ಫಾಸ್ಟ್‌ಟ್ಯಾಗ್ ಇದ್ದರೂ ಹಣ ಕಟ್ಟುವಂತೆ ಚಾಲಕನ ಮೇಲೆ ಹಲ್ಲೆ?
ಮಂಡ್ಯ: ಫಾಸ್ಟ್‌ಟ್ಯಾಗ್ ವಿಚಾರಕ್ಕೆ ಸಂಬಂಧಿಸಿ ವಾಹನ ಚಾಲಕನ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ನಡೆಸಿರುವ ಘಟನೆ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್‌ನ ನೆಲ್ಲಿಗೆರೆಯ ಟೋಲ್‌ನಲ್ಲಿ ನಡೆದಿದೆ. ಫಾಸ್ಟ್‌ಟ್ಯಾಗ್ ಇದ್ದರೂ ಹಣ ಕಟ್ಟುವಂತೆ ಟೋಲ್ ಸಿಬ್ಬಂದಿ ಹೇಳಿದ್ದಾರೆ. ಆದ್ರೆ ಇದಕ್ಕೆ ಕಾರು ಚಾಲಕ ಒಪ್ಪದ ಹಿನ್ನೆಲೆಯಲ್ಲಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಲಿಗೆರೆಯ ಟೋಲ್‌ನಲ್ಲಿ ಫಾಸ್ಟ್‌ಟ್ಯಾಗ್ ಇದ್ದರೂ ಹಣ ಪಾವತಿಸುವಂತೆ ಸಿಬ್ಬಂದಿ ಹೇಳಿದ್ದಾರೆ. ಈ ವೇಳೆ ಫಾಸ್ಟ್‌ಟ್ಯಾಗ್ ಇಟ್ಟುಕೊಂಡು ನಾವು ಹಣ ಕಟ್ಟುವುದಿಲ್ಲ ಎಂದು […]
ಮಂಡ್ಯ: ಫಾಸ್ಟ್‌ಟ್ಯಾಗ್ ವಿಚಾರಕ್ಕೆ ಸಂಬಂಧಿಸಿ ವಾಹನ ಚಾಲಕನ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ನಡೆಸಿರುವ ಘಟನೆ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್‌ನ ನೆಲ್ಲಿಗೆರೆಯ ಟೋಲ್‌ನಲ್ಲಿ ನಡೆದಿದೆ. ಫಾಸ್ಟ್‌ಟ್ಯಾಗ್ ಇದ್ದರೂ ಹಣ ಕಟ್ಟುವಂತೆ ಟೋಲ್ ಸಿಬ್ಬಂದಿ ಹೇಳಿದ್ದಾರೆ. ಆದ್ರೆ ಇದಕ್ಕೆ ಕಾರು ಚಾಲಕ ಒಪ್ಪದ ಹಿನ್ನೆಲೆಯಲ್ಲಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಲಿಗೆರೆಯ ಟೋಲ್‌ನಲ್ಲಿ ಫಾಸ್ಟ್‌ಟ್ಯಾಗ್ ಇದ್ದರೂ ಹಣ ಪಾವತಿಸುವಂತೆ ಸಿಬ್ಬಂದಿ ಹೇಳಿದ್ದಾರೆ. ಈ ವೇಳೆ ಫಾಸ್ಟ್‌ಟ್ಯಾಗ್ ಇಟ್ಟುಕೊಂಡು ನಾವು ಹಣ ಕಟ್ಟುವುದಿಲ್ಲ ಎಂದು ಚಾಲಕ ಹೇಳಿದ್ದಾನೆ. ಇಲ್ಲಿ ಫಾಸ್ಟ್‌ಟ್ಯಾಗ್ ನಡೆಯುವುದಿಲ್ಲ ಎಂದು ಗಲಾಟೆ ಮಾಡಿ ವಾಹನ ಚಾಲಕನಿಗೆ ಸಿಬ್ಬಂದಿ ಮನಸೋ ಇಚ್ಛೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.