ಪಾಕಿಸ್ತಾನಕ್ಕೆ ಜೈ ಅಂದ್ರೆ ಅಲ್ಲೇ ಎನ್ಕೌಂಟರ್, ಬಾಯಿಗೆ ಗುಂಡಿಕ್ಕಿ ಢಂ ಅನ್ನಿಸ್ಬೇಕು: ಮದ್ದೂರಿನಲ್ಲಿ ಯತ್ನಾಳ್ ರೋಷಾವೇಷ
ಗಣೇಶ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಗಲಭೆ ಮತ್ತು ಹಿಂಸಾಚಾರದ ನಂತರದ ಉದ್ವಿಗ್ನ ಪರಿಸ್ಥಿತಿಯಲ್ಲಿ, ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮದ್ದೂರಿಗೆ ಭೇಟಿ ನೀಡಿ ಆಕ್ರೋಶದ ಮಾತುಗಳನ್ನಾಡಿದರು. ಪಾಕಿಸ್ತಾನ ಜಿಂದಾಬಾದ್ ಎನ್ನುವವರಿಗೆ ಅಲ್ಲಲ್ಲೇ ಗುಂಡಿಕ್ಕಿ ಸಾಯಿಸಬೇಕು ಎಂದರು. ವಿಡಿಯೋ ಇಲ್ಲಿದೆ ನೋಡಿ.
ಮಂಡ್ಯ, ಸೆಪ್ಟೆಂಬರ್ 12: ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆದು ಗಲಭೆಗೆ ಕಾರಣವಾಗಿದ್ದ ಮಂಡ್ಯ ಜಿಲ್ಲೆಯ ಮದ್ದೂರಿಗೆ ಗುರುವಾರ ಭೇಟಿ ನೀಡಿದ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರೋಷಾವೇಶದ ಮಾತುಗಳನ್ನಾಡಿದ್ದಾರೆ. ಯಾರು ಹಿಂದೂ, ಕ್ರಿಶ್ಚಿಯನ್, ಸಿಖ್ ಹಾಗೂ ಇತರರನ್ನು ಕೊಲೆ ಮಾಡುತ್ತಾರೋ ಅವರಿಗೆ ಸ್ವರ್ಗದಲ್ಲಿ 72 ಕನ್ಯೆಯರು ಸಿಗುತ್ತಾರೆ ಎನ್ನುತ್ತಾರೆ ಎಂದು ಮುಸ್ಲಿಮರನ್ನು ಉದ್ದೇಶಿಸಿ ಹೇಳಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಯತ್ನಾಳ್, ಈದ್ ಮಿಲಾದ್ ಮೆರವಣಿಗೆ ವೇಳೆ ಯಾರಾದರೂ ಹಿಂದೂಗಳು ಕಲ್ಲು ಹೊಡೆದರೇ ಎಂದು ಪ್ರಶ್ನಿಸಿದರು. ಅಲ್ಲದೆ, ಯಾರು ಪಾಕಿಸ್ತಾನಕ್ಕೆ ಜೈ ಎನ್ನುತ್ತಾರೆಯೋ ಅವರನ್ನು ಅಲ್ಲಲ್ಲೇ ಎನ್ಕೌಂಟರ್ ಮಾಡಬೇಕು. ಬಾಯಿಗೇ ಬಂದೂಕಿಟ್ಟು ಅಲ್ಲೇ ‘ಢಂ’ ಅನ್ನಿಸಿಬಿಡಬೇಕು ಎಂದು ಯತ್ನಾಳ್ ಗುಡುಗಿದರು.

