ಲೋಕಸಭಾ ಚುನಾವಣೆ: ಮಂಡ್ಯ ಕಣದಿಂದ ಹಿಂದೆ ಸರಿದ ನಿಖಿಲ್, ಯಾರಿಗೆ ಸಿಗಲಿದೆ ಮೈತ್ರಿಯ ಟಿಕೆಟ್, ಮಹತ್ವದ ಸಭೆ
ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಸ್ಪರ್ಧೆ ನಿರಾಕರಿಸಿದ ಹಿನ್ನೆಲೆ ಇಂದು ದೊಡ್ಡಗೌಡರ ಮನೆಯಲ್ಲಿ ಮಂಡ್ಯ ಕ್ಷೇತ್ರದ ಸಂಬಂಧ ಮಹತ್ವದ ಸಭೆ ನಡೆಸಲಾಗುತ್ತಿದೆ. ನಿಖಿಲ್ ಅವರನ್ನು ಮನವೊಲಿಸಿ ಸ್ಪರ್ಧಿಸುಂತೆ ತಿಳಿಸಿ. ಇಲ್ಲ ಕುಮಾರಸ್ವಾಮಿ ಅವರನ್ನು ನಿಲ್ಲಲು ಸೂಚನೆ ನೀಡಿ. ಇಬ್ಬರಲ್ಲಿ ಒಬ್ಬರು ಮಂಡ್ಯ ಅಭ್ಯರ್ಥಿಯಾಗಬೇಕು ಎಂದು ಹೆಚ್‌ಡಿಡಿ ಅವರಿಗ ಮನವಿ ಮಾಡಲಿದ್ದಾರೆ.
ಮಂಡ್ಯ, ಫೆ.13: ನಾನು ಮಂಡ್ಯ ಲೋಕಸಭಾ ಕ್ಷೇತ್ರದ (Mandya Loksabha Election) ಟಿಕೆಟ್ ಆಕಾಂಕ್ಷಿ ಅಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮಂಡ್ಯ ಲೋಕಸಭಾ ಅಖಾಡದಿಂದ ಹಿಂದೆ ಸರಿದಿದ್ದಾರೆ. ಹಾಗಿದ್ರೆ ಮಂಡ್ಯ ಕ್ಷೇತ್ರದಿಂದ ಮೈತ್ರಿಯ ಅಭ್ಯರ್ಥಿ ಯಾರು? ಎಂಬ ಪ್ರಶ್ನೆ ಎದ್ದಿದೆ. ಅಭ್ಯರ್ಥಿ ಆಯ್ಕೆ ಮತ್ತೆ ದಳಪತಿಗಳಿಗೆ ಗೊಂದಲವಾಗಿದೆ.
ಮಂಡ್ಯ ಲೋಕಸಭಾ ಅಖಾಡದಿಂದ ನಿಖಿಲ್ ಹಿಂದೆ ಸರಿದ ಹಿನ್ನಲೆ ಇದೀಗ ಹೆಚ್ಡಿ ಕುಮಾರಸ್ವಾಮಿ ಅವರ ಬಳಿಗೆ ನಾಯಕರು ಹೋಗಲಿದ್ದಾರೆ. ಕುಮಾರಸ್ವಾಮಿ ಅವರೇ ಅಭ್ಯರ್ಥಿ ಆಗಬೇಕೆಂದು ದಳಪತಿಗಳು ಒತ್ತಡ ಹಾಕಲಿದ್ದಾರೆ. ನೀವು ಬನ್ನಿ ಇಲ್ಲ ನಿಖಿಲ್ ಮನವೊಲಿಸಿ ಎಂದು ಕುಮಾರಸ್ವಾಮಿಗೆ ಮನವಿ ಮಾಡಲಿದ್ದಾರೆ. ಮಂಡ್ಯದಿಂದ ಮಾಜಿ ಸಚಿವರಾದ ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಮಾಜಿ ಶಾಸಕ ಸುರೇಶ್‌ಗೌಡ ಟಿಕೆಟ್ ಆಕಾಂಕ್ಷಿತರು. ಮೂವರಲ್ಲಿ ಒಬ್ಬರು ಸ್ಪರ್ಧೆ ಮಾಡಿ ನಾವು ಇರ್ತೀವಿ ಎಂದು ಕುಮಾರಸ್ವಾಮಿ ಅವರು ಹೇಳುವ ಸಾಧ್ಯತೆ ಇದೆ. ಇಲ್ಲ ನಿಖಿಲ್ ಮನವೊಲಿಸಲು ಪ್ರಯತ್ನ ಮಾಡುವ ಸಾಧ್ಯತೆ ಇದೆ. ಅಥವಾ ತಾವೇ ಮಂಡ್ಯ ಅಖಾಡಕ್ಕೆ ಪ್ರವೇಶ ಮಾಡ್ತಾರಾ ಎಂಬುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಚರ್ಚೆಗೆ ಸ್ಪಷ್ಟನೆ ನೀಡಿದ ನಿಖಿಲ್ ಕುಮಾರಸ್ವಾಮಿ
ಕ್ಷೇತ್ರ ಹಂಚಿಕೆಗೂ ಮುನ್ನವೇ ಮಂಡ್ಯ ಜೆಡಿಎಸ್ ಗೆ ಬಿಗ್ ಶಾಕ್
ಲೋಕಸಭೆಗೆ ಸ್ಪರ್ಧಿಸದಿರಲು ನಿಖಿಲ್ ಕುಮಾರಸ್ವಾಮಿ ನಿರ್ಧಾರ ಮಾಡಿದ್ದಾರೆ. ಮಂಡ್ಯ ಕ್ಷೇತ್ರದಿಂದ ಸ್ಪರ್ಧೆಗೆ ನಿರಾಕರಿಸಿದ್ದಾರೆ. ಯಾವುದೇ ಒತ್ತಡ ಬಂದರೂ ನಾನೂ ಸ್ಪರ್ಧಿಸಲ್ಲ ಎಂಬ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ನಿಖಿಲ್ ಸ್ಪರ್ಧೆ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಮಂಡ್ಯದಿಂದಲೇ ನಿಖಿಲ್ ಸ್ಪರ್ಧೆಗೆ ಪದೇ ಪದೇ ಒತ್ತಾಯಿಸುತ್ತಿದ್ದರು. ನಿಖಿಲ್ ಸ್ಪರ್ಧೆಗೆ ಒಪ್ಪದಿರಲು ಕಾರಣಗಳೇನು? ನಿಖಿಲ್ ನಿರ್ಧಾರದ ಹಿಂದೆ ರಾಜಕೀಯ ಭವಿಷ್ಯದ ಲೆಕ್ಕಾಚಾರ ಇದಿಯಾ? ಎನ್ನಲಾಗುತ್ತಿದೆ. ಈಗಾಗಲೇ ಎರಡು ಸೋಲು ಕಂಡಿರುವ ನಿಖಿಲ್‌ಗೆ ಮತ್ತೆ ಸೋಲಾದ್ರೆ ರಾಜಕೀಯ ಭವಿಷ್ಯ ಕಮರುವ ಚಿಂತೆ ಇದೆ. ನಿಖಿಲ್ ಸ್ಪರ್ಧೆಯೇ ವಿರೋಧಿಗಳಿಗೆ ಚುನಾವಣಾ ಅಸ್ತ್ರವಾಗುವ ಸಾಧ್ಯತೆ ಇದೆ. ಅವಕಾಶವಾದಿ ರಾಜಕಾರಣಿ ಎಂದು ಹಣೆಪಟ್ಟಿ ಕಟ್ಟುವ ಭೀತಿ ಇದೆ. ಮಂಡ್ಯ ಸೋಲಿನ ಬಳಿಕ ರಾಮನಗರ ಸೋಲಿನಿಂದ ಮತ್ತೆ ಮಂಡ್ಯಕ್ಕೆ ಬಂದ್ರು ಎಂದು ಅಪಪ್ರಚಾರ ಅಲ್ಲದೇ ಹೊರಗಡೆಯಿಂದ ಅಭ್ಯರ್ಥಿ ಕರೆತಂದರು ಎಂದು ಮತ್ತೆ ಕಳೆದ ಬಾರಿಯಂತೆ ಸ್ವಾಭಿಮಾನದ ಕಿಚ್ಚು ಹಚ್ಚುವ ಆತಂಕ ವಿದೆ.
ದೊಡ್ಡಗೌಡರ ಮನೆಯಲ್ಲಿ ಸಭೆ
ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಸ್ಪರ್ಧೆ ನಿರಾಕರಿಸಿದ ಹಿನ್ನೆಲೆ ಇಂದು ದೊಡ್ಡಗೌಡರ ಮನೆಯಲ್ಲಿ ಮಂಡ್ಯ ಕ್ಷೇತ್ರದ ಸಂಬಂಧ ಮಹತ್ವದ ಸಭೆ ನಡೆಸಲಾಗುತ್ತಿದೆ. ಹೆಚ್.ಡಿ.ದೇವೇಗೌಡರ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಮಂಡ್ಯ ಜಿಲ್ಲೆಯ ಜೆಡಿಎಸ್ ನಾಯಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ನಿಖಿಲ್ ಅಥವಾ ಕುಮಾರಸ್ವಾಮಿ ಅವರನ್ನು ಸ್ಪರ್ಧಿಸುವಂತೆ ಒತ್ತಾಯ ಮಾಡಲಿದ್ದಾರೆ. ಸದ್ಯ ಮಂಡ್ಯ ಸ್ಪರ್ಧೆಯನ್ನು ನಿಖಿಲ್ ನಿರಾಕರಿಸಿದ್ದು ಇಂದಿನ ಸಭೆಯಲ್ಲಿ ಜೆಡಿಎಸ್ ನಾಯಕರು ಈ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ. ನಿಖಿಲ್ ಅವರನ್ನು ಮನವೊಲಿಸಿ ಸ್ಪರ್ಧಿಸುಂತೆ ತಿಳಿಸಿ. ಇಲ್ಲ ಕುಮಾರಸ್ವಾಮಿ ಅವರನ್ನು ನಿಲ್ಲಲು ಸೂಚನೆ ನೀಡಿ. ಇಬ್ಬರಲ್ಲಿ ಒಬ್ಬರು ಮಂಡ್ಯ ಅಭ್ಯರ್ಥಿಯಾಗಬೇಕು ಎಂದು ಹೆಚ್‌ಡಿಡಿ ಅವರಿಗ ಮನವಿ ಮಾಡಲಿದ್ದಾರೆ. ಹೀಗಾಘಿ ಇಂದಿನ ಸಭೆ ಸಾಕಷ್ಟು ಮಹತ್ವ ಪಡೆದಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:59 am, Tue, 13 February 24