ಮಂಡ್ಯ: ಕಾವೇರಿ ಪ್ರವಾಹದಿಂದ ಶವಸಂಸ್ಕಾರ (Cremation) ಮಾಡಲು ಪರದಾಡಿರುವಂತಹ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದಲ್ಲಿ ನಡೆದಿದೆ. ಕ್ಯಾನ್ಸರ್‌ನಿಂದ ನಿನ್ನೆ ಗ್ರಾಮದಲ್ಲಿ ಸುಲೋಚನಾ(48) ಎಂಬುವವರು ಮೃತಪಟ್ಟಿದ್ದರು. ಪ್ರವಾಹದಿಂದಾಗಿ ಎದೆ ಮಟ್ಟದ ನೀರಿನಲ್ಲಿ ಗ್ರಾಮಸ್ಥರು ಶವ ಹೊತ್ತು ಸ್ಮಶಾನಕ್ಕೆ ತೆರಳಿದ್ದಾರೆ. ಕಾವೇರಿ ನದಿ ಭೋರ್ಗರೆತಕ್ಕೆ ಪ್ರತಿವರ್ಷ ಸ್ಮಶಾನದ ರಸ್ತೆ ಜಲಾವೃತವಾಗುತ್ತದೆ. ಮಹಿಳೆಯ ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲು ಜನರು ಪರದಾಡಿದ್ದು, ಕೊನೆಗೆ ಪ್ರವಾಹದ ನೀರಲ್ಲೆ ಮಹಿಳೆಯ ಶವವನ್ನು ಗ್ರಾಮಸ್ಥರು ತೆಗೆದುಕೊಂಡು ಹೋದರು. ಇನ್ನೂ ಕಾವೇರಿ ನದಿಗೆ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆ, ಕಾವೇರಿ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ.
ಇದನ್ನೂ ಓದಿ: ತುಂಗಭದ್ರಾ ಜಲಾಶಯದಿಂದ 1.10 ಲಕ್ಷ ಕ್ಯೂಸೆಕ್ ನೀರು ರಿಲೀಸ್: ಮತ್ತೊಮ್ಮೆ ಜಲಾವೃತವಾದ ಹಂಪಿ ಸ್ಮಾರಕಗಳು
ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಬಳಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಬಾಳೆ, ಕಬ್ಬಿನ ಗದ್ದೆ, ಅಡಕೆ ತೆಂಗಿನ ತೋಟಕ್ಕೆ ನೀರು ನುಗ್ಗಿವೆ. ಹೆಚ್ಚಿನ ಪ್ರಮಾಣ ನೀರು ಬಿಟ್ಟಿರುವ ಕಾರಣ ನದಿಪಾತ್ರದಲ್ಲಿರುವ ಜನರು ಆತಂಕಗೊಂಡಿದ್ದಾರೆ. ಸದ್ಯ ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಮಳೆ ಬಿಡುವು ಕೊಟ್ಟಿದೆ. ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಲಾಶಯಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಬರುತ್ತಿದೆ. ಸದ್ಯ ಜಿಲ್ಲೆಯಲ್ಲಿ ಮಳೆ ನಿಂತಿರು ಪ್ರವಾಹ ಪರಿಸ್ಥಿತಿ ಮುಂದುವರೆದಿದೆ.
ಇದನ್ನೂ ಓದಿ: ರಾಜ್ಯದಲ್ಲಿ ತಗ್ಗಿದ ಮಳೆ ಪ್ರಮಾಣ: ಮುಂದಿನ ಐದು ದಿನಗಳ ಹವಾಮಾನ ವರದಿ ಹೇಗಿರಲಿದೆ?
ಆಗುಂಬೆಯಲ್ಲಿ ನೀರಿನಲ್ಲೇ ಶವ ಹೊತ್ತು ಸಾಗಿದ ಗ್ರಾಮಸ್ಥರು
ಶಿವಮೊಗ್ಗ: ರಸ್ತೆಯಿಲ್ಲದೇ ಶವವನ್ನು ನೀರಿನಲ್ಲೇ ಹೊತ್ತು ಗ್ರಾಮಸ್ಥರು ಸಾಗಿರುವಂತಹ ಘಟನೆ ನಿನ್ನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಡ್ಲು ಗ್ರಾಮದಲ್ಲಿ ನಡೆದಿದೆ. ಗ್ರಾಮದಿಂದ ಸ್ಮಶಾನ ಜಾಗಕ್ಕೆ ರಸ್ತೆಯಿಲ್ಲದೇ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದು, ಕೋಡ್ಲು ಗ್ರಾಮದ ತಮ್ಮಯ್ಯ ಗೌಡ(80) ಶವ ನೀರಿನಲ್ಲೇ ಹೊತ್ತು ಗ್ರಾಮಸ್ಥರು ಸಾಗಿದ್ದಾರೆ. ವಯೋ ಸಹಜವಾಗಿ ಕೋಡ್ಲು ಗ್ರಾಮದ ತಮ್ಮಯ್ಯ ಗೌಡ ಸಾವನ್ನಪ್ಪಿದ್ದಾರೆ. ನೀರಿನಲ್ಲೇ ಹೊತ್ತು ಸಾಗಿ, ಸುರಿವ ಮಳೆಯಲ್ಲಿ ಗ್ರಾಮಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಪ್ರತಿ ಮಳೆಗಾಲದಲ್ಲಿ ಅಂತ್ಯಕ್ರಿಯೆ ನಡೆಸಲು ಕೋಡ್ಲು ಗ್ರಾಮಸ್ಥರು ಪರದಾಡುತ್ತಾರೆ.
ಮಳೆಗಾಲದಲ್ಲಿ 4-5 ತಿಂಗಳು ಸ್ಮಶಾನ ರಸ್ತೆ ಮುಳುಗಡೆಯಾಗುತ್ತದೆ. ಸ್ಮಶಾನಕ್ಕೆ ಎತ್ತರಿಸಿದ ರಸ್ತೆ ಮಾಡುವಂತೆ ಹಲವು ಬಾರಿ ಗ್ರಾಮಸ್ಥರು ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೋಡ್ಲು ಗ್ರಾಮಸ್ಥರಿಗೆ ಸಂಕಷ್ಟ ಎದುರಾಗಿದ್ದು, ಸ್ಮಶಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸುದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.