ಕಾಂಗ್ರೆಸ್​ನವರಿಗೆ ಮಾಡೋಕೆ ಕೆಲಸ ಇಲ್ಲ ಅದಕ್ಕೆ ಹಾಗೆ ಮಾತಾಡುತ್ತಾರೆ: ಸಿಎಂ ಬಸವರಾಜ ಬೊಮ್ಮಾಯಿ

| Updated By: ಗಂಗಾಧರ​ ಬ. ಸಾಬೋಜಿ

Updated on: May 16, 2022 | 3:51 PM

ಶ್ರೀರಂಗಪಟ್ಟಣದ ಜಾಮಿಯ ಮಸೀದಿ ವಿವಾದ ಹಿನ್ನಲೆ, ಕಾನೂನು ಪ್ರಕಾರ ಹೋರಾಟ ನಡೆಸಲಿ ಕಾನೂನಿನಲ್ಲಿ ಏನು ಅವಕಾಶವಿದೆಯೋ ಆ ರೀತಿ ನಡೆಯಲಿ ಎಂದು ಹೇಳಿದ್ದಾರೆ.

ಕಾಂಗ್ರೆಸ್​ನವರಿಗೆ ಮಾಡೋಕೆ ಕೆಲಸ ಇಲ್ಲ ಅದಕ್ಕೆ ಹಾಗೆ ಮಾತಾಡುತ್ತಾರೆ: ಸಿಎಂ ಬಸವರಾಜ ಬೊಮ್ಮಾಯಿ
ಆದಿಚುಂಚನಗಿರಿ ವಿವಿ ವೈದ್ಯಕೀಯ ವಿದ್ಯಾರ್ಥಿಗಳ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಸಿಎಂ ಭಾಗಿ.
Follow us on

ಮಂಡ್ಯ: ಕಾಂಗ್ರೆಸ್​ನವರಿಗೆ ಮಾಡೋಕೆ ಕೆಲಸವಿಲ್ಲ ಹಾಗಾಗಿ ಈ ರೀತಿ ಮಾತಾಡ್ತಾರೆ. ಇದರಲ್ಲಿಯೂ ಕಾಂಗ್ರೆಸ್​ನವರು ರಾಜಕೀಯ ಮಾಡುತ್ತಾರೆ. ಆ ವಿವಾದ ಸೃಷ್ಠಿ ಮಾಡಿದ್ದು ಯಾರೆಂದು ಎಲ್ಲರಿಗೂ ತಿಳಿದಿದೆ ಎಂದು ಕಾಂಗ್ರೆಸ್ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದಾರೆ. ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್​ನಲ್ಲಿರುವ ಆದಿಚುಂಚನಗಿರಿ ಯೂನಿವರ್ಸಿಟಿಯ ವೈದ್ಯಕೀಯ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯಕೀಯ ಪದವಿ ಮುಗಿಸಿದ 142 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದ್ದಾರೆ. ವಿವಿಧ ವಿಭಾಗಗಳಲ್ಲಿ ರ್ಯಾಂಕ್ ಪಡೆದ 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಗಿದೆ. ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಡಾ.ಕೆ.ಸುಧಾಕರ್, ಕೆ.ಸಿ.ನಾರಾಯಣ ಗೌಡ, ಕೆ.ಗೋಪಾಲಯ್ಯ, ಶಾಸಕ ಸುರೇಶ್ ಗೌಡ ಭಾಗಿಯಾಗಿದ್ದರು.

ಶ್ರೀರಂಗಪಟ್ಟಣದ ಜಾಮಿಯ ಮಸೀದಿ ವಿವಾದ ಹಿನ್ನಲೆ, ಕಾನೂನು ಪ್ರಕಾರ ಹೋರಾಟ ನಡೆಸಲಿ ಕಾನೂನಿನಲ್ಲಿ ಏನು ಅವಕಾಶವಿದೆಯೋ ಆ ರೀತಿ ನಡೆಯಲಿ ಎಂದು ಹೇಳಿದ್ದಾರೆ. ಹಿಜಾಬ್ ವಿವಾದ ಆರಂಭಿಸಿದ್ದು ಯಾರೆಂದು ಜಗತ್ತಿಗೆ ಗೊತ್ತಿದೆ. ವಿವಾದದ ಹಿಂದಿರುವ ಶಕ್ತಿಗಳೆಲ್ಲ ಕಾಂಗ್ರೆಸ್ ಮಿತ್ರರೇ. ಕಾಂಗ್ರೆಸ್​ನವರು ಎಲ್ಲವನ್ನೂ ಕಾನೂನು ಬಾಹಿರವಾಗಿ ಮಾಡುತ್ತಾರೆ. ಮತ್ತೊಬ್ಬರ ಮೇಲೆ ಗೂಬೆ ಕೂರಿಸುವುದು ಅವರಿಗೆ ಅಭ್ಯಾಸವಾಗಿದೆ. ಕಾಂಗ್ರೆಸ್​ನವರ ಹೇಳಿಕೆಗಳಿಗೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಕೊಡಗಿನಲ್ಲಿ ಹಿಂದೂ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ವಿಚಾರವಾಗಿ ಮಾತನಾಡಿದ್ದು, ಕಾನೂನುಬಾಹಿರವಾಗಿ ಯಾವುದಿದೆ ಅದ್ಯಾವುದಕ್ಕೂ ಅವಕಾಶ ಕೊಡೋದಿಲ್ಲ. ಜಾಮಿಯ ಮಸೀದಿಯಲ್ಲಿ ಹನುಮನ ಪೂಜೆಗೆ ಅವಕಾಶ ಕೋರಿ ಮನವಿ ವಿಚಾರ. ಯಾರಾರು ಅರ್ಜಿ ಕೊಡ್ತಾರೋ ಕೊಡಲಿ. ಕಾನೂನು ಪ್ರಕಾರ ಪರಿಶೀಲನೆ ಮಾಡುತ್ತೇವೆ. ಶ್ರೀಸಾಯಿ ವಿದ್ಯಾಮಂದಿರದಲ್ಲಿ ತ್ರಿಶೂಲ ದೀಕ್ಷೆ ನೀಡಿದ ವಿಚಾರವಾಗಿ ಕೊಡಗು ಜಿಲ್ಲೆ ಪೊನ್ನಂಪೇಟೆಯಲ್ಲಿರುವ ಶ್ರೀಸಾಯಿ ವಿದ್ಯಾಮಂದಿರ ಯಾವುದೇ ಕಾನೂನು ಬಾಹಿರ ವಿಚಾರಗಳಿಗೆ ಅವಕಾಶ ನೀಡಲ್ಲ. ತ್ರಿಶೂಲ ದೀಕ್ಷೆ ಸಂಬಂಧ ಕಾನೂನು ಪ್ರಕಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

 

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 3:33 pm, Mon, 16 May 22