AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಿಧ ಇಲಾಖೆಗಳ ಕಾರ್ಯದರ್ಶಿಗಳ ಜೊತೆ ಸಿಎಂ ಸಭೆ; ಸರ್ಕಾರದ ಕಾರ್ಯಕ್ರಮ ಜನರಿಗೆ ಮುಟ್ಟಿಸಲು ಸಿಎಂ ಸೂಚನೆ

ಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ಸಿಎಂ ಬಸವರಾಜ ಬೊಮ್ಮಾಯಿಯವರ ಶಾಸಕರ ಕಚೇರಿಗೆ ಮುತ್ತಿಗೆ ಹಾಕಲು ರೈತ ಸಂಘಟನೆಗಳು ಮುಂದಾಗಿವೆ.

ವಿವಿಧ ಇಲಾಖೆಗಳ ಕಾರ್ಯದರ್ಶಿಗಳ ಜೊತೆ ಸಿಎಂ ಸಭೆ; ಸರ್ಕಾರದ ಕಾರ್ಯಕ್ರಮ ಜನರಿಗೆ ಮುಟ್ಟಿಸಲು ಸಿಎಂ ಸೂಚನೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
TV9 Web
| Updated By: ಆಯೇಷಾ ಬಾನು|

Updated on: May 17, 2022 | 8:16 PM

Share

ಬೆಂಗಳೂರು: ವಿವಿಧ ಇಲಾಖೆಗಳ ಕಾರ್ಯದರ್ಶಿಗಳ ಜೊತೆ ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದಾರೆ. ಸಭೆ ಬಳಿಕ ಮಾತನಾಡಿದ ಅವರು, ಮೊನ್ನೆ ಡಿಸಿ ಮತ್ತು ಸಿಇಒ ಹಂತದ ಸಭೆ ಮಾಡಿದ್ದೆವು. ಜಿಲ್ಲಾ ಹಂತದ ಆಡಳಿತ ಚುರುಕುಗೊಳಿಸಿ ಸರ್ಕಾರದ ಕಾರ್ಯಕ್ರಮ ಜನರಿಗೆ ಮುಟ್ಟಿಸಲು ಸೂಚಿಸಿದ್ದೆವು. ಅದೇ ರೀತಿ ರಾಜ್ಯ ಮಟ್ಟದ ಅಧಿಕಾರಿಗಳಿಗೂ ಸೂಚನೆ ಕೊಡಬೇಕು. ಬಜೆಟ್ ಇಂಪ್ಲಿಮೆಂಟ್ ಮಾಡುವುದು ಸೇರಿದಂತೆ, ಹಲವು ಯೋಜನೆಗಳಿಗೆ ಸಂಬಂಧಿಸಿದಂತೆ ಇಲಾಖೆಗಳ ಕೋಆರ್ಡಿನೇಷನ್ ಇಲ್ಲ. ಅದನ್ನ ಯಾವ ರೀತಿ ಮಾಡಬೇಕು ಅಂತ ಚರ್ಚೆ ಮಾಡಿದ್ದೇವೆ. ವಿಶೇಷವಾಗಿ ಬಡವರ ಕಾರ್ಯಕ್ರಮ ಸಕಾಲದಲ್ಲಿ ಇಂಪ್ಲಿಮೆಂಟ್ ಆಗಬೇಕು ಎಂದರು.

ಕಟ್ಟಕಡೆಯ ವ್ಯಕ್ತಿಗೂ ಯೋಜನೆಗಳು ಮುಟ್ಟಬೇಕು. ಎಕನಾಮಿಕ್ ಡೆವಲಪ್ಮೆಂಟ್ ಇದೆ, ಜಮೀನು ಬೇಕು ಮುಂದಿನ ತಿಂಗಳೊಳಗೆ ಪಡೆಯಬೇಕು. ಟೆಂಡರ್ ಪ್ರೋಸೆಸ್ ಮಾಡಬೇಕು. SC, ST ರೈತರ ಕಾರ್ಯಕ್ರಮಗಳಿಗೆ ನೇರವಾಗಿ ತಲುಪಬೇಕು. ಜೂನ್ ತಿಂಗಳಲ್ಲಿ ಪ್ರಾರಂಭಿಸಬೇಕು ಅಂತ ಸೂಚಿಸಲಾಗಿದೆ. ಆಡಳಿತಕ್ಕೆ ಚುರುಕು ಮುಟ್ಟಿಸಬೇಕು. ಜನಸಾಮಾನ್ಯರಿಗೆ, ಜನರಿಗೆ ಯೋಜನೆಗಳು ನೇರವಾಗಿ ತಲುಪಬೇಕು. ಇಸಿ ಇಂದ ಬಂದ ಕೆಲಸ ಡೆಪ್ಯುಟಿ ಸೆಕ್ರೆಟರಿ ತಲುಪಬೇಕು ಎಂದರು. ಇದನ್ನೂ ಓದಿ: ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಜಮೀರ್ ಅಹ್ಮದ್ ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಭೇಟಿಯಾದರು!

ಬಸವರಾಜ ಬೊಮ್ಮಾಯಿ ಕಚೇರಿಗೆ ರೈತರ ಮುತ್ತಿಗೆ ಇನ್ನು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ಸಿಎಂ ಬಸವರಾಜ ಬೊಮ್ಮಾಯಿಯವರ ಶಾಸಕರ ಕಚೇರಿಗೆ ಮುತ್ತಿಗೆ ಹಾಕಲು ರೈತ ಸಂಘಟನೆಗಳು ಮುಂದಾಗಿವೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ತಾಲೂಕು ಪಂಚಾಯ್ತಿಯಲ್ಲಿರುವ ಶಾಸಕರ ಜನಸಂಪರ್ಕ ಕಾರ್ಯಾಲಯ, ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದು, ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವುದು, ಕಬ್ಬಿನ ಬಾಕಿ ಹಣವನ್ನು ಬಿಡುಗಡೆ ಮಾಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೆ.ಎಸ್.ಪುಟ್ಟಣ್ಣಯ್ಯ ಬಣ, ಕೋಡಿಹಳ್ಳಿ ಚಂದ್ರಶೇಖರ ಬಣ ಸೇರಿದಂತೆ ವಿವಿಧ ಬಣಗಳ ರೈತ ಸಂಘಟನೆಗಳು ಮುತ್ತಿಗೆ ಹಾಕಲು ಮುಂದಾಗಿವೆ. ಇದನ್ನೂ ಓದಿ: 545 PSI Recruitment Scam: ಡಿವೈಎಸ್​ಪಿ ಮಲ್ಲಿಕಾರ್ಜುನ ಸೇರಿದಂತೆ ಐವರ ಜಾಮೀನು ಅರ್ಜಿ ತಿರಸ್ಕೃತ

ಬೆಳಿಗ್ಗೆ 11 ಗಂಟೆಗೆ ಕಚೇರಿಗೆ ಮುತ್ತಿಗೆ ಹಾಕಲು ರೈತ ಸಂಘಟನೆಗಳು ತೀರ್ಮಾನಿಸಿವೆ. ರೈತ ಸಂಘಟನೆಗಳ ಮುತ್ತಿಗೆ ಹಿನ್ನೆಲೆಯಲ್ಲಿ ನಾಳೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿ ಶಾಸಕರ ಕಚೇರಿ ಮುತ್ತಿಗೆ ಕಾರ್ಯಕ್ರಮದಲ್ಲಿ ರೈತ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಜಯಗಳಿಸಿದ ಭಾರತ ತಂಡದ ಲಕ್ಷ್ಯ ಸೇನ್‌ಗೆ ಬಹುಮಾನ ಘೋಷಣೆ ಬ್ಯಾಂಕಾಕ್‌ನಲ್ಲಿ ನಡೆದ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಜಯಗಳಿಸಿದ ಭಾರತ ತಂಡದ ಸದಸ್ಯ ಲಕ್ಷ್ಯ ಸೇನ್‌ಗೆ 5 ಲಕ್ಷ ರೂಪಾಯಿ ಮೊತ್ತದ ಬಹುಮಾನದ ಚೆಕನ್ನು ಸಿಎಂ ಬೊಮ್ಮಾಯಿ ವಿತರಿಸಿದ್ದಾರೆ. ಕ್ರೀಡಾ ಸಚಿವ ಡಾ.ನಾರಾಯಣಗೌಡ ಸೇನ್ ಅವರ ತರಬೇತುದಾರ ವಿಮಲ್ ಕುಮಾರ್ ಹಾಗೂ ತಂದೆ ಬೀರೇನ್ ಕುಮಾರ ಸೇನ್, ತಾಯಿ ನಿರ್ಮಲಾ ಸೇನ್‌ರನ್ನು ಸನ್ಮಾನಿಸಿದ್ರು.