಂತ್ರ್ಯ ಹೋರಾಟಗಾರ ಎಂದು ಟಿಪ್ಪು ಜಾಗವನ್ನೆಲ್ಲ ಆರ್ಕ್ಯಾಲಜಿ ಡಿಪಾರ್ಟ್ಮೆಂಟ್ ಅವರು ನಿರ್ವಹಣೆಗೆ ಪಡೆದಿದೆ ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯ ತಮ್ಮ ತಲೆ ಮೇಲೆ ಚಪ್ಪಡಿ ಎಳೆದುಕೊಂಡಿದ್ದಾರೆ, ಜಾಮಿಯಾ ಮಸೀದಿಯಲ್ಲಿ ದೇಗುಲ ಇದ್ದುದು ನಿಜ: ಎಚ್ಡಿ ಕುಮಾರಸ್ವಾಮಿ
ಟಿಪ್ಪು ಒಬ್ಬ ಸಂತ, ಸಂತರ ಕೆಲಸ ಹಿಂದೂ, ಮುಸ್ಲಿಂ ಎನ್ನದೆ ಒಟ್ಟಿಗೆ ಬದುಕುವುದು. ಚಿಲ್ಲರೆ ಪ್ರಚಾರ ಪಡೆಯಲು ಇಂದು ಈ ರೀತಿ ಮಾಡಲಾಗುತ್ತಿದೆ. ಹಿಂದೂ ಸಂಸ್ಕೃತಿ ಇರುವ ಪಕ್ಕಾ ಹಿಂದೂಗಳು ಇಂಥ ಕೆಲಸ ಮಾಡುವುದಿಲ್ಲ. ಹಿಂದೂ ಮತ್ತು ಮುಸ್ಲಿಂ ಇಲ್ಲಿ ಎರಡು ಕಣ್ಣುಗಳು ಇದ್ದಂತೆ. ಸರ್ಕಾರದ ಮೇಲೆ ನಂಬಿಕೆ ಇದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ತಾರೆ. ಮಸೀದಿಗೆ ಭದ್ರತೆ ನೀಡುವ ಮೂಲಕ ಮುಖ್ಯಮಂತ್ರಿಗಳು ಹಾಗೂ ಪೊಲೀಸ್ ಇಲಾಖೆ ಒಳ್ಳೆಯ ಕೆಲಸ ಮಾಡಿದೆ ಎಂದರು.
ಇದನ್ನೂ ಓದಿ: ಜಾಮಿಯಾ ಮಸೀದಿ ವಿವಾದ: ಹಿಂದೂ ಪರ ಸಂಘಟನೆಗಳಿಂದ ಇಂದು ಶ್ರೀರಂಗಪಟ್ಟಣ ಚಲೋ
ಟಿಪ್ಪು ಸುಲ್ತಾನ್ ಕಾಲದಿಂದಲೂ ಇಲ್ಲಿ ಮದರಸ ನಡೆದುಕೊಂಡು ಬರ್ತಿದೆ. ಬ್ರಿಟಿಷರಿಗೆ ಮುಸ್ಲಿಮರನ್ನ ಕಂಡರೆ ಆಗಲ್ಲ. ಹೀಗಾಗಿ ಟಿಪ್ಪು ಕೊಂದ ಬಳಿಕ ಅವರಿಗೆ ಸಂತೋಷವಾಯ್ತು. ಮೈಸೂರು ಗೆಜಿಟಿಯರ್ನಲ್ಲಿ ಉಲ್ಲೇಖ ಆಗಿರೋದು ಬ್ರಿಟಿಷರ ಕಾಲದಲ್ಲಿ. ಬ್ರಿಟಿಷರ ಉಲ್ಲೇಖವನ್ನ ನಾವು ಒಪ್ಪುವುದಿಲ್ಲ. ಇಲ್ಲಿ ಮಸೀದಿ ಕಾಣುತ್ತಿದ್ದೆ. ಇದು ಶೇ.100ರಷ್ಟು ಮಸೀದಿಯೇ ಎಂದರು. ಅಲ್ಲದೆ, ಸಬ್ಕ ಸಾತ್ ಸಬ್ಕ ವಿಕಾಸ್ ಎಂದು ನಮ್ಮ ಮೋದಿ ಹೇಳಿದ್ದಾರೆ. ಅದರಂತೆ ನಾವೆಲ್ಲ ನಡೆಯಬೇಕು ಎಂದರು.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:56 pm, Sat, 4 June 22