ಮಂಡ್ಯ: ಕಾವೇರಿ ನದಿಗೆ ಈಜಲು ಹೋಗಿದ್ದ ಇಬ್ಬರು ಯುವಕರು ಸಾವು; ಮುಗಿಲು ಮುಟ್ಟಿದ ತಾಯಿಯ ಆಕ್ರಂದನ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ (Srirangapatna)ದ ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಇಂದು(ಜೂ.13) ನಡೆದಿದೆ. ಘಟನೆ ಕುರಿತು ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಕ್ಕಳನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
ಮಂಡ್ಯ, ಜೂ.13: ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ (Srirangapatna)ದಲ್ಲಿ ನಡೆದಿದೆ. ಬೆಂಗಳೂರು ಮೂಲದ ವಿಶಾಲ್(19) ಹಾಗೂ ತಮಿಳುನಾಡು ಮೂಲದ ರೋಹನ್ (18) ಮೃತ ಯುವಕರು. ಮೈಸೂರಿನ ಅಜ್ಜಿ ಮನೆಗೆ ಪೋಷಕರೊಂದಿಗೆ ಬಂದಿದ್ದ ಯುವಕರು, ಇಂದು(ಜೂ.13) ಶ್ರೀರಂಗಪಟ್ಟಣದ ನಿಮಿಷಾಂಭ ದೇವಿ ದರ್ಶನಕ್ಕಾಗಿ ಕುಟುಂಬ ಸಮೇತ ಬಂದಿದ್ದರು.
ಮುಗಿಲು ಮುಟ್ಟಿದ ತಾಯಿಯ ಆಕ್ರಂದನ
ಈ ವೇಳೆ ಇತ್ತ ಈಜಲು ಕಾವೇರಿ ನದಿಗಿಳಿದಿದ್ದ ಇಬ್ಬರು ಯುವಕರು ಈಜು ಬಾರದೇ ಸಾವನ್ನಪ್ಪಿದ್ದಾರೆ. ಇನ್ನು ಮಗನನ್ನ ಕಳೆದುಕೊಂಡ ತಾಯಿ ರೋಧನೆ ಮುಗಿಲು ಮುಟ್ಟಿದ್ದು, ಕಾವೇರಿ ನದಿಗಿಳಿದು ಮಕ್ಕಳಿಗಾಗಿ ತಾಯಿ ಕೂಡ ಹುಡುಕಾಟ ನಡೆಸಿದ್ದರು. ‘ನನಗೆ ನನ್ನ ಮಗ ಬೇಕು ಎಂದು ಕಣ್ಣೀರಾಕಿ ಹುಡುಕಾಟ ಮಾಡುತ್ತಿದ್ದಂತೆ ಸ್ಥಳೀಯರು ಸೇರಿಕೊಂಡು ನದಿಯಿಂದ ತಾಯಿಯನ್ನ ಹೊರತಂದಿದ್ದಾರೆ. ಬಳಿಕ ಮೃತರ ಶವ ಮೇಲೆತ್ತಿದ್ದು, ಘಟನೆ ಕುರಿತು ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕೆಸರಿನಲ್ಲಿ ಮುಳುಗಿ ಸಾವು ಬದುಕಿನ ನಡುವೆ ಹೋರಾಡ್ತಿದ್ದ ವ್ಯಕ್ತಿ ರಕ್ಷಿಸಿದ ಪೊಲೀಸರು
ಪಾರ್ಕಿಂಗ್ ವಿಚಾರಕ್ಕೆ ಇಬ್ಬರು ಹಿರಿಯ ವ್ಯಕ್ತಿಗಳ ಮಧ್ಯೆ ಗಲಾಟೆ; ಚಾಕು ಇರಿತ
ದಕ್ಷಿಣ ಕನ್ನಡ: ಜಿಲ್ಲೆಯ ಪುತ್ತೂರು ತಾಲೂಕಿನ ಕೋರ್ಟ್ ರಸ್ತೆಯಲ್ಲಿ ಪಾರ್ಕಿಂಗ್ ವಿಚಾರಕ್ಕೆ ಹಿರಿಯ ವ್ಯಕ್ತಿಗಳಾದ ಗುಣಶೇಖರ್ ಹಾಗೂ ಸದಾಶಿವ ಪೈ ನಡುವೆ ಜಗಳವಾಗಿದ್ದು, ಇದು ತಾರಕಕ್ಕೇರಿ ಸದಾಶಿವ ಪೈಯವರ ಕೈಗೆ ಗುಣಶೇಖರ್ ಚಾಕು ಇರಿದಿದ್ದಾರೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಗಲಾಟೆ ಬಳಿಕ ಗುಣಶೇಖರ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:32 pm, Thu, 13 June 24