ಮದ್ದೂರಿನಲ್ಲಿ ಅಬ್ಬರಿಸಿದ ಯತ್ನಾಳ್: ಹೊಸ ಪಕ್ಷದ ಹೆಸ್ರು-ಚಿಹ್ನೆ ಘೋಷಣೆ, ಬಿಜೆಪಿ ಹೈಕಮಾಂಡ್​​ಗೆ ಖಡಕ್ ಎಚ್ಚರಿಕೆ

ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಾಟ ಘಟನೆಯಿಂದಾಗಿ ಉದ್ವಿಗ್ನಗೊಂಡಿದ್ದ ಮದ್ದೂರು ಇದೀಗ ಶಾಂತವಾಗಿದೆ. ಆದರೂ ಬೂದಿಮುಚ್ಚಿದ ಕೆಂಡಂತಿದೆ. ಇದರ ನಡುವೆ ಹಿಂದೂ ಫೈರ್ ಬ್ರ್ಯಾಂಡ್​ ಬಸನಗೌಡ ಪಾಟೀಲ ಯತ್ನಾಳ್​ ಮದ್ದೂರಿಗೆ ಭೇಟಿ ನೀಡಿದ್ದು, ಈ ವೇಳೆ ಅವರಿಗೆ ಹಿಂದೂ ಕಾರ್ಯಕರ್ತರಿಂದ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಇನ್ನು ಇದೇ ವೇಳೆ ಭಾಷಣ ಮಾಡಿದ ಯತ್ನಾಳ್​​ ಅವರ ಒಂದೊಂದು ಮಾತು ಬೆಂಕಿ ಚೆಂಡಿನಂತಿವೆ. ಹಾಗೇ ಪಕ್ಷ ಹಾಗೂ ಪಕ್ಷದ ಚೆಹ್ನೆಯನ್ನು ಘೋಷಣೆ ಮಾಡಿ ಬಿಜೆಪಿ ಹೈಕಮಾಂಡ್​​ ಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಮದ್ದೂರಿನಲ್ಲಿ ಅಬ್ಬರಿಸಿದ ಯತ್ನಾಳ್: ಹೊಸ ಪಕ್ಷದ ಹೆಸ್ರು-ಚಿಹ್ನೆ ಘೋಷಣೆ, ಬಿಜೆಪಿ ಹೈಕಮಾಂಡ್​​ಗೆ ಖಡಕ್ ಎಚ್ಚರಿಕೆ
Yatnal
Updated By: ರಮೇಶ್ ಬಿ. ಜವಳಗೇರಾ

Updated on: Sep 11, 2025 | 8:14 PM

ಮಂಡ್ಯ, (ಸೆಪ್ಟೆಂಬರ್ 11): ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಾಟ (Ganesh Stone Pelting ) ಘಟನೆ ನಡೆದ ಬಳಿಕ ಇದೀಗ ಮಂಡ್ಯ (Mandya) ಜಿಲ್ಲೆಯ ಮದ್ದೂರು (Maddur) ಪಟ್ಟಣ ಬೂದಿಮುಚ್ಚಿದ ಕೆಂಡದಂತಿದೆ. ಇದರ ನಡುವೆಯೇ ಇಂದು (ಸೆಪ್ಟೆಂಬರ್ 11) ಹಿಂದೂ ಫೈರ್ ಬ್ರ್ಯಾಂಡ್ , ಬಿಜೆಪಿ ಉಚ್ಛಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal )ಮದ್ದೂರಿಗೆ ಭೇಟಿ ನೀಡಿದ್ದು, ಹಿಂದೂ ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಈ ವೇಳೆ ಮದ್ದೂರಿನ ರಾಮಮಂದಿರ ಬಳಿ ಭಾಷಣ ಮಾಡಿದ ಯತ್ನಾಳ್​, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೇ ಕರ್ನಾಟಕ ಹಿಂದೂ ಪಾರ್ಟಿ ಕಟ್ಟುತ್ತೇನೆ ಎಂದು ಹೇಳುವ ಮೂಲಕ ಬಿಜೆಪಿ ಹೈಕಮಾಂಡ್​​ ಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಬಿಜೆಪಿ ಹೈಕಮಾಂಡ್​​ಗೆ​​​ ಎಚ್ಚರಿಕೆ ಸಂದೇಶ

ರಾಜ್ಯ ಬಿಜೆಪಿಯವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ‌. ಬಿಜೆಪಿಯವರು ಹೊಂದಾಣಿಕೆ ರಾಜಕಾರಣಿಗಳನ್ನ ಕೈಬಿಡಲಿ. ಹೊಂದಾಣಿಕೆ ಮಾಡುವವರನ್ನ ಕೈಬಿಟ್ಟು ನಮ್ಮನ್ನ ಸೇರಿಸಿಕೊಂಡ್ರೆ ಸರಿ. ಇಲ್ಲ‌ದಿದ್ದರೆ ನಾನು ಹೊಸ‌ ಹಿಂದೂ ಪಕ್ಷವನ್ನು ಕಟ್ಟುತ್ತೇನೆ ಎಂದು ಬಿಜೆಪಿ ಹೈಕಮಾಂಡ್​​ ಗೆ ಖಡಕ್ ಸಂದೇಶ ರವಾನಿಸಿದ ಯತ್ನಾಳ್, ಮುಂದಿನ ಬಾರಿ ಮಂಡ್ಯ, ಮೈಸೂರಿಗೆ ಪ್ರವಾಸ ಮಾಡುತ್ತೇನೆ ಎಂದರು.

ಇದನ್ನೂ ಓದಿ: ಮದ್ದೂರಿನಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹವಾ ಕಂಡು ಪೊಲೀಸರೇ ದಂಗು

ಪಕ್ಷ ಜತೆಗೆ ಚಿಹ್ನೆ ಘೋಷಿಸಿದ ಯತ್ನಾಳ್

ಪ್ರತಾಪ್ ಸಿಂಹ ನಾವೆಲ್ಲಾ ಹಿಂದೂಗಳ ಪರ ಮಾತಾಡುತ್ತೇವೆ. ನಾವು ಪ್ರತಾಪ್ ಸಿಂಹ ಒಂದಾಗಿ ಹೊಸ ಸರ್ಕಾರ ತರುತ್ತೇವೆ. ಬಿಜೆಪಿಯವರು ನನ್ನ ಗೌರವಯುತವಾಗಿ ತೆಗೆದುಕೊಳ್ಳದಿದ್ರೆ ಕರ್ನಾಟಕ ಹಿಂದೂ ಪಾರ್ಟಿ ಕಟ್ಟುತ್ತೇನೆ. ಹೊಸ ಪಕ್ಷದ ಗುರುತು JCB ಎಂದು ಘೋಷಿಸಿದ ಯತ್ನಾಳ್, ಸಿಎಂ ಸಿದ್ದರಾಮಯ್ಯ ಸರ್ಕಾರ ಔರಂಗಜೇಬ್ ಸರ್ಕಾರ. ಈ ಸರ್ಕಾರದಲ್ಲಿ ಸಾಬರಿಗೆ ಗುತ್ತಿಗೆಯಲ್ಲೂ ಮೀಸಲಾತಿ ಕೊಟ್ಟಿದೆ. ವಕ್ಫ್ ದೇಣಿಗೆ ಕೊಡುತ್ತಿರುವ ಮುಸ್ಲಿಂ ಸರ್ಕಾರ ಬೇಕಾ? ಕರ್ನಾಟಕಕ್ಕೆ ಒಬ್ಬ ಬುಲ್ಡೋಜರ್ ಬಾಬ ಬೇಕೋ ಹೇಳಿ. ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗಲು ಬಿಡಲ್ಲ. ಇವರು ಕಟ್ಟಿದ ಮಸೀದಿಗಳು ಅಕ್ರಮ. ಇನ್ಮುಂದೆ ಕರ್ನಾಟಕದಲ್ಲಿ ಇದು ನಡೆಯಲ್ಲ. ನನಗೆ ಆಶೀರ್ವಾದ ಮಾಡಿದ್ರೆ ರಾಜ್ಯಾದ್ಯಂತ  ಅಕ್ರಮ ಮಸೀದಿ ತೆರವುಗೊಳಿಸುತ್ತೇನೆ ಎಂದು ಹೇಳಿದರು.

2028ಕ್ಕೆ ಸಿಎಂ ಮಾಡಿ, ಗೋಹತ್ಯೆ ಮಾಡುವವರು ಢಮಾರ್

ಇನ್ನು ಮಾತು ಮುಂದುವರೆಸಿದ ಯತ್ನಾಳ್, ನಾನು ಅಧಿಕಾರಕ್ಕೆ ಬಂದರೆ ಗೋಹತ್ಯೆ ಮಾಡುವವರನ್ನು ಢಮಾರ್ ಮಾಡುತ್ತೇನೆ. ವಕ್ಫ್ ಅನುದಾನವನ್ನು ಗೋರಕ್ಷಕರಿಗೆ ನೀಡುತ್ತೇನೆ. ದೇವಸ್ಥಾನದ ಹುಂಡಿ ಹಣ ದೇಗುಲದ ಅಭಿವೃದ್ಧಿಗೆ ಮೀಸಲಿರಬೇಕು. ಭಾರತದಲ್ಲಿರುವ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು. ಪಾಕಿಸ್ತಾನದಲ್ಲಿರುವ ಹಿಂದೂಗಳನ್ನು ಭಾರತಕ್ಕೆ ಕರೆತಬೇಕು. ದೇಶ ವಿಭಜನೆ ಸಂದರ್ಭದಲ್ಲಿ ಡಾ.ಅಂಬೇಡ್ಕರ್ ಹೇಳಿದ್ದರು. ಮದ್ದೂರಿನ ಘಟನೆ ನೋಡಿದ್ರೆ ಅಂಬೇಡ್ಕರ್ ಹೇಳಿದ್ದು ಸತ್ಯ ಅನಿಸುತ್ತೆ. ನಮ್ಮ ಸರ್ಕಾರ ಬಂದರೆ ಮಸೀದಿ ಮುಂದೆ ಡ್ಯಾನ್ಸ್​ ಗೆ ಅವಕಾಶ ಕೊಡುತ್ತೇನೆ.  2028ಕ್ಕೆ ವಿಧಾನಸೌಧದ ಎದುರು ಎಲ್ಲರೂ ಭಗವಧ್ವಜ ತರ್ತೀರಾ? ನನ್ನನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಿ ಎಂದು ಮನವಿ ಮಾಡಿದರು.

Published On - 8:00 pm, Thu, 11 September 25