AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sourav Ganguly: ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾದ ಸೌರವ್ ಗಂಗೂಲಿ! ಐಪಿಎಲ್ ಮೆಗಾ ಹರಾಜಿಗೆ ದಾದಾ ಗೈರು?

Sourav Ganguly: ಬಿಸಿಸಿಐ ಅಧ್ಯಕ್ಷ ಹಾಗೂ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೌರವ್ ಗಂಗೂಲಿ ಐಪಿಎಲ್ ಹರಾಜಿಗಾಗಿ ಬೆಂಗಳೂರಿಗೆ ಆಗಮಿಸಿದ್ದು ಅವರನ್ನು ಹೃದಯ ತಪಾಸಣೆಗಾಗಿ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಗೆ ದಾಖಲಿಸಲಾಗಿದೆ.

Sourav Ganguly: ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾದ ಸೌರವ್ ಗಂಗೂಲಿ! ಐಪಿಎಲ್ ಮೆಗಾ ಹರಾಜಿಗೆ ದಾದಾ ಗೈರು?
ಗಂಗೂಲಿ
TV9 Web
| Updated By: ಪೃಥ್ವಿಶಂಕರ|

Updated on:Feb 11, 2022 | 6:39 PM

Share

ಬಿಸಿಸಿಐ (BCCI) ಅಧ್ಯಕ್ಷ ಹಾಗೂ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೌರವ್ ಗಂಗೂಲಿ ಐಪಿಎಲ್ ಹರಾಜಿಗಾಗಿ ಬೆಂಗಳೂರಿಗೆ ಆಗಮಿಸಿದ್ದು ಅವರನ್ನು ಹೃದಯ ತಪಾಸಣೆಗಾಗಿ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಗೆ ದಾಖಲಿಸಲಾಗಿದೆ. ಆಸ್ಪತ್ರೆಯ ಅಧ್ಯಕ್ಷರಾದ ಡಾ.ದೇವಿ ಶೆಟ್ಟಿ ಮತ್ತು ತಂಡದವರು ಗಂಗೂಲಿಯವರ ಆರೋಗ್ಯ ಪರೀಕ್ಷೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಮತ್ತು ಭಾನುವಾರ ಐಪಿಎಲ್ ಹರಾಜು (IPL Auction) ನಡೆಯಲಿದೆ. ಬಿಸಿಸಿಐ ಅಧ್ಯಕ್ಷ ಗಂಗೂಲಿ ಹರಾಜಿನಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದರು. ಆದರೆ, ಈಗ ಹರಾಜಿನಲ್ಲಿ ಪಾಲ್ಗೊಳ್ಳುವುದು ಅನುಮಾನವಾಗಿದೆ. ಈ ಬಾರಿ ಹರಾಜಿನಲ್ಲಿ 590 ಆಟಗಾರರು ಬಿಡ್ ಆಗಲಿದ್ದು, ಇದಕ್ಕಾಗಿ 10 ತಂಡಗಳು ಪ್ರವೇಶಿಸಲಿವೆ.

ಕಳೆದ ವರ್ಷ ಆಂಜಿಯೋಪ್ಲಾಸ್ಟಿ ಮಾಡಿಸಿಕೊಂಡಿದ್ದರು

ಕಳೆದ ಒಂದು ವರ್ಷದಲ್ಲಿ ಗಂಗೂಲಿ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಮಾರು ಒಂದು ವರ್ಷದ ಹಿಂದೆ, ಸೌರವ್ ಗಂಗೂಲಿ ಅವರಿಗೆ ಈ ಹೃದಯಾಘಾತವಾಗಿತ್ತು. ನಂತರ ಅವರ ಆಂಜಿಯೋಪ್ಲ್ಯಾಸ್ಟಿಯನ್ನು ಕೋಲ್ಕತ್ತಾದಲ್ಲಿಯೇ ಮಾಡಲಾಯಿತು. ಒಂದರ ಹಿಂದೆ ಒಂದರಂತೆ ಎರಡು ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಎರಡನೇ ಆಂಜಿಯೋಪ್ಲ್ಯಾಸ್ಟಿಯಲ್ಲಿ, ಮಾಜಿ ಭಾರತೀಯ ನಾಯಕನ ಹೃದಯದಲ್ಲಿ ಎರಡು ಸ್ಟೆಂಟ್‌ಗಳನ್ನು ಇರಿಸಲಾಯಿತು. ಇದಾದ ಬಳಿಕ ಮತ್ತೊಮ್ಮೆ ಹೃದಯ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈ ಆಪರೇಷನ್ ಕೂಡ ಡಾ.ದೇವಿ ಶೆಟ್ಟಿ ಅವರ ಮೇಲುಸ್ತುವಾರಿಯಲ್ಲಿ ನಡೆದಿದೆ.

ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗಿದ್ದರು

ಕಳೆದ ತಿಂಗಳಷ್ಟೇ ಸೌರವ್ ಗಂಗೂಲಿ ಅವರನ್ನು ಕೊರೊನಾ ವೈರಸ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋಲ್ಕತ್ತಾದ ವುಡ್‌ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೌರವ್ ಗಂಗೂಲಿ ಅವರ ಕೊರೊನಾ ಪರೀಕ್ಷೆಯನ್ನು ಸೋಮವಾರ ನಡೆಸಲಾಯಿತು. ವರದಿಯಲ್ಲಿ ಗಂಗೂಲಿಗೆ ಸೋಂಕು ತಗುಲಿರುವುದು ಖಚಿತವಾಗಿತ್ತು. ಅವರು ಡೆಲ್ಟಾ ರೂಪಾಂತರಿಯ ಸೋಂಕಿಗೆ ಒಳಗಾಗಿದ್ದರು. ಗಂಗೂಲಿ ಮೊದಲ ಬಾರಿಗೆ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದು ಕೆಲ ದಿನ ಆಸ್ಪತ್ರೆಯಲ್ಲಿದ್ದ ನಂತರ ಡಿಸ್ಚಾರ್ಜ್ ಆಗಿದ್ದರು. ಇದಾದ ಬಳಿಕ ಅವರ ಮಗಳಿಗೆ ಕೊರೊನಾ ಸೋಂಕು ತಗುಲಿತ್ತು.

ಇದನ್ನೂ ಓದಿ:Hardik Pandya: ಗಂಗೂಲಿ ಮಾತು ಮೀರಿದ್ರಾ ಪಾಂಡ್ಯ: ರಣಜಿ ಕ್ರಿಕೆಟ್​ನಿಂದ ದೂರ ಉಳಿದ ಹಾರ್ದಿಕ್

Published On - 6:11 pm, Fri, 11 February 22