ವೃಕ್ಷ ಮಾತೆಗೆ ಸನ್ಮಾನ ಮಾಡಿದ ತೆಲಂಗಾಣ ಸಿಎಂ!ತಿಮ್ಮಕ್ಕ ಅವರ ನಿಸ್ವಾರ್ಥ ಸೇವೆಯ ಗುಣಗಾನ
8 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಮಕ್ಕಳಂತೆ ಆರೈಕೆ ಮಾಡಿ, ಅವುಗಳ ಸಮಗ್ರ ಪೋಷಣೆಗೆ ಶ್ರಮಿಸುವ ಮೂಲಕ ಪ್ರಾಣ ವಾಯು ಆಮ್ಲಜನಕ ಪ್ರಮಾಣ ಹೆಚ್ಚಳಕ್ಕೆ ಹಾಗೂ ಪಶು, ಪಕ್ಷಿ, ಮಾನವರಿಗೆ ನೆರಳು ನೀಡಿದ ಕೀರ್ತಿ ತಿಮ್ಮಕ್ಕ ಅವರಿಗೆ ಸಲ್ಲುತ್ತದೆ.
ಕರುನಾಡಿನ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಅವರಿಗೆ ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಅವರು ಸನ್ಮಾನ ಮಾಡಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಅವರು 111 ವರ್ಷ ವಯಸ್ಸಿನ ತಿಮ್ಮಕ್ಕ ಅವರನ್ನು ಸನ್ಮಾನಿಸಿದರು. ಮರಗಳನ್ನು ಉಳಿಸಿ, ಬೆಳೆಸಿದ ತಿಮ್ಮಕ್ಕ ಅವರ ನಿಸ್ವಾರ್ಥ ಸೇವೆಯ ಗುಣಗಾನ ಮಾಡಿದರು. ಇದರ ಜೊತೆಗೆ ಅವರ ಕಾರ್ಯ ನಮಗೆ ಸ್ಫೂರ್ತಿಯಾಗಿರಬೇಕು. ನಾಡಿನಲ್ಲಿರುವ ಮರಗಳನ್ನು ನಾವು ಬೆಳೆಸಬೇಕು ಮತ್ತು ಅವುಗಳನ್ನು ರಕ್ಷಣೆ ಮಾಡುವ ಕಾರ್ಯವನ್ನು ನಾವುಗಳು ಮಾಡಬೇಕು ಎಂದು ಹೇಳಿದರು.
8 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಮಕ್ಕಳಂತೆ ಆರೈಕೆ ಮಾಡಿ, ಅವುಗಳ ಸಮಗ್ರ ಪೋಷಣೆಗೆ ಶ್ರಮಿಸುವ ಮೂಲಕ ಪ್ರಾಣ ವಾಯು ಆಮ್ಲಜನಕ ಪ್ರಮಾಣ ಹೆಚ್ಚಳಕ್ಕೆ ಹಾಗೂ ಪಶು, ಪಕ್ಷಿ, ಮಾನವರಿಗೆ ನೆರಳು ನೀಡಿದ ಕೀರ್ತಿ ತಿಮ್ಮಕ್ಕ ಅವರಿಗೆ ಸಲ್ಲುತ್ತದೆ. ಸಾಲು ಮರದ ತಿಮ್ಮಕ್ಕ ಅವರಿಗೆ ಗೌರವ ಸಲ್ಲಿಸಿದ ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಅವರ ನಡೆಗೆ ವ್ಯಾಪಕ ಪ್ರಶಂಸೆ ಕೂಡಾ ವ್ಯಕ್ತವಾಗುತ್ತಿದೆ.
Telangana CM K Chandrashekhar Rao felicitated a 111-year-old woman Saalumarada Thimmakka popularly known as 'Vruksha Mathe' in Hyderabad. pic.twitter.com/nfV9MDGAf5
— ANI (@ANI) May 18, 2022
ತಿಮ್ಮಕ್ಕ ಅವರ 111ನೇ ಜನ್ಮ ದಿನಾಚರಣೆಯು ಜೂನ್ 30, 2022ರಂದು ಬೆಂಗಳೂರಿನ ವಸಂತ ನಗರದಲ್ಲಿ ಇರುವ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದ್ದು, ಈ ಕುರಿತ ಕಿರು ಹೊತ್ತಿಗೆಯನ್ನೂ ಬಿಡುಗಡೆ ಮಾಡಲಾಗಿದೆ. ಈ ಪುಸ್ತಕದಲ್ಲಿ ಸಾಲು ಮರದ ತಿಮ್ಮಕ್ಕ ಅವರ ಜೀವನ ಹಾಗೂ ಸಾಧನೆಗಳನ್ನು ಸಮಗ್ರವಾಗಿ ವಿವರಿಸಲಾಗಿದೆ.
Published On - 4:51 pm, Wed, 18 May 22