ಅಂಗನವಾಡಿ ಕಳ್ಳತನಕ್ಕೆ ಬಂದವ ಅಡುಗೆ ಮಾಡಿ ತಿಂದು, ಕಥೆ ಬರೆದು ಹೋದ!

ಮೂರು ಪುಟಗಳ ಕಥೆಯಲ್ಲಿ ಜೀವನದ ಅನುಭವ, ಜನರ ದೃಷ್ಟಿಕೋನದ ಬಗ್ಗೆ ತನ್ನ ಅಭಿಪ್ರಾಯ ದಾಖಲಿಸಿದ್ದಾನೆ. ‘ಒಬ್ಬ ಹುಡುಗ ಚಿಕ್ಕ ವಯಸ್ಸಿನಲ್ಲಿ ತನ್ನ ತಾಯಿಯನ್ನು ಕೊಲೆ ಮಾಡಿದ ಎಂಬ ಆರೋಪವನ್ನು ಹೊತ್ತಿಕೊಂಡು ತನ್ನ ಗ್ರಾಮವನ್ನು ಬಿಟ್ಟು ಬರುವುದು ಒಂದು ಕಥೆ 16-07-1991’ ಎಂದು ಕಳ್ಳ ಬರೆದಿದ್ದಾನೆ.

ಅಂಗನವಾಡಿ ಕಳ್ಳತನಕ್ಕೆ ಬಂದವ ಅಡುಗೆ ಮಾಡಿ ತಿಂದು, ಕಥೆ ಬರೆದು ಹೋದ!
ಅಂಗನವಾಡಿ ಕಳ್ಳತನಕ್ಕೆ ಬಂದವ ಅಡುಗೆ ಮಾಡಿ ತಿಂದು, ಕಥೆ ಬರೆದು ಹೋದ!
Follow us
TV9 Web
| Updated By: ganapathi bhat

Updated on: Feb 23, 2022 | 11:11 PM

ಮಂಡ್ಯ: ಕಳ್ಳತನಕ್ಕೆ ಬಂದವ ಅಡುಗೆ ಮಾಡಿಕೊಂಡು ತಿಂದು ಹೋಗಿರುವ ಘಟನೆ ಅಂಗನವಾಡಿಯೊಂದರಲ್ಲಿ ನಡೆದಿದೆ. ಅಡುಗೆ ಮಾಡಿದ್ದಷ್ಟೇ ಅಲ್ಲದೆ ತನ್ನ ಮನಸ್ಸಿನ ಭಾವನೆಗಳನ್ನು, ಅಭಿಪ್ರಾಯಗಳನ್ನು ಮೂರು ಪುಟಗಳಷ್ಟು ಬರೆದಿಟ್ಟಿದ್ದಾನೆ. ಮಳವಳ್ಳಿ ತಾಲೂಕಿನ ಹೆಬ್ಬಣಿ ಗ್ರಾಮದ ಅಂಗನವಾಡಿಯಲ್ಲಿ ನಡೆದಿರುವ ಘಟನೆ ಇದು. ಅಂಗನವಾಡಿ ಬೀಗ ಮುರಿದು ಒಳನುಗ್ಗಿರುವ ಕಳ್ಳ ಬೀರು ಮುರಿದಿದ್ದಾನೆ. ಆದರೆ ಅಲ್ಲಿ ಬೆಲೆ ಬಾಳುವ ಯಾವುದೇ ವಸ್ತುಗಳು ಸಿಗಲಿಲ್ಲ. ಅಲ್ಲಿಯೇ ವಾಸ್ತವ್ಯ ಹೂಡಿ ಪುಳಿಯೊಗರೆ ತಯಾರಿಸಿ ತಿಂದ. ಬಳಿಕ ಅಂಗನವಾಡಿಯ ನೋಟ್ ಪುಸ್ತಕದಲ್ಲಿ ತನ್ನ ಮನದ ಮಾತುಗಳನ್ನೆಲ್ಲಾ ಬರೆದಿಟ್ಟಿದ್ದಾನೆ. ಅಂಗನವಾಡಿ ಕಾರ್ಯಕರ್ತೆ ಬೆಳಿಗ್ಗೆ ಕೆಲಸಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಪಂಡಿತನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಮಹದೇವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

‘ಎಷ್ಟು ಜನರ ಪಾಲಿಗೆ ಅನ್ನದಾತನಾಗಿ ದೇಶದ ಬೆನ್ನೆಲುಬಾಗಿ ಅನ್ಯಾಯಕ್ಕೆ ತಲೆಬಾಗಿ ತನ್ನ ಸತಿಯ ಗರ್ಭದಿಂದ ಜನಿಸಿ ಬಂದ ಕಂದನನ್ನು ತನ್ನ ವಂಶದ ಕುಡಿಯನ್ನು, ತನ್ನ ವಂಶದ ಚಿಗುರುವ ಬಳ್ಳಿಯನ್ನು ಭೂಮಿ ತಾಯಿಯ ಬಾಯಿಗೆ ತುತ್ತಾಗಿ ನೀಡುವುದು ಇನ್ನೊಂದು ಕಥೆ’ ಹೀಗೆ ಕಳ್ಳ ಹಲವು ಸಾಲುಗಳನ್ನು ಬರೆದಿದ್ದಾನೆ. ಮೂರು ಪುಟಗಳ ಕಥೆಯಲ್ಲಿ ಜೀವನದ ಅನುಭವ, ಜನರ ದೃಷ್ಟಿಕೋನದ ಬಗ್ಗೆ ತನ್ನ ಅಭಿಪ್ರಾಯ ದಾಖಲಿಸಿದ್ದಾನೆ. ‘ಒಬ್ಬ ಹುಡುಗ ಚಿಕ್ಕ ವಯಸ್ಸಿನಲ್ಲಿ ತನ್ನ ತಾಯಿಯನ್ನು ಕೊಲೆ ಮಾಡಿದ ಎಂಬ ಆರೋಪವನ್ನು ಹೊತ್ತಿಕೊಂಡು ತನ್ನ ಗ್ರಾಮವನ್ನು ಬಿಟ್ಟು ಬರುವುದು ಒಂದು ಕಥೆ 16-07-1991’ ಎಂದು ಕಳ್ಳ ಬರೆದಿದ್ದಾನೆ.

ಇತರ ಅಪರಾಧ ಸುದ್ದಿಗಳು

ಜ್ಯುವೆಲ್ಲರಿ ಅಂಗಡಿಗೆ ಕನ್ನ ಕೊರೆದು 2 ಕೆಜಿ ಚಿನ್ನಾಭರಣ ಕಳವು ಮಾಡಿದ ಘಟನೆ ಬೆಂಗಳೂರಿನ ಹೆಣ್ಣೂರು ಬಳಿಯ ಸಾರಾಯಿಪಾಳ್ಯದಲ್ಲಿ ನಡೆದಿದೆ. ಶ್ರೀರಾಘವೇಂದ್ರ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ನಿನ್ನೆ ರಾತ್ರಿ ಕಳ್ಳತನ ಕೃತ್ಯ ನಡೆಸಲಾಗಿದೆ. ಬಳಿಕ, ಕಳ್ಳರು ಚಿನ್ನದಂಗಡಿಯ ಸಿಸಿಟಿವಿ ಡಿವಿಆರ್ ಹೊತ್ತೊಯ್ದಿದ್ದಾರೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬೆಂಗಳೂರು ಗೃಹ ಸಚಿವ ಆರಗ ಜ್ಞಾನೇಂದ್ರ ಬಳಸುವ ಸರ್ಕಾರಿ ಕಾರ್​ಗೆ ಇನ್ಶೂರೆನ್ಸ್ ಲ್ಯಾಪ್ಸ್ ಆಗಿದೆ. KA 01 GB 6444 ಸಂಖ್ಯೆಯ ಸರ್ಕಾರಿ ಕಾರಿನ ಇನ್ಶೂರೆನ್ಸ್​ ಜ.5ರ 2021ರಲ್ಲಿ ಲ್ಯಾಪ್ಸ್ ಆಗಿದೆ ಎಂದು ತಿಳಿದುಬಂದಿದೆ.

ಬಾಗಲಕೋಟೆಯ ಹುನಗುಂದ ತಾಲೂಕಿನ ಹುಲ್ಯಾಳ ಗ್ರಾಮದಲ್ಲಿ ಜಗದೀಶ್​ಗೌಡ ಬಳಗೌಡರ ಹಾಗೂ ಸಹೋದರರ ಬಣವೆಗಳು ಬೆಂಕಿಗಾಹುತಿ ಆದ ಘಟನೆ ನಡೆದಿದೆ. ಸಾವಿರ ರೂಪಾಯಿ ಮೌಲ್ಯದ ಬಣವೆ ಬೆಂಕಿಗಾಹುತಿ ಆಗಿದೆ.

ಹಾಸನದ ಮಾರೇನಹಳ್ಳಿಯಲ್ಲಿ ಜಮೀನಿನಲ್ಲಿ ಕೆಲಸ ಮಾಡುವಾಗ ವಿದ್ಯುತ್​ ತಂತಿ ತುಂಡಾಗಿ ಮೈಮೇಲೆ ಬಿದ್ದು ವಿದ್ಯುತ್​ ಪ್ರವಹಿಸಿ ಶಶಿಕುಮಾರ್ (32) ಸಾವನ್ನಪ್ಪಿದ ಘಟನೆ ನಡೆದಿದೆ. ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ. ಶಾಂತಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: SSLC ಪೂರ್ವ ಸಿದ್ಧತಾ ಪರೀಕ್ಷೆಗೆ ಹೆದರಿ ವಿದ್ಯಾರ್ಥಿನಿ ಆತ್ಮಹತ್ಯೆ, ಜ್ಯುವೆಲ್ಲರಿಗೆ ಕನ್ನ ಕೊರೆದು 2 ಕೆಜಿ ಚಿನ್ನಾಭರಣ ಕಳವು

ಇದನ್ನೂ ಓದಿ: Crime Updates: ತಲಾ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಬಿಬಿಎಂಪಿ ಸಿಬ್ಬಂದಿ, ಬೆಸ್ಕಾಂ ಅಧಿಕಾರಿ ಎಸಿಬಿ ಬಲೆಗೆ