Bengaluru Rain: ಬೆಂಗಳೂರಲ್ಲಿಂದು 12-14 ಸೆ.ಮೀ. ಮಳೆಯಾಗುವ ಸಾಧ್ಯತೆ: ಟಿವಿ9ಗೆ ಮಾಹಿತಿ ನೀಡಿದ ಹವಾಮಾನ ಇಲಾಖೆ ತಜ್ಞ ಪ್ರಸಾದ್

ಬೆಂಗಳೂರಲ್ಲಿಂದು 12-14 ಸೆ.ಮೀ. ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞ ಪ್ರಸಾದ್ ಮಾಹಿತಿ ನೀಡಿದ್ದಾರೆ.

Bengaluru Rain: ಬೆಂಗಳೂರಲ್ಲಿಂದು 12-14 ಸೆ.ಮೀ. ಮಳೆಯಾಗುವ ಸಾಧ್ಯತೆ: ಟಿವಿ9ಗೆ ಮಾಹಿತಿ ನೀಡಿದ ಹವಾಮಾನ ಇಲಾಖೆ ತಜ್ಞ ಪ್ರಸಾದ್
ಮಳೆ
Follow us
TV9 Web
| Updated By: ವಿವೇಕ ಬಿರಾದಾರ

Updated on:May 18, 2022 | 4:48 PM

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕಳೆದ 2-3ದಿನದಿಂದ ವಿಪರೀತ ಮಳೆಯಾಗುತ್ತಿದ್ದು, ಬೆಂಗಳೂರಿನಲ್ಲಿ (Bengaluru) ಅಕ್ಷರಶಃ ಪ್ರವಾಹ ಬಂದಂತಾಗಿದೆ. ಬೆಂಗಳೂರಲ್ಲಿಂದು 12-14 ಸೆ.ಮೀ. ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Meteorological Department) ತಜ್ಞ ಪ್ರಸಾದ್ ಟಿವಿ9ಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಬೆಂಗಳೂರು ನಗರದಲ್ಲಿ ಇಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದಾರೆ. ಇಂದು ಸಂಜೆ ನಂತರ ನಗರದಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದ್ದಾರೆ.

ಇನ್ನು ಬೆಂಗಳೂರು ನಗರ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು ಬೆಂಗಳೂರು ಗ್ರಾಮಾಂತರ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ಭಾರಿ‌ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಇಂದು ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದಾರೆ. 7 ರಿಂದ 12 ಸೆಂಟಿ‌ಮೀಟರ್ ಮಳೆಯನ್ನು ಕೂಡಾ ಹೆವಿ ರೈನ್ ಫಾಲ್ ಅಂತ ಹೇಳಲಾಗುತ್ತದೆ.

ಉತ್ತರ, ದಕ್ಷಿಣ ಮತ್ತು ವಿದಭ್ರದಿಂದ ಉತ್ತರ ಕೇರಳದ ತನಕ ವಾತಾವರಣದಲ್ಲಿ ಟ್ರಫ್ ಇದೆ. ಹೀಗಾಗಿ ಮಧ್ಯಪ್ರದೇಶದ ಮಧ್ಯಭಾಗದಿಂದ ತಮಿಳುನಾಡಿನ ಒಳನಾಡಿನವರೆಗೆ ಸಮುದ್ರ‌ಮಟ್ಟದ‌ ಮೇಲ್ಮೈ ಸುಳಿಗಾಳಿ 1.5ರಿಂದ 5.8 ಕಿಲೋ ಮೀಟರ್ ಎತ್ತರದಲ್ಲಿ ಹಾದು ಹೋಗಿದೆ. ಈ ಹಿನ್ನಲೆಯಲ್ಲಿ ಮುಂದಿನ 5 ದಿನಗಳ ಕಾಲ ಭಾರಿ ಮಳೆ ಬೀಳಲಿದೆ.

ಇದನ್ನು ಓದಿ:  ಬೆಂಗಳೂರು ಹೊರಮಾವು ಪ್ರದೇಶದಲ್ಲಿ 300-400 ಮನೆಗಳು ಜಲಾವೃತ! 24 ಗಂಟೆಗೆ 114 ಮಿಮೀ ಮಳೆ ದಾಖಲು

ಹೆಣ್ಣೂರಿನ ಗೆದ್ದಲಹಳ್ಳಿಯ ಟ್ರಿನಿಟಿ ಫಾರ್ಚೂನ್ ಲೇಔಟ್ ನಲ್ಲಿ ಮನೆಗೆಳಿಗೆ ನುಗ್ಗಿದ ಮಳೆ ನೀರು

ಹೆಣ್ಣೂರಿನ ಗೆದ್ದಲಹಳ್ಳಿಯ ಟ್ರಿನಿಟಿ ಫಾರ್ಚೂನ್ ಲೇಔಟ್ ನಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ನಿನ್ನೆ ಸಂಜೆಯಿಂದ ನಗರದಲ್ಲಿ ಸುರಿದ ಭಾರಿ ಮಳೆಗೆ ಮನೆಗಳಿಗೆ ನೀರು ನುಗ್ಗಿದೆ. ಪರಿಣಾಮ ಸಂಪೂರ್ಣ ಮನೆ ಜಲಾವೃತಗೊಂಡಿದೆ. ಈ ಕುರಿತು ಟಿವಿ9 ಬಳಿ ಅಳಲು ತೋಡಿಕೊಂಡ ಟ್ರಿನಿಟಿ ಫಾರ್ಚೂನ್ ಲೇಔಟ್ ನ ನಿವಾಸಿ ಎಲೆಕ್ಟ್ರಾನಿಕ್ ವಸ್ತು, ದಿನಸಿ ನೀರುಪಾಲಾಗಿದೆ. ಮನೆಯ ಬಾಗಿಲು ತೆಗೆಯೋಕೆ ಆಗುತ್ತಿಲ್ಲ. ಮನೆಯಲ್ಲಿ ದಿನಸಿ ಇದ್ದರೂ ಅಡುಗೆ ಮಾಡೋಕೆ ಆಗುತ್ತಿಲ್ಲ. ವಾಷಿಂಗ್ ಮಿಷನ್ ಮನುಷ್ಯನ ರೀತಿ ಮಲಗಿದೆ. ಮಳೆ ನೀರು ಹೆಚ್ಚಾದ ಕಾರಣ ಮನೆಯಿಂದ ಹೊರಬರಲು ಸಾಕಷ್ಟು ತೊಂದರೆಯಾಗುತ್ತಿದೆ.

ಇದನ್ನು ಓದಿ: ಬೆಂಗಳೂರಿನಲ್ಲಿ ಮಳೆಯೋ ಮಳೆ: ರಸ್ತೆ ಮೇಲೆ ನೀರು, ತೇಲಿದ ಕಾರು, ಉರುಳಿದ ಮರ, ಜನಜೀವನ ಅಸ್ತವ್ಯಸ್ತ

ಮನೆಯ ಕಾಂಪೌಂಡ್ ಜಿಗಿದು ಸ್ನೇಹಿತೆಯ ಮನೆಗೆ ಹೋದೆ. ನಮ್ಮ ಮನೆಯ ನಾಯಿ, ಮಗ ಟೆರಸ್ ಮೇಲಿನ ರೂಂನಲ್ಲಿದ್ದಾರೆ. ಮಾಡಿದ್ದ ಅಡುಗೆ ಎಲ್ಲವೂ ನೀರು ಪಾಲಾಯಿತು. ಕಳೆದ ವರ್ಷ ಅಧಿಕಾರಿಗಳು, ಜನಪ್ರತಿನಿಧಿಗಳು ಶೋ ಅಪ್ ನೀಡಿ ಹೋದರು. ಸಮಸ್ಯೆ ಮಾತ್ರ ಹಾಗೆ ಇದೆ. ಇನ್ನು ರಾಜಕಾಲುವೆ ತುಂಬಿದ ಪರಿಣಾಮ ನಮ್ಮ ಲೇಔಟ್ ಗೆ ನೀರು ತುಂಬಿದೆ. ಹೀಗಾಗಿ ಅಧಿಕಾರಿಗಳಿಗೆ ನಿನ್ನೆಯಿಂದ ನಿರಂತರವಾಗಿ ಫೋನ್ ಮಾಡುತ್ತಿದ್ದೇವೆ. ಯಾವುದೇ ರೆಸ್ಪಾನ್ಸ್ ಇಲ್ಲ. ನೀರನ್ನ ಹೊರಗೆ ಹಾಕೋಣ ಅಂದರೂ ನೀರು ಹೋಗೋಕೆ ಜಾಗಾನೇ ಇಲ್ಲ. ಇಂತಹ ಪರಿಸ್ಥಿತಿ ಯಾರಿಗೂ ಬೇಡ ಎಂದು ಮಹಿಳೆ ಬೇಸರ ವ್ಯಕ್ತಪಡಿಸಿದ್ದಾಳೆ.

ಇನ್ನಷ್ಟು ಮಳೆಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:47 pm, Wed, 18 May 22