AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ರಾತ್ರಿ ಎರಡು ಕಡೆ ದರೋಡೆ ಮಾಡಿದ್ದ ಕಿರಾತಕರು ಲಾಕ್ ಆಗಿದ್ದೇಗೆ?

ಮಂಡ್ಯ: ದುಡಿಯೋಕೆ ವಯಸ್ಸಿತ್ತು.. ದಂಡಿಸೋಕೆ ದೇಹವಿತ್ತು. ಬಡತನವಿದ್ರೂ ನೆಮ್ಮದಿಯಾಗಿ ಬದುಕೋಕೆ ದಾರಿಗಳಿದ್ವು. ಆದ್ರೆ, ಶೋಕಿ ಲೈಫು ಸುಮ್ನೆ ಬಿಡ್ಬೇಕಲ್ಲ. ಹೈಲು, ಪೈಲು ಆಲೋಚನೆಗಳನ್ನ ತಲೆಗೆ ಹತ್ತಿಸಿಕೊಂಡು ದಾರಿಗೆ ಇಳಿದಿದ್ರು. ಅಲ್ಲಿಗೆ ಅವರ ದಿಕ್ಕೇ ಬದಲಾಗಿ ಹೋಗಿತ್ತು. ಒಂದೇ ಏಜು.. ಒಂದೇ ಮೈಕಟ್ಟು.. ಒಂಬತ್ತು ಮಂದಿಯಾದ್ರೂ, ಇವ್ರದ್ದೆಲ್ಲ ಒಂದೇ ಗ್ಯಾಂಗು.. ಒಂದೇ ಗುರಿ.. ಹೆದ್ದಾರಿಗೆ ಇಳಿದ್​​​​ ಬಿಟ್ರೆ ಮುಗೀತು. ಇವರ ಹಾವಳಿ ಅಷ್ಟಿಷ್ಟಲ್ಲ. ಕೈಗೆ ಸಿಕ್ಕವ್ರನ್ನ ಈ ಕಿರಾತಕರು ಹುರಿದು ಮುಕ್ತಿದ್ರು. ಅದ್ರಲ್ಲೂ, ಅವತ್ತು ರಾತ್ರಿ ಖಾಕಿ ಪಡೆಯನ್ನೇ […]

ಒಂದೇ ರಾತ್ರಿ ಎರಡು ಕಡೆ ದರೋಡೆ ಮಾಡಿದ್ದ ಕಿರಾತಕರು ಲಾಕ್ ಆಗಿದ್ದೇಗೆ?
ಸಾಧು ಶ್ರೀನಾಥ್​
|

Updated on: Feb 07, 2020 | 8:04 PM

Share

ಮಂಡ್ಯ: ದುಡಿಯೋಕೆ ವಯಸ್ಸಿತ್ತು.. ದಂಡಿಸೋಕೆ ದೇಹವಿತ್ತು. ಬಡತನವಿದ್ರೂ ನೆಮ್ಮದಿಯಾಗಿ ಬದುಕೋಕೆ ದಾರಿಗಳಿದ್ವು. ಆದ್ರೆ, ಶೋಕಿ ಲೈಫು ಸುಮ್ನೆ ಬಿಡ್ಬೇಕಲ್ಲ. ಹೈಲು, ಪೈಲು ಆಲೋಚನೆಗಳನ್ನ ತಲೆಗೆ ಹತ್ತಿಸಿಕೊಂಡು ದಾರಿಗೆ ಇಳಿದಿದ್ರು. ಅಲ್ಲಿಗೆ ಅವರ ದಿಕ್ಕೇ ಬದಲಾಗಿ ಹೋಗಿತ್ತು.

ಒಂದೇ ಏಜು.. ಒಂದೇ ಮೈಕಟ್ಟು.. ಒಂಬತ್ತು ಮಂದಿಯಾದ್ರೂ, ಇವ್ರದ್ದೆಲ್ಲ ಒಂದೇ ಗ್ಯಾಂಗು.. ಒಂದೇ ಗುರಿ.. ಹೆದ್ದಾರಿಗೆ ಇಳಿದ್​​​​ ಬಿಟ್ರೆ ಮುಗೀತು. ಇವರ ಹಾವಳಿ ಅಷ್ಟಿಷ್ಟಲ್ಲ. ಕೈಗೆ ಸಿಕ್ಕವ್ರನ್ನ ಈ ಕಿರಾತಕರು ಹುರಿದು ಮುಕ್ತಿದ್ರು. ಅದ್ರಲ್ಲೂ, ಅವತ್ತು ರಾತ್ರಿ ಖಾಕಿ ಪಡೆಯನ್ನೇ ಬೆಚ್ಚಿಸಿ ಬಿಟ್ಟಿದ್ರು.

ಒಂದೇ ರಾತ್ರಿ ಕಿರಾತಕರಿಂದ ಎರಡು ಕಡೆ ದರೋಡೆ! ಶೋಕಿ ಮಾಡ್ಬೇಕು, ಅದಕ್ಕೆ ಬೇಜಾನ್ ದುಡ್ಬೇಕು. ದುಡಿದು ತಿನ್ನೋದಕ್ಕಿಂತ, ಹೊಡೆದು ತಿನ್ನೋಣ ಅಂತಿದ್ದ ಮನೆಹಾಳ್ರು ಇವ್ರು. 20- 23 ವರ್ಷದೊಳಗಿನ ಇವ್ರೆಲ್ಲ ಮೈಸೂರಿನ ರಮ್ಮನಹಳ್ಳಿಯ ಸುತ್ತಮುತ್ತಲಿನವ್ರು. ಉಪೇಂದ್ರ, ಕಿರಣ್, ಪ್ರತಾಪ್, ಮಾದಪ್ಪ, ಶೇಖರ್, ಅನೂಜ್, ಕಿರಣ್, ರವಿಕುಮಾರ್ ಮತ್ತು ಶಿವಕುಮಾರ್​ ಅಂತ ಹೆಸ್ರು. ಗಾರೆ ಕೆಲಸ ಸೇರಿದಂತೆ, ಸಣ್ಣ-ಪುಟ್ಟ ಕೆಲಸ ಮಾಡ್ಕೊಂಡಿದ್ರು. ಆದ್ರೆ, ಹೈಫೈ ಜೀವನ ಮಾಡ್ಬೇಕು ಅಂತ ಇವ್ರೆಲ್ಲ ದರೋಡೆಗೆ ಸ್ಕೆಚ್​​ ಹಾಕಿದ್ರು. ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಸುತ್ತ ಹಾವಳಿ ಶುರು ಮಾಡಿದ್ರು.

ಮಾರುತಿ ಓಮ್ನಿ ಕಾರ್​​​​​​​​​​ಗೆ ಮಚ್ಚು, ದೊಣ್ಣೆ ತುಂಬ್ಕೊಂಡು ಕಿರಾತಕರೆಲ್ಲ ದರೋಡೆಗೆ ಹೋಗ್ತಿದ್ರು. ರಾತ್ರಿ ವೇಳೆ ಒಂಟಿಯಾಗಿ ಹೋಗೋರನ್ನೇ ಟಾರ್ಗೆಟ್​​ ಮಾಡ್ತಿದ್ರು. ಕಳೆದ ತಿಂಗಳು ಕೊನೆಯ ವಾರದಲ್ಲಿ ಗೂಡ್ಸ್​​ ವಾಹನವನ್ನ ಅಡ್ಡಗಟ್ಟಿ ಅಡಿಕೆ ವ್ಯಾಪಾರಿಯಿಂದ 11 ಸಾವಿರ ಹಣ, ಮೊಬೈಲ್ ಕಿತ್ತಿದ್ರು. ನಂತರ, ಇದೇ ತಿಂಗಳ 3ನೇ ತಾರೀಖು, ಮಹದೇವಪುರ ಹಾಗೂ ರಮ್ಮನಹಳ್ಳಿ ಬಳಿ ಇಬ್ಬರನ್ನ ಸುಲಿಗೆ ಮಾಡಿದ್ರು.

ದರೋಡೆಗೆ ಕಾರ್​​​​​​​ನಲ್ಲಿ ಹೊರಟವರು ದಾರಿಯಲ್ಲೇ ಲಾಕ್: ಒಂದೇ ವಾರದೊಳಗೆ ಕಿಡಿಗೇಡಿಗಳು ಮೂರು ದರೋಡೆ ಮಾಡಿದ್ರು. ಮೊನ್ನೆ ಕೂಡ, ಮತ್ತೊಂದು ದರೋಡೆಗೆ ಸ್ಕೆಚ್​​​​ ಹಾಕಿ ಹೊರಟಿದ್ರು. ಆದ್ರೆ, ಚೆಕ್​​​ಪೋಸ್ಟ್​​​​​​​​ನಲ್ಲಿ ಈ ಕ್ರಿಮಿಗಳ ಮುಖ ನೋಡಿದ ಪೊಲೀಸ್ರಿಗೆ ಡೌಟ್​​ ಬಂದಿತ್ತು. ವೆಹಿಕಲ್​​ ಚೆಕ್​​​​​​​​ ಮಾಡಿದಾಗ, ಮಚ್ಚು, ಲಾಂಗ್​​​​​​​​​ ಪತ್ತೆಯಾಯ್ತು. ಅಲ್ಲಿಗೆ ಖತರ್ನಾಕ್​​ಗಳು ಲಾಕ್​​​​ ಆದ್ರು.

ಮಧ್ಯರಾತ್ರಿಯ ಈ ಕಿರಾತಕರಿಂದ ಮಂಡ್ಯದ ಜನ್ರಿಗೆ ಕೊಂಚು ದಿಗಿಲು ಮೂಡಿತ್ತು. ಆದ್ರೆ, ಹುಳುಗಳ ತಲೆ ಬಲಿಯುವ ಮೊದಲೇ ಪೊಲೀಸ್ರು, ಎಲ್ಲರನ್ನೂ ಹಿಡಿದು ಹೊಸಕಿದ್ದಾರೆ.