ಮಂಡ್ಯ, ಸೆ.19: ಕೊಲೆ ಆರೋಪಿಗೆ (Murder Accused) ತಾಲೂಕು ಅಧ್ಯಕ್ಷ ಸ್ಥಾನ ನೀಡಿ ಕಸಾಪ ಎಡವಟ್ಟು ಮಾಡಿಕೊಂಡಿದೆ. ಕಸಾಪ ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷರಾಗಿ ರೌಡಿಶೀಟರ್ ದೀಪು ಕೊಲೆ ಕೇಸ್ನ 24ನೇ ಆರೋಪಿ ಎಂ.ಬಿ.ಕುಮಾರ್ ಆಯ್ಕೆ ಆಗಿದ್ದಾರೆ. ಶಾಸಕರ ಒತ್ತಡಕ್ಕೆ ಮಣಿದು ಎಂ.ಬಿ.ಕುಮಾರ್ಗೆ ಕಸಾಪ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎನ್ನಲಾಗುತ್ತಿದೆ. ಈ ಸಂಬಂಧ ಕನ್ನಡ ಸಾಹಿತ್ಯ ಪರಿಷತ್ (Kannada Sahitya Parishat) ನಡೆಗೆ ಸಾಹಿತ್ಯಾಸಕ್ತರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಡಿಸೆಂಬರ್‌ನಲ್ಲಿ ನಡೆಯುವ ನುಡಿಜಾತ್ರೆಗೆ ಭರದ ಸಿದ್ಧತೆ ನಡೆಯುತ್ತಿದೆ. ಈ ನಡುವೆ ಕೊಲೆ ಆರೋಪಿಗೆ ಅಧ್ಯಕ್ಷ ಸ್ಥಾನ ನೀಡಿ ಕಸಾಪ ಎಡವಟ್ಟು ಮಾಡಿಕೊಂಡಿದೆ. ಶಾಸಕನ ಒತ್ತಡಕ್ಕೆ ಮಣಿದ ಕನ್ನಡ ಸಾಹಿತ್ಯ ಪರಿಷತ್ ಕೊಲೆ ಆರೋಪಿಯನ್ನು ಕಸಾಪ ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷರಾಗಿ ಆಯ್ಕೆ ಮಾಡಿದೆ. 2015ರ ಜನವರಿ 3ರಂದು ರೌಡಿಶೀಟರ್ ದೀಪು ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿ ಎಂ.ಬಿ.ಕುಮಾರ್ 24ನೇ ಆರೋಪಿಯಾಗಿದ್ದರು. ಸದ್ಯ ಜಾಮೀನಿನ ಮೇಲೆ ಹೊರಗಿದ್ದು ವಿಚಾರಣೆ ಎದುರಿಸುತ್ತಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ಕಡಿದ ಹಾವಿನ ತಲೆ ಜಜ್ಜಿ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಕುಮಾರ್ ಹಿನ್ನೆಲೆ ಗೊತ್ತಿದ್ದರೂ ಆತನ ಪರವಾಗಿ ಶಾಸಕರು ಶಿಫಾರಸು ಮಾಡಿದ್ದಾರೆ. ಕುಮಾರ್ನನ್ನು ಶ್ರೀರಂಗಪಟ್ಟಣ ಕಸಾಪ ಅಧ್ಯಕ್ಷರನ್ನಾಗಿ ಮಾಡಲು ಶ್ರೀರಂಗಪಟ್ಟಣ ಕ್ಷೇತ್ರದ ‘ಕೈ’ ಶಾಸಕ ರಮೇಶ್ ಬಂಡಿಸಿದ್ದೇಗೌಡ ಪತ್ರ ಬರೆದಿದ್ದಾರೆ. ಶಾಸಕರ ಒತ್ತಡಕ್ಕೆ ಮಣಿದ ಕಸಾಪ ಎಂ.ಬಿ.ಕುಮಾರ್ಗೆ ತಾಲೂಕು ಅಧ್ಯಕ್ಷ ಸ್ಥಾನ ನೀಡಿದೆ. ಕನ್ನಡ ಸಾಹಿತ್ಯ ಪರಿಷತ್ ನಡೆಗೆ ಸಾಹಿತ್ಯಾಸಕ್ತರಿಂದ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ತಾಲೂಕು ಅಧ್ಯಕ್ಷ ಸ್ಥಾನದಿಂದ ಎಂ.ಬಿ.ಕುಮಾರ್ ಕೆಳಗಿಳಿಸಲು ಆಗ್ರಹ ಕೇಳಿ ಬಂದಿದೆ. ಸದ್ಯ ದಾಖಲೆ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತೆ ಎಂದು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:55 am, Thu, 19 September 24