ಮಿಮ್ಸ್​ನಲ್ಲಿ ಗರ್ಭಿಣಿಯರು, ಬಾಣಂತಿಯರಿಗೆ ಬೆಡ್​ಗಳ ಕೊರತೆ; ಸ್ಥಳೀಯರಿಂದ ಆಕ್ರೋಶ

| Updated By: preethi shettigar

Updated on: Feb 20, 2022 | 9:52 AM

ಎರಡು ಬೆಡ್​ಗಳನ್ನು ಒಟ್ಟಿಗೆ ಜೋಡಿಸಿ ಮೂವರು ಬಾಣಂತಿಯರಿಗೆ, ಆ ಬೆಡ್​ಗಳು ಕೂಡ ಸಿಗದವರಿಗೆ ನೆಲದ ಮೇಲೆ ಚಿಕಿತ್ಸೆ, ಆರೈಕೆ ಮಾಡುವ ಕೆಲಸವಾಗುತ್ತಿದೆ. ಅತ್ತ ಸಿಜರಿನ್ ವಾರ್ಡ್​ನಲ್ಲಿ ಬೆಡ್ ಖಾಲಿಯಿದ್ದರು ಬೆಡ್ ಸಿಗದ ಬಾಣಂತಿಯರಿಗೆ ಬೆಡ್ ನೀಡದೆ ಅಮಾನೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಸ್ಥಳಿಯರಾದ ಮಂಜುನಾಥ್ ಆರೋಪಿಸಿದ್ದಾರೆ.

ಮಿಮ್ಸ್​ನಲ್ಲಿ ಗರ್ಭಿಣಿಯರು, ಬಾಣಂತಿಯರಿಗೆ ಬೆಡ್​ಗಳ ಕೊರತೆ; ಸ್ಥಳೀಯರಿಂದ ಆಕ್ರೋಶ
ಮಿಮ್ಸ್ ಆಸ್ಪತ್ರೆ
Follow us on

ಮಂಡ್ಯ: ಜಿಲ್ಲೆಯ ಪ್ರತಿಷ್ಠಿತ ದೊಡ್ಡಾಸ್ಪತ್ರೆ ಎಂದರೆ ಮಿಮ್ಸ್(MIMS). ದಿನ ನಿತ್ಯ ಜಿಲ್ಲೆಯಿಂದ ಮತ್ತು ಹೊರ ಜಿಲ್ಲೆಗಳಿಂದ ಸಾವಿರಾರು ಜನರು ಈ ಆಸ್ಪತ್ರೆಗೆ ಬರುತ್ತಾರೆ. ಆದರೆ ಆಸ್ಪತ್ರೆಗೆ(Hospital) ದಾಖಲಾದವರಿಗೆ ಮಾತ್ರ ಅಲ್ಲಿ ನರಕ ದರ್ಶನವಾಗುತ್ತಿದೆ. ಅದರಲ್ಲಿಯು ಗರ್ಭಿಣಿಯರಿಗೆ, ಬಾಣಂತರಿಗೆ ಅವ್ಯವಸ್ಥೆಯ ಕೂಪವಾಗಿ ಬಿಟ್ಟಿದೆ. ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಭೋದಕ ಆಸ್ಪತ್ರೆಗೆ ಜಿಲ್ಲೆಯಲ್ಲಿದೆ. ಸಾವಿರಾರು ಜನ ಈ ಆಸ್ಪತ್ರೆಗೆ ಬರುತ್ತಾರೆ. ಆದರೆ ಅವ್ಯವಸ್ಥೆ ಆಗರವಾಗಿರುವ ಮಿಮ್ಸ್​ನಲ್ಲಿ ಬೆಡ್​ಗಳ(Beds) ಕೊರತೆ ಎದ್ದು ಕಾಣುತ್ತಿದೆ. ಅದರಲ್ಲಿಯು ಈ ಆಸ್ಪತ್ರೆ ಹೆರಿಗೆ ವಿಭಾಗದಲ್ಲಿ ಹೆಚ್ಚು ಜನಪ್ರಿಯವಾಗಿದೆ.‌ ಆದರೆ ಗರ್ಭಿಣಿಯರು, ಬಾಣಂತಿಯರಿಗೆ ಹೆರಿಗೆ ವಾರ್ಡ್​ನಲ್ಲಿ ಹಾಸಿಗೆಗಳೆ ಸಿಗದ ಪರಿಸ್ಥಿತಿ ಬಂದೊದಗಿದೆ.

ಎರಡು ಬೆಡ್​ಗಳನ್ನು ಒಟ್ಟಿಗೆ ಜೋಡಿಸಿ ಮೂವರು ಬಾಣಂತಿಯರಿಗೆ, ಆ ಬೆಡ್​ಗಳು ಕೂಡ ಸಿಗದವರಿಗೆ ನೆಲದ ಮೇಲೆ ಚಿಕಿತ್ಸೆ, ಆರೈಕೆ ಮಾಡುವ ಕೆಲಸವಾಗುತ್ತಿದೆ. ಅತ್ತ ಸಿಜರಿನ್ ವಾರ್ಡ್​ನಲ್ಲಿ ಬೆಡ್ ಖಾಲಿಯಿದ್ದರು ಬೆಡ್ ಸಿಗದ ಬಾಣಂತಿಯರಿಗೆ ಬೆಡ್ ನೀಡದೆ ಅಮಾನೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಸ್ಥಳಿಯರಾದ ಮಂಜುನಾಥ್ ಆರೋಪಿಸಿದ್ದಾರೆ.

ಇನ್ನು ಈ‌ ಕುರಿತು ಮಿಮ್ಸ್ ನಿರ್ದೇಶಕರನ್ನು ಪ್ರಶ್ನಿಸಿದರೆ, ನಿನ್ನೆ ಒಂದೇ ದಿನ 44 ಗರ್ಭಿಣಿಯರು ಮಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 44 ಗರ್ಭಿಣಯರ ಪೈಕಿ 33 ಮಂದಿಗೆ ಹೆರಿಗೆಯಾಗಿದ್ದು, ಹಾಗಾಗಿ ಬೆಡ್ ಸಮಸ್ಯೆ ಎದುರಾಗಿದೆ. ಅಲ್ಲದೇ ಜಿಲ್ಲೆಯಲ್ಲದೆ ಚಾಮರಾಜನಗರ, ಬೆಂಗಳೂರು, ತುಮಕೂರು ಸೇರಿದಂತೆ ಹೊರ ಜಿಲ್ಲೆಗಳಿಂದಲು ಹೆರಿಗೆಗಾಗಿ ಗರ್ಭಿಣಿಯರು ಮಿಮ್ಸ್​ಗೆ ಬರುತ್ತಿದ್ದು, ಅದು ಕೂಡ ಬೆಡ್ ಕೊರತೆಯಾಗಲು ಕಾರಣವಾಗುತ್ತಿದೆ. ಬೆಡ್ ಇದ್ದರೂ ರೋಗಿಗಳಿಗೆ ನೀಡಿಲ್ಲ ಎನ್ನುವುದು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.

ಸದ್ಯ ಮಂಡ್ಯ ಮಿಮ್ಸ್​ನ ಅವ್ಯವಸ್ಥೆ ಇದೇ ಮೊದಲೇನು ಅಲ್ಲ. ಪದೇ ಪದೇ ಇಂತಹ ಘಟನೆ ಮರುಕಳಿಸುತ್ತಲೆ ಇದೆ. ಆದರೆ ಯಾರೋಬ್ಬರು ಎಚ್ಚೆತ್ತುಕೊಳ್ಳದೆ ಇರುವುದು ದುರಂತ. ಇನ್ನಾದರೂ ಸಂಬಂಧಪಟ್ಟವರು ಇದಕ್ಕೊಂದು ಸೂಕ್ತ ಪರಿಹಾರ ಕಲ್ಪಿಸಬೇಕಿದೆ. ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕಿದೆ.

ವರದಿ: ದಿಲೀಪ್ ಚೌಡಹಳ್ಳಿ

ಇದನ್ನೂ ಓದಿ:
ಖಾಸಗಿ ಆಸ್ಪತ್ರೆಗಳ ಧನದಾಹ ಬಿಚ್ಚಿಟ್ಟ ಸಚಿವ ಸೋಮಣ್ಣ; ನನ್ನ ಕ್ಷೇತ್ರದಲ್ಲಿ ಬೆಡ್‌ ಕೊರತೆ ಇದೆ ಎಂದ ಮಾಜಿ ಸಚಿವ ಕೆ.ಜೆ. ಜಾರ್ಜ್

ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಸರ್ಕಾರಿ ಆಸ್ಪತ್ರೆಗಳ ಸಮಸ್ಯೆ, ಆಂಬುಲೆನ್ಸ್​ ವ್ಯವಸ್ಥೆ ಸುಧಾರಣೆಗೆ ಬೇಡಿಕೆ