ಮಂಡ್ಯ: ಕರ್ನಾಟಕ ವಿಧಾನ ಸಭಾ ಚುನಾವಣೆಗೆ(Karnataka Assembly Elections 2023) ರಾಜ್ಯದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಸೆಣೆಸಾಡುತ್ತಿದೆ. ಸದ್ಯ ರಾಜ್ಯದಲ್ಲಿ ತಣ್ಣಗಾಗಿದ್ದ ಟಿಪ್ಪು ಸುಲ್ತಾನ್(Tipu Sultan) ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಮಂಡ್ಯ ಬಿಜೆಪಿ ಯುವ ಮೋರ್ಚಾದಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಟಿಪ್ಪು ವಂಶಸ್ಥರು ಬ್ರಿಟಿಷರಿಂದ ಪಿಂಚಣಿ ಪಡೆಯುತ್ತಿದ್ದ ದಾಖಲಾತಿಯನ್ನು ಬಿಜೆಪಿ ಯುವ ಮೋರ್ಚಾ ಬಿಡುಗಡೆ ಮಾಡಿದೆ.
ಟಿಪ್ಪು ಸುಲ್ತಾನ್ ವಿವಾದ ಬಗೆ ಹರಿಯುವಂತದಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ಅದು ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಿದೆ. ರಾಜ್ಯದಲ್ಲಿ ಕೋಮು ಸಂಘರ್ಷದ ವಾತಾವರಣ ಸೃಷ್ಟಿಸುತ್ತಿದೆ. ಈಗ ಮಂಡ್ಯ ಬಿಜೆಪಿ ಯುವ ಮೋರ್ಚಾ ಟಿಪ್ಪು ಸಲ್ತಾನ್ ಸಂಬಂಧ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ. ಈ ಮೂಲಕ ಟಿಪ್ಪುನನ್ನ ಹೊಡೆದು ಕೊಂದಿದ್ದ ಉರಿ ಗೌಡ ದೊಡ್ಡ ನಂಜೇಗೌಡ ಮಹಾದ್ವಾರ ನಿರ್ಮಾಣ ಶತ ಸಿದ್ದ ಎಂಬ ಸಂದೇಶ ಸಾರಿದೆ.
ಇದನ್ನೂ ಓದಿ: ಕೋಲಾರ: ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನ, ಕಿಡಿಗೇಡಿಗಳ ಸಂದೇಶಕ್ಕೆ ಕಿವಿಗೊಡದಂತೆ ಸಮಾಜಿಕ ಜಾಲತಾಣಗಳಲ್ಲಿ ಪೊಲೀಸರ ಮನವಿ
ಟಿಪ್ಪು ಸುಲ್ತಾನ್ನ 12 ನೇ ಪುತ್ರ ಗುಲಾಮ್ ಮೊಹಮ್ಮದ್ ಬ್ರಿಟಿಷರಿಗೆ ಬರೆದ ಪತ್ರವನ್ನು ಬಿಜೆಪಿ ಯುವ ಮೋರ್ಚಾ ಬಿಡುಗಡೆ ಮಾಡಿದೆ. ಈಸ್ಟ್ ಇಂಡಿಯಾ ಕಂಪನಿಯ ದೊರೆ ವಿಕ್ಟೋರಿಯಾಗೆ ಗುಲಾಮ್ ಮೊಹಮ್ಮದ್ ಬರೆಯಲಾಗಿದೆ ಎಂಬ ಪತ್ರವನ್ನು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಟಿಪ್ಪು ವಂಶಸ್ಥರು 60 ಕ್ಕೂ ಹೆಚ್ಚು ವರ್ಷಗಳ ಕಾಲ ಪಿಂಚಣಿ ಪಡೆದಿರುವ ಸಾಕ್ಷ್ಯ ಬಹಿರಂಗವಾಗಿದೆ. ಟಿಪ್ಪು ತನ್ನ ರಾಜ್ಯವನ್ನ ಉಳಿಸಿಕೊಳ್ಳಲು ಸೆಣೆಸಾಡಿದ ಹೊರತು ಸ್ವತಂತ್ರಕ್ಕಾಗಿ ಅಲ್ಲ ಎಂದು ಪತ್ರದಲ್ಲಿ ರಿವೀಲ್ ಆಗಿದೆ. ಮುಂಬರುವ ದಿನಗಳಲ್ಲಿ ಟಿಪ್ಪುವನ್ನ ಹೊಡೆದು ಕೊಂದಿದ್ದ ಉರಿ ಗೌಡ ದೊಡ್ಡ ನಂಜೇಗೌಡ ಮಹಾದ್ವಾರ ನಿರ್ಮಾಣ ಶತ ಸಿದ್ದ.
ಪ್ರಧಾನಿ ಆಗಮನ ಹಿನ್ನಲೆ ಉರಿ ಗೌಡ ದೊಡ್ಡ ನಂಜೇಗೌಡ ಮಹಾದ್ವಾರ ನಿರ್ಮಾಣವಾಗಿತ್ತು. ಮಹಾ ದ್ವಾರವನ್ನ ತೆರವು ಗೊಳಿಸದಿದ್ದರೆ ರೋಡ್ ಶೋ ವೇಳೆ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಪ್ರಗತಿಪರರು ತಿಳಿಸಿದ್ಧರು. ಈ ಹಿನ್ನಲೆ ಜಿಲ್ಲಾಡಳಿತ ಮಹಾದ್ವಾರವನ್ನ ತೆರವು ಗೊಳಿಸಿ ಬಾಲಗಂಗಾಧರನಾಥ ಸ್ವಾಮಿಗಳ ಹೆಸರನ್ನಿಟ್ಟಿದ್ದರು. ಮಂಡ್ಯದಲ್ಲಿ ಮುಂಬರುವ ದಿನದಲ್ಲಿ ಶಾಶ್ವತ ಮಹಾದ್ವಾರ ನಿರ್ಮಾಣ ಮಾಡುವುದಾಗಿ ಬಿಜೆಪಿ ಯುವ ಮೋರ್ಚಾ ಘೋಷಣೆ ಮಾಡಿದೆ. ಮಂಡ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಿಟಿ ಮಂಜುನಾಥ್ ನೇತೃತ್ವದಲ್ಲೇ ಮಹಾದ್ವಾರ ನಿರ್ಮಾಣವಾಗಲಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ