‘ಗಿಡ ನೆಡು-ಮರ ಮಾಡು’ ಆಂದೋಲನದಲ್ಲಿ ನೀವೂ ಭಾಗಿಯಾಗಿ..

|

Updated on: Jun 05, 2020 | 5:31 PM

ಮಂಡ್ಯ ಜಿಲ್ಲೆಯಲ್ಲಿ ಕಳೆದ ವರ್ಷ ಆರಂಭವಾದ ‘ಗಿಡ ನೆಡು ಮರ ಮಾಡು’ ಹೆಸರಿನ ಆಂದೋಲನ ಸೋಷಿಯಲ್ ಮೀಡಿಯಾದಲ್ಲಿ‌ ಚಾಲೆಂಜ್ ರೂಪದಲ್ಲಿ ಸಖತ್ ಸದ್ದು‌ ಮಾಡ್ತಿದೆ.‌ ಈ ರೀತಿಯ ವಿಡಿಯೋ ನೋಡಿದ ಎಲ್ಲರು ಫಿದಾ ಆಗ್ತಿದ್ದು, ಚಾಲೆಂಜ್ ಸ್ವೀಕರಿಸುವ ಮೂಲಕ ಹಸಿರೀಕರಣದ ಹೋರಾಟದಲ್ಲಿ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಆಂದೋಲನದಲ್ಲಿ ಭಾಗಿಯಾಗ್ತಿದ್ದಾರೆ. ಸೋಷಿಯಲ್ ಮೀಡಿಯಾ ದಲ್ಲಿ ಕೆಲಸಕ್ಕೆ ಬಾರದ ಅದೆಷ್ಟು ಚಾಲೆಂಜ್ ಗಳ ನಡುವೆ ಮಂಡ್ಯ ಜಿಲ್ಲೆಯಿಂದ ಹರಿಯ ಬಿಟ್ಟಿರೋ ಈ ಗಿಡ ನೆಡು ಮರ ಮಾಡು […]

‘ಗಿಡ ನೆಡು-ಮರ ಮಾಡು’ ಆಂದೋಲನದಲ್ಲಿ ನೀವೂ ಭಾಗಿಯಾಗಿ..
Follow us on

ಮಂಡ್ಯ ಜಿಲ್ಲೆಯಲ್ಲಿ ಕಳೆದ ವರ್ಷ ಆರಂಭವಾದ ‘ಗಿಡ ನೆಡು ಮರ ಮಾಡು’ ಹೆಸರಿನ ಆಂದೋಲನ ಸೋಷಿಯಲ್ ಮೀಡಿಯಾದಲ್ಲಿ‌ ಚಾಲೆಂಜ್ ರೂಪದಲ್ಲಿ ಸಖತ್ ಸದ್ದು‌ ಮಾಡ್ತಿದೆ.‌ ಈ ರೀತಿಯ ವಿಡಿಯೋ ನೋಡಿದ ಎಲ್ಲರು ಫಿದಾ ಆಗ್ತಿದ್ದು, ಚಾಲೆಂಜ್ ಸ್ವೀಕರಿಸುವ ಮೂಲಕ ಹಸಿರೀಕರಣದ ಹೋರಾಟದಲ್ಲಿ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಆಂದೋಲನದಲ್ಲಿ ಭಾಗಿಯಾಗ್ತಿದ್ದಾರೆ.

ಸೋಷಿಯಲ್ ಮೀಡಿಯಾ ದಲ್ಲಿ ಕೆಲಸಕ್ಕೆ ಬಾರದ ಅದೆಷ್ಟು ಚಾಲೆಂಜ್ ಗಳ ನಡುವೆ ಮಂಡ್ಯ ಜಿಲ್ಲೆಯಿಂದ ಹರಿಯ ಬಿಟ್ಟಿರೋ ಈ ಗಿಡ ನೆಡು ಮರ ಮಾಡು ಆಂದೋಲನಕ್ಕೆ ದೇಶ ವಿದೇಶದಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ಯವಾಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕಳೆದ ವರ್ಷ ಜಿಲ್ಲೆಯಿಂದ ಆರಂಭವಾದ ಈ ಆಂದೋಲನದಲ್ಲಿ ಇಲ್ಲಿವರೆಗೆ ಎಷ್ಟು ಪ್ರಮಾಣದ ಗಿಡಗಳನ್ನ ನೆಡಲಾಗಿದೆ ಅನ್ನೋ ವಿವರ ಇಲ್ಲಿದೆ. ಕಳೆದ ವರ್ಷ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬೆಳಕವಾಡಿ ಠಾಣೆಯ ಪೊಲೀಸ್ ಪೇದೆ ಪ್ರಭುಸ್ವಾಮಿ ಹಾಗೂ ಮತ್ತವರ ಸ್ನೇಹಿತರಿಂದ ಆರಂಭವಾದ ಪರಿಸರ ಪ್ರೇಮಿ ಯುವಕರ ತಂಡದಿಂದ ಈ ಗಿಡ ನೆಡು ಮರ ಮಾಡು ಆಂದೋಲನ ಚಾಲೆಂಜ್ ಸಖತ್ ಆಗುವ ವೈರಲ್ ಮೂಲಕ ದೇಶ ವಿದೇಶಗಳಿಗೂ ಹಬ್ಬಿದೆ.

ಚಾಲೆಂಜ್ ಸ್ವೀಕರಿಸಿದ ಎಲ್ಲರು ಕೂಡ ಒಂದೊಂದು ಗಿಡ ನೆಟ್ಟು ಮರ ಮಾಡು ಚಾಲೆಂಜ್ ಸ್ವೀಕರಿಸಿದ ವಿಡಿಯೋವನ್ನು ಚಾಲೆಂಜ್ ಕಳಿಸಿದವರಿಗೆ ಕಳಿಸಿ ಅದನ್ನು ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡುವ ಮೂಲಕ ಮತ್ತಷ್ಟು ಜನರಿಗೆ ಪ್ರೇರಣೆಯಾಗುತ್ತಿದ್ದಾರೆ.

ಪರಿಸರ ಉಳಿಸುವ ಈ ರೀತಿಯ ಆಂದೋಲನದ ಹೊಸ ಟ್ರೆಂಡ್ ನಿಂದಾಗಿ ರಾಜ್ಯದ ವಿವಿಧ ಭಾಗಗಳಲ್ಲಿನ ಜನರು 1 ಲಕ್ಷಕ್ಕೂ ಹೆಚ್ಚು ಗಿಡಗಳನ್ನ ನೆಟ್ಟು ಮರ ಮಾಡುವುದಾಗಿ ಚಾಲೆಂಜ್ ಸ್ವೀಕರಿಸಿದ್ದಾರಂತೆ. ಮೊದಲಿಗೆ ಪೊಲೀಸ್ ಪೇದೆಯೊಬ್ಬರಿಂದ ಆರಂಭವಾದ ಈ ಚಾಲೆಂಜ್ ನಲ್ಲಿ ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ನೌಕರರು, ಮಕ್ಕಳು, ವಿದ್ಯಾರ್ಥಿಗಳು, ಮಹಿಳೆಯರು, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು. ಡಾಕ್ಟರ್, ಸೆಲೆಬ್ರೆಟಿ, ರಾಜಕಾರಣಿ ಸೇರಿದಂತೆ ಎಲ್ಲರೂ ಭಾಗಿಯಾಗಿದ್ದಾರೆ. ವಿಶೇಷವಾಗಿ ಈ ಚಾಲೆಂಜ್ ನ್ನು ಸ್ವೀಕರಿಸಿದವರಲ್ಲಿ ಸಾಲು ಮರದ ತಿಮ್ಮಕ್ಕ, ರಾಜಕಾರಣಿಗಳಾದ ಶಾಸಕ ಎನ್ ಮಹೇಶ್, ಮಾಜಿ ಶಾಸಕ ನರೇಂದ್ರ ಸ್ವಾಮಿ, ಚಿತ್ರನಟ ಉಪೇಂದ್ರ, ರಮೇಶ್ ಭಟ್, ಸಾಹಿತಿ ಪುಂಡಲೀಕ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡ ಸೇರಿದ್ದಾರೆ.