ಕೊವಿಡ್ ಲಸಿಕೆ ಪಡೆದ ಶತಾಯುಷಿ ಸಾಲುಮರದ ತಿಮ್ಮಕ್ಕ

ಸಾಲು ಮರದ ತಿಮ್ಮಕ್ಕನ ಸಾಧನೆ ಅಪಾರ ಮತ್ತು ಎಲ್ಲರಿಗೂ ಮಾದರಿ. ಮಕ್ಕಳಾಗದ ತಿಮ್ಮಕ್ಕ ಮರಗಳನ್ನು ನೆಟ್ಟು ತನ್ನ ಹೊಟ್ಟೆಯಲ್ಲಿ ಜನಿಸಿದ ಮಗುವಿಗಿಂತ ಚೆನ್ನಾಗಿ ನೋಡಿಕೊಂಡಿದ್ದಾರೆ. ಇವರ ಸಾಧನೆ ಯುವ ಜನತೆಗೆ ಸ್ಫೂರ್ತಿ.

ಕೊವಿಡ್ ಲಸಿಕೆ ಪಡೆದ ಶತಾಯುಷಿ ಸಾಲುಮರದ ತಿಮ್ಮಕ್ಕ
ಲಸಿಕೆ ಪಡೆದ ಸಾಲುಮರದ ತಿಮ್ಮಕ್ಕ
TV9kannada Web Team

| Edited By: sandhya thejappa

Jul 18, 2021 | 3:30 PM

ಹಾಸನ: ಪದ್ಮಶ್ರೀ ಪ್ರಶಸ್ತಿ ವಿಜೇತೆ, ಶತಾಯುಷಿ ಸಾಲುಮರದ ತಿಮ್ಮಕ್ಕ ಕೊರೊನಾ ಲಸಿಕೆಯನ್ನು ಪಡೆದರು. ಅರೋಗ್ಯ ಇಲಾಖೆಯ ಅಧಿಕಾರಿಗಳು ವೃಕ್ಷ ಮಾತೆಯ ಮನೆಗೆ ತೆರಳಿ ಕೋವಿಶೀಲ್ಡ್ ವ್ಯಾಕ್ಸಿನ್ ಮೊದಲ ಡೋಸ್​ನ ನೀಡಿದ್ದಾರೆ. ಅನಾರೋಗ್ಯ ಹಿನ್ನೆಲೆಯಲ್ಲಿ ಪದ್ಮಶ್ರಿ ಪುರಸ್ಕೃತ ಸಾಲುಮರದ ತಿಮ್ಮಕ್ಕ ತಡವಾಗಿ ಲಸಿಕೆ ಪಡೆದಿದ್ದಾರೆ. ಜಿಲ್ಲೆಯ ಬೇಲೂರು ತಾಲೂಕಿನ ಬಳ್ಳೂರು ಗ್ರಾಮದಲ್ಲಿ ತಿಮ್ಮಕ್ಕ ನೆಲೆಸಿದ್ದಾರೆ. ಸ್ಥಳೀಯ ಶಾಸಕ ಕೆ.ಎಸ್.ಲಿಂಗೇಶ್ ಸಮ್ಮುಖದಲ್ಲಿ ತಿಮ್ಮಕ್ಕನಿಗೆ ಲಸಿಕೆ ನೀಡಲಾಗಿದೆ.

ಕೊರೊನಾ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಿದರು ಕೆಲವರು ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಲಸಿಕೆಯಿಂದ ಅಡ್ಡ ಪರಿಣಾಮಗಳಾಗುತ್ತವೆ ಅಂತ ಹೆದರಿ ಹಿಂದೆ ಸರಿಯುತ್ತಾರೆ. ಗ್ರಾಮಗಳಿಗೆ ಅಧಿಕಾರಿಗಳು ತೆರಳಿ ಕೊರೊನಾ ಲಸಿಕೆ ಪಡೆಯಿರಿ ಅಂತ ಸೂಚಿಸಿದ್ದರೂ ಜನ ಮಾತ್ರ ಅವರ ಮಾತುಗಳನ್ನು ಕೇಳದೆ ಬೇಜವಾಬ್ದಾರಿಯಾಗಿ ವರ್ತಿಸಿದ ಉದಾಹಾರಣೆಗಳು ಬಹಳಷ್ಟಿವೆ. ಈ ಎಲ್ಲದರ ನಡುವೆ 110 ವರ್ಷದ ವೃಕ್ಷ ಮಾತೆ ತಿಮ್ಮಕ್ಕ ಕೊರೊನಾ ಲಸಿಕೆ ಪಡೆದು ಜಾಗೃತಿ ಮೂಡಿಸಿದ್ದಾರೆ.

ಸಾಲು ಮರದ ತಿಮ್ಮಕ್ಕನ ಸಾಧನೆ ಅಪಾರ ಮತ್ತು ಎಲ್ಲರಿಗೂ ಮಾದರಿ. ಮಕ್ಕಳಾಗದ ತಿಮ್ಮಕ್ಕ ಮರಗಳನ್ನು ನೆಟ್ಟು ತನ್ನ ಹೊಟ್ಟೆಯಲ್ಲಿ ಜನಿಸಿದ ಮಗುವಿಗಿಂತ ಚೆನ್ನಾಗಿ ನೋಡಿಕೊಂಡಿದ್ದಾರೆ. ಇವರ ಸಾಧನೆ ಯುವ ಜನತೆಗೆ ಸ್ಫೂರ್ತಿ. ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ತಿಮ್ಮಕ್ಕ ಇದೀಗ ಕೊರೊನಾ ಲಸಿಕೆ ಪಡೆಯುವ ಮೂಲಕ ಲಸಿಕೆ ಮೇಲಿದ್ದ ಭಯವನ್ನು ದೂರ ಮಾಡಿದ್ದಾರೆ. ಯಾವುದೇ ಭಯವಿಲ್ಲದೆ ಕೊವಿಡ್ ಲಸಿಕೆಯನ್ನು ಪಡೆಯಬಹುದು ಅಂತ ಸಾಲು ಮರದ ತಿಮ್ಮಕ್ಕ ತಾನು ಲಸಿಕೆ ಪಡೆಯುವ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ

‘ಅವಾ ಯಾವನೊ ಡಿಕೆ ಪಾಕೆ ಅಂತೆಲ್ಲ ಹೇಳ್ತಾನೆ, ನನ್ ಹಾಳ್ ಮಾಡೋಕೆ ಈ ಕೆಲಸ ಮಾಡ್ತಿದ್ದೀರಾ’: ಅಭಿಮಾನಿಗಳ ವಿರುದ್ಧ ಡಿ.ಕೆ.ಶಿವಕುಮಾರ್ ಗರಂ

ನಾಟಿ ಕೋಳಿ ಮೊಟ್ಟೆ ಮಾರಿ ಜೀವನ ಸಾಗಿಸುತ್ತಿರುವ ವೃದ್ಧೆ; ಯುವಕರನ್ನು ನಾಚಿಸುವಂತಿದೆ 90 ವರ್ಷದ ಅಜ್ಜಿಯ ಉತ್ಸಾಹ

(Saalumarada Thimmakka has been vaccinated for coronavirus in hassan)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada