Mandya News: ಸಹೋದರಿ ಸಾವಿನ ನೋವಿನಲ್ಲೇ ಆತ್ಮಹತ್ಯೆಗೆ ಶರಣಾದ ಖ್ಯಾತ ವೈದ್ಯ

|

Updated on: Jun 02, 2023 | 1:21 PM

ಜಿಲ್ಲೆಯ ಮದ್ದೂರು ತಾಲೂಕಿನ ಕುದುರುಗುಂಡಿ ಗ್ರಾಮದಲ್ಲಿ ತಂಗಿ ಸಾವಿನಿಂದ ಮನನೊಂದು ಅಣ್ಣ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಡಾ.ವೇಣುಗೋಪಾಲ್(58) ಆತ್ಮಹತ್ಯೆ ಮಾಡಿಕೊಂಡ ರ್ದುದೈವಿ.

Mandya News: ಸಹೋದರಿ ಸಾವಿನ ನೋವಿನಲ್ಲೇ  ಆತ್ಮಹತ್ಯೆಗೆ ಶರಣಾದ ಖ್ಯಾತ ವೈದ್ಯ
ಆತ್ಮಹತ್ಯೆ ಮಾಡಿಕೊಂಡ ಡಾ.ವೇಣುಗೋಪಾಲ್
Follow us on

ಮಂಡ್ಯ: ಜಿಲ್ಲೆಯ ಮದ್ದೂರು(Maddur) ತಾಲೂಕಿನ ಕುದುರುಗುಂಡಿ ಗ್ರಾಮದಲ್ಲಿ ತಂಗಿ ಸಾವಿನಿಂದ ಮನನೊಂದು ಅಣ್ಣ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಡಾ.ವೇಣುಗೋಪಾಲ್(58) ಆತ್ಮಹತ್ಯೆ(suicide) ಮಾಡಿಕೊಂಡ ರ್ದುದೈವಿ. ವೃತ್ತಿಯಲ್ಲಿ ವೈದ್ಯರಾಗಿದ್ದ ಇವರು, ಕಳೆದ 1 ವರ್ಷದ ಹಿಂದೆ ಹೃದಯಾಘಾತದಿಂದ ತಂಗಿ ಗಾಯತ್ರಿ ಮೃತಪಟ್ಟಿದ್ದರು. 3 ದಿನದ ಹಿಂದೆ ಗಾಯತ್ರಿಯ ಮೊದಲ ವರ್ಷದ ತಿಥಿ ಕಾರ್ಯ ಕೂಡ ಮಾಡಿದ್ದರು. ತಿಥಿ ಕಾರ್ಯದ ದಿನ ತಂಗಿಯ ಸಮಾಧಿ ಪಕ್ಕ ಕುಳಿತು ಅಣ್ಣ ಡಾ.ವೇಣುಗೋಪಾಲ್ ಅಳುತ್ತಿದ್ದರು. ನಿನ್ನೆ(ಜೂ.1) ಸಂಜೆ ಕುದುರುಗುಂಡಿಯ ತಂಗಿ ಮನೆಗೆ ಹೋಗಿದ್ದ ವೇಣುಗೋಪಾಲ್ ನಂತರ ಮೈಸೂರಿಗೆ ತೆರಳುವುದಾಗಿ ಹೇಳಿ ಗದ್ದೆಗೆ ತೆರಳಿ ನೇಣಿಗೆ ಶರಣಾಗಿದ್ದಾರೆ. ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್​ಗೆ ಟಿಪ್ಪರ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

ಬೆಂಗಳೂರು: ಆನೇಕಲ್ ಬನ್ನೇರುಘಟ್ಟ ರಸ್ತೆಯ ದೊಡ್ಡಕೆರೆ ಬಳಿ ಬೈಕ್​ಗೆ ಟಿಪ್ಪರ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಆನೇಕಲ್ ತಾಲೂಕಿನ ಸೊಪ್ಪಹಳ್ಳಿ ನಿವಾಸಿ ಮುನಿಯಪ್ಪ(60) ಮೃತ ರ್ದುದೈವಿ. ದ್ವಿಚಕ್ರ ವಾಹನದಲ್ಲಿ ಬರುವಾಗ ಹಿಂಬದಿಯಿಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿತ್ತು. ಈ ವೇಳೆ ಗಂಭೀರ ಗಾಯಗೊಂಡಿದ್ದ ಮುನಿಯಪ್ಪನನ್ನು ಖಾಸಗಿ ಆಸ್ಪತ್ರೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮುನಿಯಪ್ಪ ಮೃತ ಪಟ್ಟಿದ್ದಾನೆ.

ಇದನ್ನೂ ಓದಿ:Koppala News: ಮದುವೆಯಾದರೂ ಬಿಡದ ಪ್ರೀತಿ; ಅಕ್ರಮ ಸಂಬಂಧ ಬಿಟ್ಟು ಬದುಕದ ಇಬ್ಬರು ಆತ್ಮಹತ್ಯೆ

ಮಹಾಲಕ್ಷ್ಮಿ ಲೇಔಟ್​ನಲ್ಲಿ ವೃದ್ದೆ ಕೊಲೆ ಮಾಡಿ ಬಂಗಾರ ದೋಚಿದ್ದ ಪ್ರಕರಣ; ಮೂವರು ಅರೋಪಿಗಳು ಅರೆಸ್ಟ್

ಬೆಂಗಳೂರು: ನಗರದ ಮಹಾಲಕ್ಷ್ಮಿ ಲೇಔಟ್ ಫೋಸ್ಟ್​ ಆಫೀಸ್​ ಹತ್ತಿರದ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ 82 ವರ್ಷದ ಕಮಲಮ್ಮ ಎಂಬುವವರನ್ನ ಕೈ ಕಾಲು ಕಟ್ಟಿ ಹಾಕಿ ಮೇ.28ರಂದು ಕೊಲೆ ಮಾಡಿ, ಬಂಗಾರ ದೋಚಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮೂವರು ಅರೋಪಿಗಳನ್ನ ಇದೀಗ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಿದ್ದರಾಜು, ಆಶೋಕ್ ಸೇರಿ ಮೂವರು ಬಂಧಿತ ಆರೋಪಿಗಳು. ಮೂರು ತಿಂಗಳ ಹಿಂದೆ ಪ್ಲಂಬರ್ ಕೆಲಸ ಮಾಡ್ತಿದ್ದ ಸಿದ್ದರಾಜು, ಮೃತ ವೃದ್ದೆ ಮನೆಯಲ್ಲಿ ಕೆಲಸ ಮಾಡಿದ್ದ. ಬಳಿಕ ಮನೆಯಲ್ಲಿ ವೃದ್ದೆ ಒಬ್ಬರೆ ಇದ್ದು, ಅವರ ಬಳಿ ಬಂಗಾರವಿದೆ. ಅದನ್ನ ದೋಚಿದರೇ ಸೆಟಲ್​ ಆಗಬಹುದು ಎಂದು ಯೋಚಿಸಿದ್ದ ಆರೋಪಿ ಸಿದ್ದರಾಜು.

ಇನ್ನು ಈ ವಿಷಯವನ್ನ ಸಿದ್ದರಾಜು ತನ್ನ ಗೆಳೆಯ ಆಶೋಕ್ ಬಳಿ ಪ್ರಸ್ತಾಪ ಮಾಡಿ ಪ್ಲಾನ್ ಮಾಡಿದ್ದರು. ಕೊಲೆ ನಡೆದ ದಿನ ಎರಡು ಬಾರಿ ಮನೆ ಹತ್ತಿರ ಹೋಗಿದ್ದಾರೆ. ಮೊದಲು ಸಂಜೆ ನಾಲ್ಕು ಘಂಟೆಗೆ ಹೋಗಿ, ಖಾಲಿ ಇದ್ದ ಒಂದು ಮನೆ ಬಾಡಿಗೆ ಕೊಡ್ತಿರಾ ಬಿಸ್ಕಟ್ ಗೋಡನ್ ಮಾಡ್ತಿವಿ ಎಂದು ಕೇಳಿದ್ದಾರೆ. ಅಜ್ಜಿ ಇಲ್ಲವೆಂದು ಬಾಗಿಲು ತೆಗೆದಿಲ್ಲ. ಮತ್ತೆ ಸಂಜೆ ಆರು ಘಂಟೆಗೆ ವಾಪಸ್ಸು ಹೋಗಿದ್ದಾರೆ. ಈ ವೇಳೆ ಈ ಹಿಂದೆ ಬಂದಿದ್ದವರೆ ಅಲ್ಲವಾ ಎಂದು ಅಜ್ಜಿ ಬಾಗಿಲು ತೆಗೆದಿದ್ದಾರೆ. ಬಾಗಿಲು ತೆಗೆಯುತಿದ್ದಂತೆ ಅಜ್ಜಿಗೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ನಂತರ ಅಜ್ಜಿ ಬಳಿಯಿದ್ದ ಎರಡು ಚಿನ್ನದ ಸರ ಮತ್ತು ಎರಡು ಬಂಗಾರದ ಬಳೆ ದೋಚಿ ಎಸ್ಕೇಪ್ ಆಗಿದ್ದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ