ಪರಿಷತ್ ಚುನಾವಣೆಯಲ್ಲಿ ನಾನು ಯಾರನ್ನೂ ಬೆಂಬಲಿಸುತ್ತಿಲ್ಲ: ಸಂಸದೆ ಸುಮಲತಾ ಸ್ಪಷ್ಟನೆ
ಇಂತವರನ್ನ ಬೆಂಬಲಿಸಿ ಅಂತ ನಾನು ಹೇಳೋದಿಲ್ಲ. ನಾನು ಈಗಾಗಲೇ ಕ್ಲಿಯರ್ ಕಟ್ ಆಗಿ ಹೇಳಿದ್ದೇನೆ. ನಾನು ಯಾರ ಪರನು ಅಲ್ಲ ಅಂತ. ಯಾರನ್ನ ಆಯ್ಕೆ ಮಾಡಿದ್ರೆ ನಮ್ಮ ಜಿಲ್ಲೆಗೆ ಒಳ್ಳೆಯದಾಗತ್ತೋ ಅವರನ್ನ ಬೆಂಬಲಿಸಿ ಅಂತ ಹೇಳಿದ್ದೇನೆ ಎಂದು ಸುಮಲತಾ ತಿಳಿಸಿದ್ದಾರೆ.
ಮಂಡ್ಯ: ಪರಿಷತ್ ಚುನಾವಣೆಯಲ್ಲಿ ನಾನು ಯಾರನ್ನೂ ಬೆಂಬಲಿಸುತ್ತಿಲ್ಲ ಎಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಲಿಂಗಾಪುರದಲ್ಲಿ ಪಕ್ಷೇತರ ಸಂಸದೆ ಸುಮಲತಾ ಸ್ಪಷ್ಟನೆ ನೀಡಿದ್ದಾರೆ. ಸುಮಲತಾ ಬೆಂಬಲಿಗರು ಕಾಂಗ್ರೆಸ್ ಅಭ್ಯರ್ಥಿ ಬಿಂಬಿಸುತ್ತಿರುವ ವಿಚಾರ ಹಿನ್ನೆಲೆಯಲ್ಲಿ ಸುಮಲತಾ ಸ್ಪಷ್ಟನೆ ನೀಡಿದ್ದಾರೆ. ಎಂಎಲ್ಸಿ ಚುನಾವಣೆಯಲ್ಲಿ ಬೆಂಬಲಿಗರಿಗೆ ಯಾವ ಸೂಚನೆಯನ್ನೂ ನೀಡಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ನನ್ನ ಚುನಾವಣೆಯಲ್ಲಿ ಅವ್ರ ಪಕ್ಷದ ಆದೇಶ ಉಲ್ಲಂಘಿಸಿ ನನಗೆ ಬೆಂಬಲ ನೀಡಿದ್ದರು. ಈಗ ಅವರ ಪಕ್ಷದ ಪರವಾಗಿ ಕೆಲಸ ಮಾಡ್ತಿದ್ದಾರೆ. ನನ್ನ ಬೆಂಬಲಿಗರು ಮೊದಲಿನಿಂದ ಆ ಪಕ್ಷದಲ್ಲಿ ಇದ್ದರು. ನನ್ನ ಚುನಾವಣೆ ಸಂದರ್ಭ ಪಕ್ಷದ ಆದೇಶ ದಿಕ್ಕರಿಸಿ ನನಗೆ ಬೆಂಬಲ ನೀಡಿದ್ದರು. ಹಿಗಾಗಿ ಅವರು ಯಾವ ಪಕ್ಷದ ಪರವಾಗಿ ನಿಂತರು ಅದು ಅವರಿಗೆ ಬಿಟ್ಟದ್ದು. ಇಂತವರನ್ನ ಬೆಂಬಲಿಸಿ ಅಂತ ನಾನು ಹೇಳೋದಿಲ್ಲ. ನಾನು ಈಗಾಗಲೇ ಕ್ಲಿಯರ್ ಕಟ್ ಆಗಿ ಹೇಳಿದ್ದೇನೆ. ನಾನು ಯಾರ ಪರನು ಅಲ್ಲ ಅಂತ. ಯಾರನ್ನ ಆಯ್ಕೆ ಮಾಡಿದ್ರೆ ನಮ್ಮ ಜಿಲ್ಲೆಗೆ ಒಳ್ಳೆಯದಾಗತ್ತೋ ಅವರನ್ನ ಬೆಂಬಲಿಸಿ ಅಂತ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: ಯಾವ ಪಕ್ಷಕ್ಕೆ ಸಿಗಲಿದೆ ಸಂಸದೆ ಸುಮಲತಾ ಅಂಬರೀಶ್ ಬೆಂಬಲ?
ಇದನ್ನೂ ಓದಿ: ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದೆ ಅಂದರೆ ಅಂಬರೀಷ್ಗೂ ಸಿಕ್ಕಿದಂತೆ: ಸಂಸದೆ ಸುಮಲತಾ ಅಂಬರೀಷ್ ಹೇಳಿಕೆ