ವಕ್ಫ್ ವಿವಾದ: ಸರ್ಕಾರಿ ಶಾಲೆಯ ಭೂಮಿಯ ಪಹಣಿಯಲ್ಲಿ ವಕ್ಫ್​ ಹೆಸರು

ಶ್ರೀರಂಗಪಟ್ಟಣ ತಾಲೂಕಿನ ಚಂದಗಾಲು ಗ್ರಾಮದಲ್ಲಿನ ಸರ್ಕಾರ ಶಾಲೆಯ ಜಮೀನಿನ ಪಹಣಿಯಲ್ಲಿ ವಕ್ಫ್​ ಆಸ್ತಿ ಎಂದು ನಮುದು ಆಗಿದೆ. ಸರ್ಕಾರ ಮತ್ತು ವಕ್ಫ್​ ಮಂಡಳಿ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮತ್ತು ಸಮಸ್ಯೆಯ ಪರಿಹಾರಕ್ಕಾಗಿ ಒತ್ತಾಯಿಸುತ್ತಿದ್ದಾರೆ.

ವಕ್ಫ್ ವಿವಾದ: ಸರ್ಕಾರಿ ಶಾಲೆಯ ಭೂಮಿಯ ಪಹಣಿಯಲ್ಲಿ ವಕ್ಫ್​ ಹೆಸರು
ಚಂದಗಾಲು ಗ್ರಾಮದಲ್ಲಿನ ಸರ್ಕಾರ ಶಾಲೆ
Follow us
ಪ್ರಶಾಂತ್​ ಬಿ.
| Updated By: ವಿವೇಕ ಬಿರಾದಾರ

Updated on: Nov 03, 2024 | 11:38 AM

ಮಂಡ್ಯ, ನವೆಂಬರ್​ 03: ರೈತರು, ಸರ್ಕಾರಿ ಕಚೇರಿ (Government Office) ಮತ್ತು ಮಠ ಬೆನ್ನಲ್ಲೇ ವಕ್ಫ್​​ ಮಂಡಳಿ (Waqf Board) ಕಣ್ಣು ಸರ್ಕಾರಿ ಶಾಲೆಯ (Government School) ಮೇಲೆ ಬಿದ್ದಿದೆ. ಶ್ರೀರಂಗಪಟ್ಟಣ (Srirangapattana) ತಾಲೂಕಿನ ಚಂದಗಾಲು ಗ್ರಾಮದಲ್ಲಿನ ಸರ್ಕಾರ ಶಾಲೆಯ ಸರ್ವೆ ನಂ 215ರ 30 ಗುಂಟೆ ಜಮೀನಲ್ಲಿ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗಿದೆ. ವಕ್ಫ್ ಆಸ್ತಿ ಅಂತ 2015ರಲ್ಲೇ ಆಗಿದ್ದು, ಪಹಣಿ ಪರಿಶೀಲಿಸಿದಾಗ ತಿಳಿದುಬಂದಿದೆ. ವಕ್ಫ್​ ಮಂಡಳಿ ಶಾಲೆ ಜಾಗ ಕಬಳಿಕೆಗೆ ಮುಂದಾಗಿದೆ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಕ್ಫ ಆಸ್ತಿ ಅಂತ ನಮೂದು ಆಗಿದ್ದನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ.

ನಾಗಮಂಗಲದ ರೈತರಿಗೆ ನೋಟಿಸ್​

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಗ್ರಾಮದ ಸರ್ವೆ ನಂ. 472ರಲ್ಲಿ 20 ಎಕರೆ ಜಾಮೀಯ ಮಸೀದಿಗೆ, 34 ಎಕರೆ 12ಗುಂಟೆ ಸೂಫಿ ಸಂತರಿಗೆ, ಸರ್ವೆ ನಂ 73ರಲ್ಲಿ 6 ಎಕರೆ 6 ಗುಂಟೆ ಖಬರಸ್ಥಾನ್‌ಗೆ ಪಹಣಿ ಮಾಡಲು ಪತ್ರದಲ್ಲಿ ಮನವಿ‌ ಮಾಡಲಾಗಿದೆ. 1921, 1932 ಹಾಗೂ 1940 ರಲ್ಲಿ ಮೈಸೂರು ಸರ್ಕಾರ ಮಸೀದಿ, ಖಬರಸ್ಥಾನ್ ಮತ್ತು ಸೂಫಿ ಸಂತರಿಗೆ ಜಮೀನು ನೀಡಿ ಆದೇಶಿಸಿದೆ.

ಆ ಜಮೀನುಗಳ ಸ್ಕೆಚ್ ಕೂಡ ಆಗಿದೆ ಎಂದು ಆದೇಶ ಸಂಖ್ಯೆಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಪತ್ರದಲ್ಲಿ ಉಲ್ಲೇಖಿಸಿರುವ ಸರ್ವೆ ನಂ. 472ರಲ್ಲಿ 14.24 ಗುಂಟೆ ಗೋಮಾಳ ಇದ್ದು, 5ಕ್ಕೂ ಹೆಚ್ಚು ರೈತರಿಗೆ ಸೇರಿದ 19.88 ಗುಂಟೆ ಜಮೀನು ಆಗಿದೆ. ಗೋಮಾಳ ಹಾಗೂ ರೈತರಿಗೆ ಜಮೀನುಗಳನ್ನು ತಮ್ಮ ಹೆಸರಿಗೆ ಪಹಣಿ ಮಾಡಲು ಕ್ರಮ ವಹಿಸುವಂತೆ ಮುಸ್ಲಿಮರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ವಿಜಯಪುರದಲ್ಲಿ ವಕ್ಫ್‌​ನ ಒಟ್ಟು ಆಸ್ತಿಪಾಸ್ತಿ ಎಷ್ಟಿದೆ? ಎಳೆ ಎಳೆಯಾಗಿ ಬಿಚ್ಚಿಟ್ಟ ಕಂದಾಯ ಸಚಿವ

ಮಠಕ್ಕೆ ನೋಟಿಸ್

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಯರಗಲ್ ಬಿಕೆ ಗ್ರಾಮದ ಸಿದ್ದ ಶಂಕರಲಿಂಗ ಮಠದ ಆಸ್ತಿಗೆ ವಕ್ಫ್ ಮಂಡಳಿ ನೋಟಿಸ್ ಬಂದಿದೆ. ಮಠದ 8.16 ಏಕರೆ ಜಮೀನು ವಕ್ಫ್ ಪಾಲಾಗುವ ಆತಂಕ ಎದುರಾಗಿದೆ. 1952 ರಲ್ಲಿ ಸಿಂದಗಿಯ ಕುಲಕರ್ಣಿ ಮನೆತನದಿಂದ ಮಠಕ್ಕೆ ದಾನವಾಗಿ ನೀಡಿದ್ದ ಆಸ್ತಿ ಇದಾಗಿದೆ. 2018-19ರಲ್ಲಿ ಮಠದ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ಸೇರ್ಪಡೆಯಾಗಿತ್ತು.

ಶಂಕರಲಿಂಗ ಮಹಾಪುರುಷರ ಹೆಸರಿಲ್ಲಿರುವ 8 ಏಕರೆ 16 ಗುಂಟೆ ಜಮೀನಿನ ಪಹಣಿಯಲ್ಲಿ 2018ರಲ್ಲಿ ಯತಿಮ್ ಶಾ ವಾಲಿ ಜಾಮೀಯಾ ಮಸೀದ್ ಸುನ್ನಿ ವಕ್ಫ್ ಬೋರ್ಡ ಹೆಸರು ಸೇರ್ಪಡೆಯಾಗಿತ್ತು. ಈ ವಿಚಾರವಾಗಿ ಇದೀಗ ಮಠದ ಪೀಠಾಧಿಕಾರಿ ಸಿದ್ದರಾಜು ಸ್ವಾಮೀಜಿ ಆತಂಕ‌ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ