ಮಂಡ್ಯ ಉದ್ಯೋಗ ಮೇಳ: ಶಿರೂರು ಗುಡ್ಡ ಕುಸಿತ ಹೋಟೆಲ್​ ಮಾಲೀಕನ ಪುತ್ರಿಗೆ ಕೆಲಸ ಕೊಡಿಸಿದ ಕುಮಾರಸ್ವಾಮಿ

| Updated By: ವಿವೇಕ ಬಿರಾದಾರ

Updated on: Oct 19, 2024 | 1:43 PM

ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು ಗ್ರಾಮದ ಬಳಿ ಗುಡ್ಡ ಕುಸಿತವಾಗಿತ್ತು. ಈ ಗುಡ್ಡ ಕುಸಿತದಲ್ಲಿ ಹೈವೆ​ ಪಕ್ಕದಲ್ಲಿದ್ದ ಹೋಟೆಲ್​ ಮಾಲೀಕ ಕೊಚ್ಚಿಕೊಂಡು ಹೋಗಿದ್ದರು. ಹೋಟೆಲ್​ ಮಾಲೀಕನ ಪುತ್ರಿಗೆ ಕೆಲಸ ಕೊಡಿಸುವುದಾಗಿ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಭರವಸೆ ನೀಡಿದ್ದರು. ಅದರಂತೆ ಇದೀಗ ಹೆಚ್​ಡಿ ಕುಮಾರಸ್ವಾಮಿ ಕೆಲಸ ಕೊಡಿಸಿದ್ದಾರೆ.

ಮಂಡ್ಯ ಉದ್ಯೋಗ ಮೇಳ: ಶಿರೂರು ಗುಡ್ಡ ಕುಸಿತ ಹೋಟೆಲ್​ ಮಾಲೀಕನ ಪುತ್ರಿಗೆ ಕೆಲಸ ಕೊಡಿಸಿದ ಕುಮಾರಸ್ವಾಮಿ
ಕೃತಿಗೆ ಉದ್ಯೋಗ ಪತ್ರ ನೀಡಿದ ಹೆಚ್​ಡಿ ಕುಮಾರಸ್ವಾಮಿ
Follow us on

ಉತ್ತರ ಕನ್ನಡ, ಅಕ್ಟೋಬರ್​ 19: ಅಂಕೋಲ ತಾಲೂಕಿನ ಶಿರೂರು ಗುಡ್ಡ ಕುಸಿತ (Shiruru Hill Collapse) ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಟೆಲ್​ ಮಾಲೀಕ ಜಗನಾಥ್​ ಅವರ ಪುತ್ರಿ ಎನ್.​ ಕೃತಿ ಅವರಿಗೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಬಿಹೆಚ್​ಇಎಲ್​​ನಲ್ಲಿ (BHEL) ಉದ್ಯೋಗ ಕಲ್ಪಿಸಿದ್ದಾರೆ. ಮಂಡ್ಯದ ಸರ್​ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉದ್ಯೋಗ ಮೇಳವನ್ನು ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್​ಡಿ ಕುಮಾರಸ್ವಾಮಿ ಅವರು ಕೃತಿಕಾ ಅವರಿಗೆ ನೇಮಕಾತಿ ಪತ್ರ ನೀಡಿದರು.

ಕೈಗಾ ಅಣು ವಿದ್ಯುತ್ ಸ್ಥಾವರದ ಬಿಹೆಚ್​ಇಎಲ್​ನಲ್ಲಿ ಉದ್ಯೋಗ ಕೊಡಿಸುವುದಾಗಿ ಈ ಹಿಂದೆ ಹೆಚ್​ಡಿ ಕುಮಾರಸ್ವಾಮಿ ಅವರು ಎನ್​. ಕೃತಿ ಅವರಿಗೆ ದೂರವಾಣಿ ಕರೆ ಮಾಡಿ ಹೇಳಿದ್ದರು. ಕೊಟ್ಟ ಮಾತಿನಂತೆ ಹೆಚ್​ಡಿ ಕುಮಾರಸ್ವಾಮಿ ಅವರು ಕೃತಿಕಾಗೆ ಕೆಲಸ ಕೊಡಿಸಿದ್ದಾರೆ.

ಉದ್ಯೋಗ ಪಡೆದ ವಿಶೇಷಚೇತನ

ವಿಶೇಷಚೇತನ ಯುವಕ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಸಂಪೂರ್ಣ ಅಂದ ಯುವಕ ಅಜಯ್ ಕುಮಾರ್ ಅವರು ಅರೋಹಿತ ಗ್ಲೋಬಲ್ ಬಿಪಿಒ ಕಂಪನಿಯಲ್ಲಿ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಜಯ್ ಕುಮಾರ್ ಅವರಿಗೆ ನೇಮಕಾತಿ ‌ಪತ್ರ ವಿತರಿಸಲಾಗಿದೆ.

ಉದ್ಯೋಗ ಪಡೆದ ಆಟೋ ಡೈವರ್​ನ ಮಕ್ಕಳು

ಉದ್ಯೋಗ ‌ಮೇಳದ ಮುಖಾಂತರ ಆಟೋ ಡೈವರ್​ನ ಇಬ್ಬರು ಮಕ್ಕಳಿಗೆ ಕೆಲಸ ಸಿಕ್ಕಿದೆ. ಮಂಡ್ಯ ಮೂಲದ ನವ್ಯ ಮತ್ತು ನಂದಿತಾ ಎಂಬುವರಿಗೆ ಟಾಟಾ ಮೋಟರ್ಸ್​​​‌ನಲ್ಲಿ ಉದ್ಯೋಗ ಪಡೆದಿದ್ದಾರೆ.

ಇದನ್ನೂ ಓದಿ: ಸೈಬರ್ ಸೆಕ್ಯೂರಿಟಿ ಉದ್ಯೋಗಾವಕಾಶ ಶೇ. 14ರಷ್ಟು ಹೆಚ್ಚಳ; ಬೆಂಗಳೂರಿನಲ್ಲೇ ಹೆಚ್ಚು ಪೋಸ್ಟಿಂಗ್ಸ್

ಉದ್ಯೋಗ ಮೇಳಕ್ಕೆ ಇಂದು ತೆರೆ

ಶುಕ್ರವಾರ ಆರಂಭವಾದ ಉದ್ಯೋಗ ಮೇಳಕ್ಕೆ ಇಂದು (ಅ.19) ತೆರೆ ಬೀಳಲಿದೆ. ಮಂಡ್ಯ ಟು ಇಂಡಿಯಾ ಘೋಷದೊಂದಿದೆ ನಡೆದ ಉದ್ಯೋಗ ಮೇಳದಲ್ಲಿ ಸಾವಿರಾರು ಉದ್ಯೋಗ ಆಕಾಂಕ್ಷಿಗಳು ಭಾಗಿಯಾಗಿದ್ದರು. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಮಂಡ್ಯದ ಸರ್​ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿತ್ತು.

ಇಂದಿನ ಸಮಾರೋಪ ಸಮಾರಂಭಕ್ಕೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಆಗಮಿಸಲಿದ್ದಾರೆ. ಉದ್ಯೋಗ ಮೇಳದ ಮುಖಾಂತ ಕೆಲಸ ಪಡೆದವರಿಗೆ, ಸಮಾರೋಪ ಸಮಾರಂಭದಲ್ಲಿ ಹೆಚ್​ಡಿ ಕುಮಾರಸ್ವಾಮಿ ಅವರು ನೇಮಕಾತಿ ಪತ್ರ ವಿತರಿಸಿದ್ದಾರೆ.

ಉದ್ಯೋಗ ಮೇಳದಲ್ಲಿ ಮೆಕಾನ್, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಐಎಲ್), ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಎನ್‌ಎಂಡಿಸಿ), ಲಾಯ್ಡ್ಸ್ ಮೆಟಲ್ಸ್, ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್), ಮತ್ತು ಜಿಂದಾಲ್ ಸ್ಟೀಲ್ ಸೇರಿದಂತೆ ಪ್ರಮುಖ ಕಂಪನಿಗಳು ನೇರ ನೇಮಕಾತಿ ನಡೆಸಿದವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ