ಮಂಡ್ಯದಲ್ಲಿ ಗ್ರಾ.ಪಂ. ಅಧ್ಯಕ್ಷ ಆಕಾಂಕ್ಷಿಯ ಕಿಡ್ನ್ಯಾಪ್ ಪ್ರಕರಣ: 7 ಜನರ ವಿರುದ್ಧ ಎಫ್​ಐಆರ್​ ದಾಖಲು

| Updated By: ಗಂಗಾಧರ​ ಬ. ಸಾಬೋಜಿ

Updated on: Jun 24, 2022 | 11:21 AM

ಅಧ್ಯಕ್ಷ ಆಗಬೇಕಿದ್ದವನ ಕಿಡ್ನಾಪ್ ಮಾಡಿ ಮತ್ತೊಬ್ಬ ತಾನೇ ಅಧ್ಯಕ್ಷನಾಗಿದ್ದಾನೆ. ಕಿಡ್ನಾಪ್ ಮಾಡಿ ಮೈಸೂರಿನ ಲಾಡ್ಜ್ ಒಂದರಲ್ಲಿ ಕೂಡಿಟ್ಟು, ಚುನಾವಣೆ ನಂತರ ಬಿಟ್ಟು ಕಳುಹಿಸಿರುವಂತಹ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ನಡೆದಿದೆ.

ಮಂಡ್ಯದಲ್ಲಿ ಗ್ರಾ.ಪಂ. ಅಧ್ಯಕ್ಷ ಆಕಾಂಕ್ಷಿಯ ಕಿಡ್ನ್ಯಾಪ್ ಪ್ರಕರಣ: 7 ಜನರ ವಿರುದ್ಧ ಎಫ್​ಐಆರ್​ ದಾಖಲು
ಮಂಡ್ಯದಲ್ಲಿ ಗ್ರಾ.ಪಂ. ಅಧ್ಯಕ್ಷ ಆಕಾಂಕ್ಷಿಯ ಕಿಡ್ನ್ಯಾಪ್ ಪ್ರಕರಣ
Follow us on

ಮಂಡ್ಯ: ಗ್ರಾಮ ಪಂಚಾಯತ್ ಅಧ್ಯಕ್ಷ ಆಕಾಂಕ್ಷಿಯ ಕಿಡ್ನ್ಯಾಪ್ (Kidnap) ಪ್ರಕರಣ ಹಿನ್ನೆಲೆ ಬೆಸಗರಹಳ್ಳಿ ಗ್ರಾ.ಪಂ. ಅಧ್ಯಕ್ಷ ಸೇರಿ 7 ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾ.ಪಂ. ಅಪಹರಿಸಿ ಮೈಸೂರಿನ ಲಾಡ್ಜ್​ವೊಂದರಲ್ಲಿ ಕೂಡಿಟ್ಟಿದ್ದ ಆರೋಪ ಮಾಡಲಾಗಿದೆ. ಜೂ.1ರಂದು ಗ್ರಾ.ಪಂ. ಅಧ್ಯಕ್ಷ ಸ್ಥಾನದ ಚುನಾವಣೆ ನಿಗದಿಯಾಗಿತ್ತು. ಮೇ 30ರಂದು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಚಲುವರಾಜು ನನ್ನು ಕಿಡ್ನ್ಯಾಪ್ ಮಾಡಲಾಗಿದೆ. ನಿನ್ನನ್ನೇ ಅಧ್ಯಕ್ಷರನ್ನಾಗಿ ಮಾಡುತ್ತೇವೆ ಅಂತಾ ನಂಬಿಸಿ ಅಪಹರಿಸಿ, ಮೈಸೂರಿಗೆ ಕರೆದೊಯ್ದು ಲಾಡ್ಜ್​ನಲ್ಲಿ ಕೂಡಿಟ್ಟು ಕೊಲೆ ಬೆದರಿಕೆ ಹಾಕಲಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ಧಮ್ಕಿ ಆರೋಪ ಮಾಡಲಾಗಿದೆ. ಚುನಾವಣೆ ಮುಗಿದ ಬಳಿಕ ಸತ್ಯ ಆ್ಯಂಡ್ ಟೀಂ ಚಲುವರಾಜುನನ್ನು ಬಿಟ್ಟು ಕಳುಹಿಸಿದೆ. ಈ ಬಗ್ಗೆ ಬೆಸಗರಹಳ್ಳಿ ಠಾಣೆ ಪೊಲೀಸರು, ಜಿಪಂ ಸಿಇಒಗೆ ದೂರು ನೀಡಲಾಗಿದ್ದು, ಚುನಾವಣಾ ಪ್ರಕ್ರಿಯೆ ರದ್ದುಪಡಿಸಿ ಮರು ಚುನಾವಣೆಗೆ ಮನವಿ ಮಾಡಲಾಗಿದೆ.

ಸಿನಿಮೀಯ ರೀತಿಯಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷನ ಕಿಡ್ನ್ಯಾಪ್

ರಾಯಚೂರು: ಸಿನಿಮೀಯ ರೀತಿಯಲ್ಲಿ ಗ್ರಾಂ. ಪಂಚಾಯತಿ ಮಾಜಿ ಅಧ್ಯಕ್ಷನ ಕಿಡ್ನಾಪ್ ಮಾಡಿರುವಂತಹ ಘಟನೆ ಇದೇ ಜೂನ್ 21 ರಾತ್ರಿ ಬೀಳಗಿ ಪಟ್ಟಣದ ಸಾಯಿ ಲಾಡ್ಜ್​ನಲ್ಲಿ ನಡೆದಿದೆ. ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ರೋಡಲಬಂಡಾ ಗ್ರಾಂ.ಪಂಚಾಯತಿಯ ಮಾಜಿ ಅಧ್ಯಕ್ಷನನ್ನ ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದಲ್ಲಿ ಕಿಡ್ನಾಪ್ ಮಾಡಲಾಗಿದೆ. ಅಮರೇಶ್ ಮೇಟಿ ಅಪಹರಣಕ್ಕೊಳಗಾದ ಮಾಜಿ‌ ಅಧ್ಯಕ್ಷ. ಕಿಡ್ನಾಪ್​ನ ಸಿಸಿ ಟಿವಿ ಎಕ್ಸ್ ಕ್ಲೂಸಿವ್ ದೃಶ್ಯಗಳು ಟಿವಿ9ಗೆ ಲಭ್ಯವಾಗಿವೆ. ಅಮರೇಶ್ ಮೇಟಿ ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ರಾಯಚೂರು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಬಸನಗೌಡ ಕಂಬಳಿ ವಿರುದ್ಧ ಆರೋಪ ಕೇಳಿಬಂದಿದೆ. ಮರಳು ಮಾಫಿಯಾ ಜನ ಹಾಗೂ ಬೀಳಗಿ ಕಾಂಗ್ರೆಸ್​ನವರಿಂದ ಅಪಹರಣ ಆರೋಪ ಮಾಡಲಾಗಿದೆ. ಬಸನಗೌಡ ಮತ್ತು ಸದಸ್ಯ ಲಕ್ಕಪ್ಪ ಎಂಬಾತನ ವಿರುದ್ಧ ಬೀಳಗಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇತ್ತ ಅಮರೇಶ್‌ ತಾಯಿಗೂ ಜೀವ ಬೆದರಿಕೆ ಆರೋಪ ಮಾಡಿದ್ದು, ಅಮರೇಶ್ ತಾಯಿ ಲಿಂಗಸುಗೂರು ಠಾಣೆ ಮೆಟ್ಟಿಲೇರಿದ್ದಾರೆ.

ಗೃಹಪ್ರವೇಶ ಸಮಾರಂಭದ ವೇಳೆ ಮನೆಗೆ ನುಗ್ಗಿದ ಮಂಗಳಮುಖಿಯರಿಂದ ಕಿರಿಕ್, ದಾಂಧಲೆ

ಬೆಂಗಳೂರು: ಮಂಗಳಮುಖಿಯರ ಬಗ್ಗೆ ಸಮಾಜ ಸದಾ ಒಂದು ಬಗೆಯ ಕನಿಕರ ಇಟ್ಟುಕೊಂಡೇ ನೋಡುತ್ತಿರುತ್ತದೆ. ಅವರ ದೇಖರೇಖಿ ಬಗ್ಗೆ ಸಮಾಜ, ಸರ್ಕಾರ ಆಗಾಗ್ಗೆ ಕಾಳಜಿ ವಹಿಸುತ್ತಿರುತ್ತದೆ. ಇದಕ್ಕೆ ಮಂಗಳಮುಖಿಯರ (transgender) ಕಡೆಯಿಂದಲೂ ಸೂಕ್ತ ಸ್ಪಂದನೆ ಸಿಗುತ್ತದೆ. ಉತ್ತಮ ಸಮಾಜಕ್ಕಾಗಿ ಕೈಲಾದ ಮಟ್ಟಿಗೆ ಒಳ್ಳೆಯದನ್ನು ಮಾಡಬೇಕು ಎಂದು ಮಂಗಳಮುಖಿಯರೂ ಹಂಬಲಿಸುತ್ತಾರೆ. ಆದರೆ… ಇವರಿಗೆ ಸಂಬಂಧಿಸಿದೆ ಕೆಲ ಪ್ರಕರಣಗಳು ನಡೆದಾಗ ಮನಸ್ಸು ಪಿಚ್ಚೆನ್ನಿಸುತ್ತದೆ. ಕೆಲ ಮಂಗಳಮುಖಿಯರು ಮಾಡುವ ಕೆಲಸಗಳಿಂದ ಆ ಸಮುದಾಯಕ್ಕೆ ಕೆಟ್ಟ ಹೆಸರು ಬರುವುದೂ ಉಂಟು. ಮಂಗಳಮುಖಿಯರ ಈ ನಡುವಳಿಕೆಗಳಿಂದ ಸಮಾಜ ಬೇಸರಿಸಿಕೊಳ್ಳುವುದೂ ಉಂಟು. ಅಲ್ಲಲ್ಲಿ ಕಿರಿಕ್, ವಂಚನೆ, ಮರಾಮೋಸ ನಡೆಯುವುದೂ ಉಂಟು. ಮಂಗಳಮುಖಿಯರಿಂದ ಅವರಿವರ ಹೆಸರಿನಲ್ಲಿ ಹಣ ದೋಚುವ ಪ್ರಯತ್ನಗಳೂ ನಡೆಯುತ್ತವೆ. ಇದರಿಂದ ಉಳಿದವರಿಗೆ ಕಳಂಕ ತಟ್ಟುತ್ತದೆ. ಬೆಂಗಳೂರಿನ ಕಲ್ಕೆರೆ ಚೆನ್ನಸಂದ್ರದಲ್ಲಿ ತಾಜಾ ಆಗಿ ಇದಕ್ಕೆ ಪುಷ್ಟಿ ನೀಡುವಂತಹ ಘಟನೆ ನಡೆದಿದೆ.

ಇದನ್ನೂ ಓದಿ: Kichcha Sudeep: ಕೆಲವೇ ಗಂಟೆಗಳಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಂಡ ‘ವಿಕ್ರಾಂತ್​ ರೋಣ’ ಟ್ರೇಲರ್​

Published On - 10:49 am, Fri, 24 June 22