AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಾರೋಗ್ಯದಿಂದ ಬಳಲುತ್ತಿದ್ದ ಹೆಜ್ಜಾರ್ಲೆ ಪಕ್ಷಿ ಸಾವು; ಹೆಜ್ಜಾರ್ಲೆ ಪಕ್ಷಿಗಳ ಸಾವಿನಲ್ಲಿ ಗಣನಿಯ ಏರಿಕೆ

ಕರ್ನಾಟಕ ರಾಜ್ಯದಲ್ಲೇ ಕೊಕ್ಕರೆ ಬೆಳ್ಳೂರಿನಲ್ಲಿ ಮಾತ್ರ ಕಾಣ ಸಿಗುವ ವಿಶೇಷ ಥಳಿ ಪೆಲಿಕಾನ್ ಪಕ್ಷಿ/ ಹೆಜ್ಜಾರ್ಲೆ ಪಕ್ಷಿ ಸಾವಿನ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಹೆಜ್ಜಾರ್ಲೆ ಪಕ್ಷಿ ಸಾವು; ಹೆಜ್ಜಾರ್ಲೆ ಪಕ್ಷಿಗಳ ಸಾವಿನಲ್ಲಿ ಗಣನಿಯ ಏರಿಕೆ
ಅನಾರೋಗ್ಯದಿಂದ ಬಳಲುತ್ತಿದ್ದ ಹೆಜ್ಜಾರ್ಲೆ ಪಕ್ಷಿ ಸಾವು (ಫೋಟೋ: ಸಾಂದರ್ಭಿಕ ಚಿತ್ರ)
TV9 Web
| Edited By: |

Updated on:Jan 02, 2023 | 10:20 AM

Share

ಮಂಡ್ಯ: ಕರ್ನಾಟಕ ರಾಜ್ಯದಲ್ಲೇ ಕೊಕ್ಕರೆ ಬೆಳ್ಳೂರಿ (Kokkare Bellur)ನಲ್ಲಿ ಮಾತ್ರ ಕಾಣ ಸಿಗುವ ವಿಶೇಷ ತಳಿ ಪೆಲಿಕನ್ ಪಕ್ಷಿ/ ಹೆಜ್ಜಾರ್ಲೆ ಪಕ್ಷಿ (Hejjarle Bird) ಸಾವಿನ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಈ ಬಗ್ಗೆ ಅರಣ್ಯಾಧಿಕಾರಿಗಳಲ್ಲಿ ಆತಂಕ ಉಂಟು ಮಾಡಿದೆ. ಈ ನಡುವೆ ಅನಾರೋಗ್ಯದಿಂದ ಬಳಲುತ್ತಿದ್ದ ಹೆಜ್ಜಾರ್ಲೆ ಪಕ್ಷಿಯೊಂದು ಸಾವನ್ನಪ್ಪಿದೆ. ವಿದೇಶದಿಂದ ಬಂದ ಈ ಪಕ್ಷಿಗಳು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರಿನಲ್ಲಿ ನೆಲೆಸಿವೆ. ಈ ಪೈಕಿ ಒಂದು ಪಕ್ಷಿ ಸಾವನ್ನಪ್ಪಿದ್ದು, ಅಧಿಕಾರಿಗಳು ಮರಣೋತ್ತರ ಪರೀಕ್ಷೆಗಾಗಿ ಸಿದ್ಧತೆ ನಡೆಸಿದ್ದಾರೆ. ಅಲ್ಲದೆ ಪಕ್ಷಿಯ ಸಾವಿಗೆ ನಿಖರ ಕಾರಣ ತಿಳಿಯಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.

ಕರ್ನಾಟಕ ರಾಜ್ಯದಲ್ಲೇ ಕೊಕ್ಕರೆ ಬೆಳ್ಳೂರಿನಲ್ಲಿ ಮಾತ್ರ ಕಾಣ ಸಿಗುವ ವಿಶೇಷ ಥಳಿ ಪೆಲಿಕನ್ ಪಕ್ಷಿ ಅಥವಾ ಹೆಜ್ಜಾರ್ಲೆ ಪಕ್ಷಿ ಸಂತಾನೋತ್ಪತ್ತಿಗಾಗಿ ಕೊಕ್ಕರೆ ಬೆಳ್ಳೂರಿಗೆ ಬಂದಿತ್ತು. ಮಲೇಷಿಯಾ, ಆಸ್ಟ್ರೇಲಿಯಾ ದೇಶಗಳಲ್ಲಿ ಕಾಣ ಸಿಗುವ ಈ ಪಕ್ಷಿಗೆ ಅರಣ್ಯಾಧಿಕಾರಿಗಳು ಯಶಸ್ವಿಯಾಗಿ ಜಿಪಿಎಸ್ ಅಳವಡಿಸಿದ್ದರು. ಆದರೆ, ದಿನದಿಂದ ದಿನಕ್ಕೆ ಹೆಜ್ಜಾರ್ಲೆ ಪಕ್ಷಿಗಳ ಸಾವಿನಲ್ಲಿ ಗಣನಿಯವಾಗಿ ಏರಿಕೆ ಕಂಡಿದ್ದು, ಪಕ್ಷಿಗಳ ಸಾವಿನಿಂದ ಅಧಿಕಾರಿಗಳು ಕಂಗಾಲಾಗಿರುವುದಂತ ಸತ್ಯ.

Hejjarle bird

ಹೆಜ್ಜಾರ್ಲೆ ಪಕ್ಷಿ ಸಾವು

ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಪಕ್ಷಿಧಾಮವು  ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಿದೆ. ಪೆಲಿಕಾನ್ ಹಕ್ಕಿಗೆ ಜಿಪಿಎಸ್ ಟ್ರ್ಯಾಕರ್ ಅಳವಡಿಕೆ ಮೂಲಕ ಈ ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಿತ್ತು. ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಹೆಜ್ಜಾರ್ಲೆ ಪಕ್ಷಿಗೆ ಟ್ರ್ಯಾಕರ್ ಅಳವಡಿಕೆ ಮಾಡಲಾಗಿದ್ದು, ಹೆಜ್ಜಾರ್ಲೆ ಪಕ್ಷಿ ಯಾವ ದೇಶಕ್ಕೆ ಸಂಚರಿಸುತ್ತೆ ಎಲ್ಲಿ ತಂಗುತ್ತೆ ಅದರ ಚಟುವಟಿಕೆಗಳ ಇಂಚಿಂಚೂ ಮಾಹಿತಿಯ ಟ್ರ್ಯಾಕಿಂಗ್ ಮಾಡಲು ಇದು ಸಹಕಾರಿಯಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:18 am, Mon, 2 January 23