Sandhya Aarti: ಟಿಪ್ಪುವಿನ ಸಲಾಂ ಆರತಿಗೆ ಬಿತ್ತು ಬ್ರೇಕ್, ಮೇಲುಕೋಟೆ ಚಲುವ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿನ್ನು ಸಂಧ್ಯಾರತಿ!

| Updated By: ಸಾಧು ಶ್ರೀನಾಥ್​

Updated on: May 18, 2022 | 5:12 PM

Melukote Cheluvanarayana swamy temple: ಮೇಲುಕೋಟೆಯಲ್ಲಿ ಇನ್ನು ಮುಂದೆ ದೀವಟಿಗೆ ಸಲಾಂ ಬದಲಿಗೆ ಸಂಧ್ಯಾರತಿ ಎಂದು ಮರುನಾಮಕರಣಕ್ಕೆ ಮಂಡ್ಯ ಡಿಸಿ ಶಿಫಾರಸ್ಸು ಮಾಡಿದ್ದಾರೆ. ದೀವಟಿಗೆ ಸಲಾಂ ಆರತಿ ಹೆಸರು ಬದಲಿಸುವಂತೆ ಧಾರ್ಮಿಕ ಪರಿಷತ್ತು ಸದಸ್ಯ ನವೀನ್ ಎಂಬುವವರು ಮಂಡ್ಯ ಡಿಸಿಗೆ ಮನವಿ ಸಲ್ಲಿಸಿದ್ದರು.

Sandhya Aarti: ಟಿಪ್ಪುವಿನ ಸಲಾಂ ಆರತಿಗೆ ಬಿತ್ತು ಬ್ರೇಕ್, ಮೇಲುಕೋಟೆ ಚಲುವ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿನ್ನು ಸಂಧ್ಯಾರತಿ!
ಟಿಪ್ಪುವಿನ ಸಲಾಂ ಆರತಿಗೆ ಬಿತ್ತು ಬ್ರೇಕ್, ಮೇಲುಕೋಟೆ ಚಲುವನಾರಾಯಣ ಸ್ವಾಮಿ ದೇವಸ್ಥಾನದಲ್ಲಿನ್ನು ಸಂಧ್ಯಾರತಿ!
Follow us on

ಮಂಡ್ಯ: ಹಿಂದೂ ಮತ್ತು ಮುಸಲ್ಮಾನರ ನಡುವಣ ಸಾಮರಸ್ಯಕ್ಕೆ ಧಕ್ಕೆಯೊದಗುವಂತಹ ಕೆಲ ಪ್ರಕರಣಗಳು, ಘಟನೆಗಳು ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿವೆ. ಇವುಗಳ ಪೈಕಿ ಇತ್ತೀಚೆಗೆ ಪ್ರಮುಖವಾಗಿ ಕೇಳಿಬಂದಿದ್ದು ಟಿಪ್ಪು ಸುಲ್ತಾನ್ (Tipu Sultan)ಗೆ ಸಂಬಂಧಪಟ್ಟಂತೆ ಸಲಾಂ ಆರತಿ. ಶೃಂಗೇರಿಯಿಂದ ಹಿಡಿದು ಮಂಡ್ಯ, ಮೈಸೂರು, ಬೇಲೂರುವರೆಗೂ ಇದು ಹಬ್ಬಿದೆ. ಈ ಸಲಾಂ ಆರತಿ ದಂಗಲ್​ ಸಮ್ಮುಖದಲ್ಲಿ ಇದೀಗ ಸಲಾಂ ಆರತಿ ಹೆಸರನ್ನ ಸಂಧ್ಯಾ ಆರತಿ ಎಂದು ಬದಲಿಸಲು ಒಪ್ಪಿಗೆ ನೀಡಲಾಗಿದೆ (Melukote Cheluvanarayana swamy temple).

ಸಂಧ್ಯಾರತಿ ಹೆಸರು ಬದಲಿಸಲು ಜಿಲ್ಲಾಡಳಿತದ ಗ್ರೀನ್ ಸಿಗ್ನಲ್, ಆಯುಕ್ತರ ಆದೇಶ ಬಾಕಿ:
ಮಂಡ್ಯದಲ್ಲಿರುವ ಮೇಲುಕೋಟೆ ಚಲುವನಾರಾಯಣ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯು ಪೂಜೆ ಹೆಸರನ್ನ ಬದಲಿಸುವಂತೆ ಮಂಡ್ಯ ಜಿಲ್ಲಾಧಿಕಾರಿ ಎಸ್. ಅಶ್ವಥಿಗೆ ದೇವಸ್ಥಾನ ಮಂಡಳಿ ಪತ್ರ ಬರೆದಿತ್ತು. ಪ್ರತೀ ದಿನ ದೇಗುಲದಲ್ಲಿ ಟಿಪ್ಪು ಸುಲ್ತಾನ್ ಸಲಾಂ ಆರತಿ ನಡೀತಿತ್ತು. ಸಲಾಂ ಆರತಿಯನ್ನ ವಿರೋಧಿಸಿ ಕೆಲ ಹಿಂದೂ ಸಂಘಟನೆಗಳು ಆಕ್ಷೇಪ ಎತ್ತಿವೆ. ಹಾಗಾಗಿ ಪೂಜೆ ಹೆಸರನ್ನ ಬದಲಿಸುವಂತೆ ದೇಗುಲ ಮಂಡಳಿ ಪತ್ರ ಬರೆದಿತ್ತು. ಮಂಡ್ಯ ಡಿಸಿ (Mandya deputy commissioner) ಮೂಲಕ ಮುಜರಾಯಿ ಇಲಾಖೆ (Muzrai Department) ಆಯುಕ್ತರಿಗೆ ಪತ್ರ ರವಾನೆಯಾಗಿತ್ತು. ಸಲಾಂ ಆರತಿ ಹೆಸರನ್ನ ಬದಲಿಸಬಹುದು ಎಂದು ಡಿಸಿ ಪತ್ರದಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. ಹಾಗಾಗಿ, ಈ ಸಂಬಂಧ ಮುಜರಾಯಿ ಇಲಾಖೆ ಆಯುಕ್ತರಿಂದ ಅಧಿಕೃತವಾಗಿ ಒಪ್ಪಿಗೆಯ ಆದೇಶ ಹೊರಬೀಳಬೇಕಿದೆ.

Also Read: Bengaluru Rain: ಬೆಂಗಳೂರಲ್ಲಿಂದು 12-14 ಸೆ.ಮೀ. ಮಳೆಯಾಗುವ ಸಾಧ್ಯತೆ: ಟಿವಿ9ಗೆ ಮಾಹಿತಿ ನೀಡಿದ ಹವಾಮಾನ ಇಲಾಖೆ ತಜ್ಞ ಪ್ರಸಾದ್

ಮೇಲುಕೋಟೆಯಲ್ಲಿ ಶೀಘ್ರವೇ ನಿಲ್ಲಲಿದೆ ದೀವಟಿಗೆ ಸಲಾಂ!
ಮೇಲುಕೋಟೆಯಲ್ಲಿ ಇನ್ನು ಮುಂದೆ ದೀವಟಿಗೆ ಸಲಾಂ ಬದಲಿಗೆ ಸಂಧ್ಯಾರತಿ ಎಂದು ಮರುನಾಮಕರಣಕ್ಕೆ ಮಂಡ್ಯ ಡಿಸಿ ಶಿಫಾರಸ್ಸು ಮಾಡಿದ್ದಾರೆ. ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ದೀವಟಿಗೆ ಸಲಾಂ ಆರತಿ ನಡೆಯುತ್ತಿದೆ. ದೀವಟಿಗೆ ಸಲಾಂ ಆರತಿ ಹೆಸರು ಬದಲಿಸುವಂತೆ ಧಾರ್ಮಿಕ ಪರಿಷತ್ತು ಸದಸ್ಯ ನವೀನ್ ಎಂಬುವವರು ಮಂಡ್ಯ ಡಿಸಿಗೆ ಮನವಿ ಸಲ್ಲಿಸಿದ್ದರು.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಳಿಕ ವರದಿ ನೀಡುವಂತೆ ದೇವಾಲಯ EO ಮತ್ತು ಪಾಂಡವಪುರ ACಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ದೇವಾಲಯದ ಅರ್ಚಕರು, ಸ್ಥಾನಿಕರು, ಪರಿಚಾರಕರ ಸಮ್ಮುಖದಲ್ಲಿ ಈ ಕುರಿತು ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಸಲಾಂ ಹೆಸರು ಬದಲಾಯಿಸಿ, ಸಂಧ್ಯಾರತಿ ಎಂದು ಕರೆಯುವಂತೆ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಗಿತ್ತು. ಅಧಿಕಾರಿಗಳ ಮುಂದೆ ದೇವಾಲಯ ಸ್ಥಾನಿಕರು ಹಾಗೂ ಸಿಬ್ಬಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದರಂತೆ ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ಸಂಧ್ಯಾರತಿ ಎಂದು ಬದಲಿಸುವಂತೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ವರದಿ ಆಧರಿಸಿ ಮುಜರಾಯಿ ಆಯುಕ್ತರಿಗೆ ಇದೀಗ ಡಿಸಿ ಪತ್ರ ಬರೆದಿದ್ದಾರೆ.

Also Read: ವೃಕ್ಷ ಮಾತೆಗೆ ಸನ್ಮಾನ ಮಾಡಿದ ತೆಲಂಗಾಣ ಸಿಎಂ!ತಿಮ್ಮಕ್ಕ ಅವರ ನಿಸ್ವಾರ್ಥ ಸೇವೆಯ ಗುಣಗಾನ

 

Published On - 5:08 pm, Wed, 18 May 22