ಮಂಡ್ಯದಲ್ಲಿ ಡಿಕೆ ಶಿವಕುಮಾರ್ ಕವನ ವಾಚನಕ್ಕೆ ವ್ಹಾ ವ್ಹಾ ಎಂದ ಜನ: ಬಿಜೆಪಿ, ಜೆಡಿಎಸ್​ಗೆ ಟಾಂಗ್​

ಹೆಚ್​.ಡಿ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಜೋಡೆತ್ತು ಎಂದು ಹೇಳಿದರು. ಹೆಚ್​​.ಡಿ.ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್​​ ಪಕ್ಷ. ಹೆಚ್​.ಡಿ.ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಇದೇ ಕಾಂಗ್ರೆಸ್​. ಡಿಕೆ ಶಿವಕುಮಾರ್​ ಮದ್ದೂರಿನ ಅಭ್ಯರ್ಥಿ ಎಂದು ತಿಳಿದು ನೀವು ಮತ ಹಾಕಬೇಕು ಎಂದು ಹೇಳಿದ್ದಾರೆ.

ಮಂಡ್ಯದಲ್ಲಿ ಡಿಕೆ ಶಿವಕುಮಾರ್ ಕವನ ವಾಚನಕ್ಕೆ ವ್ಹಾ ವ್ಹಾ ಎಂದ ಜನ: ಬಿಜೆಪಿ, ಜೆಡಿಎಸ್​ಗೆ ಟಾಂಗ್​
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​
Edited By: ವಿವೇಕ ಬಿರಾದಾರ

Updated on: Feb 11, 2023 | 6:04 PM

ಮಂಡ್ಯ: ಕಮಲ ಕೆರೆಯಲ್ಲಿ ಇದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈಗಳು ಅಧಿಕಾರದಲ್ಲಿ ಇದ್ದರೆ ಚೆಂದ ಎಂದು ಕವನ ವಾಚನ ಮಾಡುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್​ (Congress) ಅಧಿಕಾರಕ್ಕೆ ಬರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar)​ ಹೇಳಿದ್ದಾರೆ.

ಜಿಲ್ಲೆಯ ಮದ್ದೂರಿನಲ್ಲಿ ಇಂದು (ಫೆ.11) ಕಾಂಗ್ರೆಸ್​​​​ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು ಕಳೆದ ಬಾರಿ ಜೆಡಿಎಸ್​​ ಪಕ್ಷಕ್ಕೆ ಬಹಿರಂಗವಾಗಿ ಬೆಂಬಲ ನೀಡಿದ್ದೇವು. ಹಲವು ನಾಯಕರು ವಿರೋಧ ಮಾಡಿದರೂ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಪರ ನಿಂತೆ ಎಂದು ಹೇಳಿದರು.

ಹೆಚ್​.ಡಿ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಜೋಡೆತ್ತು ಎಂದು ಹೇಳಿದರು. ಹೆಚ್​​.ಡಿ.ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್​​ ಪಕ್ಷ. ಹೆಚ್​.ಡಿ.ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಇದೇ ಕಾಂಗ್ರೆಸ್​. ಡಿಕೆ ಶಿವಕುಮಾರ್​ ಮದ್ದೂರಿನ ಅಭ್ಯರ್ಥಿ ಎಂದು ತಿಳಿದು ನೀವು ಮತ ಹಾಕಬೇಕು ಎಂದು ಹೇಳಿದ್ದಾರೆ.

ದಯಮಾಡಿ ಅಭ್ಯರ್ಥಿ ಗೊಂದಲಕ್ಕೆ ತೆರೆ ಎಳೆಯಿರಿ

ಸಮಾವೇಶದಲ್ಲಿ ಕಾಂಗ್ರೆಸ್​ ಕಾರ್ಯಕರ್ತ, ಡಿಕೆ ಶಿವಕುಮಾರ್​ಗೆ ಮದ್ದೂರು ಕ್ಷೇತ್ರದ ಅಭ್ಯರ್ಥಿ ಯಾರು ಎಂದು ಪ್ರಶ್ನಿಸಿದ್ದಾನೆ. ದಯಮಾಡಿ ಅಭ್ಯರ್ಥಿ ಗೊಂದಲಕ್ಕೆ ತೆರೆ ಎಳೆಯಿರಿ ಎಂದಿದ್ದಾನೆ. ಇದಕ್ಕೆ ಉತ್ತರಿಸಿದ ಡಿ.ಕೆ ಶಿವಕುಮಾರ್ ಇವೆಲ್ಲಾ ಆಟ ಬಿಟ್ಟುಬಿಡಿ, ಮೊದಲು ಪಕ್ಷದ ಕೆಲಸ ಮಾಡಿಕೊಂಡು ಹೋಗಿ. ನಾನೇ ಅಭ್ಯರ್ಥಿ ಅಂತ ಅಂದುಕೊಳ್ಳಿ, ನಾವು ಕುರ್ಚಿ ಮಾರಿಕೊಳ್ಳುವುದಿಲ್ಲ. ಕಾಂಗ್ರೆಸ್ ಚಿಹ್ನೆ ನೋಡಿ ಈ ಬಾರಿ ಮತ ಹಾಕಿ, ವ್ಯಕ್ತಿಯನ್ನು ನೋಡಿ ಅಲ್ಲ ಎಂದು ಹೇಳಿದರು.

ಮತ್ತಷ್ಟು ರಾಜ್ಯ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:19 pm, Sat, 11 February 23

Loading...
Unable to load recommendations.
Follow Us