ಕೋಟಿ ಕೋಟಿ ಹಣ ನೀಡಿ 13 ವರ್ಷ ಕಳೆದರೂ ಸಿಕ್ಕಿಲ್ಲ ವಸತಿ ಭಾಗ್ಯ; ಅಂಬಿ ಆಪ್ತನ ವಿರುದ್ಧ ಪೊಲೀಸ್ ನಿವೃತ್ತ ಸಂಘದಿಂದ ಗಂಭೀರ ಆರೋಪ
2009ರಲ್ಲಿ ಮಂಡ್ಯ ಪೊಲೀಸ್ ಪತ್ತಿನ ಗೃಹ ನಿರ್ಮಾಣ ಸಹಕಾರ ಸಂಘದವರು ಅಮರಾವತಿ ಚಂದ್ರಶೇಖರ್ ಬಳಿ ವ್ಯವಹಾರ ಮಾಡಿದ್ರು. 4.5 ಲಕ್ಷಕ್ಕೆ 30 ಬೈ 40 ನಿವೇಶನ ನೀಡುತ್ತೆನೆಂದು 507 ಮಂದಿ ಬಳಿ ಚಂದ್ರಶೇಖರ್ ಹಣ ಪಡೆದಿದ್ದಾರೆ. 22 ಕೋಟಿ 5 ಲಕ್ಷ ಕೋಟಿ ಪ್ರಾಜೆಕ್ಟ್ ನಲ್ಲಿ, ಈಗಾಗ್ಲೆ 18.88 ಕೋಟಿ ಹಣ ಸಂದಾಯವಾಗಿದೆ.
ಮಂಡ್ಯ: ಕಾನೂನು ಸುವ್ಯವಸ್ಥೆ ಧಕ್ಕೆಯಾಗದಂತೆ ಲಾ ಎಂಡ್ ಆರ್ಡರ್ ಕಾಪಾಡೋರು ಪೊಲೀಸರು(Police). ಆದ್ರೆ ಅಂತ ಪೊಲೀಸರಿಗೆ ಈಗ ಮೋಸವಾಗಿದೆ. ಜೀವಮಾನವಿಡಿ ಕೂಡಿಟ್ಟ ಹಣವನ್ನ ಕೊಟ್ಟು ನಿವೇಷನ ಕೊಂಡು ಕೊಳ್ಳುವ ಸಂತದಲ್ಲಿದ್ದವರಿಗೆ ಮಹಾ ವಂಚನೆಯಾಗಿದೆ. ಮನೆ ಕಟ್ಟಿ ನೋಡು ಮದ್ವೆ ಮಾಡಿ ನೋಡು ಅನ್ನೋ ಮಾತಿದೆ. ಪ್ರತಿಯೊಬ್ಬರಿಗೂ ಸ್ವಂತ ಮನೆ ಕಟ್ಟಬೇಕು ಅನ್ನೋ ಆಸೆ ಇರುತ್ತೆ. ಇದೇ ರೀತಿಯ ಆಸೆ ಮಂಡ್ಯ ಪೊಲೀಸರಿಗೂ ಸಹ ಇತ್ತು. ಪೊಲೀಸ್ ಗೃಹ ನಿರ್ಮಾಣ ಸಂಘದವರು ಅಮರಾವತಿ ಡೆವಲಪರ್ಸ್ ಬಳಿ ಹಣ ಕೊಟ್ಟು ನಿವೇಶನ ಕೊಂಡು ಕೊಳ್ಳುವ ಪ್ಲಾನ್ ಮಾಡಿದ್ರು. ಆದ್ರೆ ಹಣ ಕೊಟ್ಟು ಬರೋಬ್ಬರಿ 12 ರಿಂದ 13 ವರ್ಷಗಳು ಕಳೆದ್ರು ನಿವೇಶನ ಮಾತ್ರ ಇನ್ನೂ ಸಿಕ್ಕಿಲ್ಲ.
ಹಣ ಪಡೆದು ನಿವೇಶನ ನೀಡದೆ ವಂಚಿಸಿದ್ರಾ ಅಂಬಿ ಆಪ್ತ
ರಿಟೈಡ್ಮೆಂಟ್ ಲೈಫ್ ಅಲ್ಲಿ ಮನೆ ಮಾಡ್ಕೊಂಡು ಆರಾಮಾಗಿ ಇರಬೇಕು ಅಂದುಕೊಂಡ ಪೊಲೀಸರು ನಿದ್ದೆಗೆಡುವಂತಾಗಿದೆ. ಅಂದ್ಹಾಗೆ ನಿವೇಶನದ ಆಸೆ ಹೊಂದಿದವ್ರಿಗೆ ಮೋಸ ಮಾಡಿರುವ ಆರೋಪ ಎದುರಸ್ತಿರೋದು ಬೇರಾರು ಅಲ್ಲ. ನಟ ಅಂಬರೀಶ್ ಆಪ್ತನೆಂದು ಖ್ಯಾತರಾಗಿರುವ ಕಾಂಗ್ರೆಸ್ ಮುಖಂಡ ಅಮರಾವತಿ ಚಂದ್ರಶೇಖರ್. ಇವರು ಅಮರಾವತಿ ಡೆವಲಪರ್ಸ್ ಹೆಸ್ರಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸ್ತಿದ್ದಾರೆ. 2009ರಲ್ಲಿ ಮಂಡ್ಯ ಪೊಲೀಸ್ ಪತ್ತಿನ ಗೃಹ ನಿರ್ಮಾಣ ಸಹಕಾರ ಸಂಘದವರು ಅಮರಾವತಿ ಚಂದ್ರಶೇಖರ್ ಬಳಿ ವ್ಯವಹಾರ ಮಾಡಿದ್ರು. 4.5 ಲಕ್ಷಕ್ಕೆ 30 ಬೈ 40 ನಿವೇಶನ ನೀಡುತ್ತೆನೆಂದು 507 ಮಂದಿ ಬಳಿ ಚಂದ್ರಶೇಖರ್ ಹಣ ಪಡೆದಿದ್ದಾರೆ. 22 ಕೋಟಿ 5 ಲಕ್ಷ ಕೋಟಿ ಪ್ರಾಜೆಕ್ಟ್ ನಲ್ಲಿ, ಈಗಾಗ್ಲೆ 18.88 ಕೋಟಿ ಹಣ ಸಂದಾಯವಾಗಿದೆ. 27 ಎಕರೆ ಜಾಗದಲ್ಲಿ 17 ಎಕರೆಯನ್ನ ಪೊಲೀಸರ ನಿವೇಶನಕ್ಕೆ ಮೀಸಲಿಡಲಾಗಿದೆ. ಆದ್ರೆ 13 ವರ್ಷ ಕಳೆದ್ರು ಹಣ ಕಟ್ಟಿದವರಿಗೆ ಇನ್ನು ನಿವೇಶನ ಮಾತ್ರ ಸಿಕ್ಕಿಲ್ಲ.
ಇದನ್ನೂ ಓದಿ: ಮಂಡ್ಯ: ವಸತಿ ನೀಡುವುದಾಗಿ ವಂಚನೆ ಆರೋಪ; ನಿವೃತ್ತ ಪೊಲೀಸ್ ಅಧಿಕಾರಿಗಳಿಂದ ಪ್ರತಿಭಟನೆ
ಈ ವಿಷಯವಾಗಿ ಪೊಲೀಸರು ವಿಚಾರಿಸಿದ್ರೆ ಇವತ್ತು ಕೊಡ್ತಿನಿ ನಾಳೆ ಕೊಡ್ತೀನಿ ಅಂತ ಪೊಲೀಸರಿಗೆ ಯಾಮಾರಿಸುತ್ತಲೇ ಇದ್ದಾರೆ. ಇದರಿಂದ ರೋಸಿ ಹೋಗಿರೋ ಪೊಲೀಸರು, ಅಧಿಕಾರಿಗಳು ಮೊರೆ ಹೋಗಿದ್ದಾರೆ. ವಿಪರ್ಯಾಸ ಅಂದ್ರೆ ಹಣ ಕೊಟ್ಟಿರೋರ ಪೈಕಿ ಬಹುತೇಕರು ನಿವೃತ್ತಿಯಾಗಿದ್ರೆ ಇನ್ನು ಕೆಲವರು ಮೃತಪಟ್ಟಿದ್ದಾರೆ.
ಅಮರಾವತಿ ಚಂದ್ರಶೇಖರ್ ಸರಿಯಾಗಿ ರೆಸ್ಪಾನ್ಸ್ ಮಾಡ್ತಿಲ್ಲ. ಇವತ್ತು ನಾಳೆ ಎಂದುಕೊಂಡೆ 13 ವರ್ಷ ಕಳೆದಿದ್ದಾರೆ. ಸಾಲದ್ದಕ್ಕೆ ಪೊಲೀಸರಿಗಾಗಿ ಕಾಯ್ದಿರಿಸಿರುವ ಜಮೀನಿನ ಮೇಲೆಯೂ 5 ಕೋಟಿ ಸಾಲ ಪಡೆದಿರೋ ಆರೋಪ ಕೇಳಿ ಬಂದಿದೆ.ಅದೇನೆ ಹೇಳಿ ಹಣ ಪಡೆದು 13 ವರ್ಷಗಳಿಂದ ಯಾಮಾರಿಸಿಕೊಂಡು ಬಂದಿದ್ದಾರೆ. ಸದ್ಯ ನಿವೃತ್ತ ಪೊಲೀಸ್ ಅಧಿಕಾರಿಗಳು ಕಾನೂನಿನ ಮೊರೆ ಹೋಗಲು ಚಿಂತನೆ ನಡೆಸುತ್ತಿದ್ದು ಮುಂದೆ ಏನಾಗಲಿದೆಯೋ ಕಾದು ನೋಡ್ಬೇಕಿದೆ.
ವರದಿ: ಸೂರಜ್ ಪ್ರಸಾದ್, TV9
ಮತ್ತಷ್ಟು ಮಂಡ್ಯ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ