AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರ ಜಮೀನಿನ ಮೇಲೆ ವಕ್ಫ್​​ ಬೋರ್ಡ್ ಕಣ್ಣು: ರಾಯಚೂರು, ಕೋಲಾರ ಜಿಲ್ಲೆಗೂ ವ್ಯಾಪಿಸಿದ ವಿವಾದ

ರಾಯಚೂರು, ಕೋಲಾರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ವಕ್ಫ್​​ ಬೋರ್ಡ್ ಭೂಮಿ ವಿವಾದ ತೀವ್ರಗೊಂಡಿದೆ. ಸಾವಿರಾರು ಎಕರೆ ಭೂಮಿಯ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿರುವುದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಹಣ ನೀಡಿ ಖರೀದಿಸಿದ ಜಮೀನುಗಳು ವಕ್ಫ್ ಆಸ್ತಿ ಎಂದು ಘೋಷಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ರೈತರ ಜಮೀನಿನ ಮೇಲೆ ವಕ್ಫ್​​ ಬೋರ್ಡ್ ಕಣ್ಣು: ರಾಯಚೂರು, ಕೋಲಾರ ಜಿಲ್ಲೆಗೂ ವ್ಯಾಪಿಸಿದ ವಿವಾದ
ರೈತರ ಜಮೀನಿನ ಮೇಲೆ ವಕ್ಫ್​​ ಬೋರ್ಡ್ ಕಣ್ಣು: ರಾಯಚೂರು, ಕೋಲಾರ ಜಿಲ್ಲೆಗೂ ವ್ಯಾಪಿಸಿದ ವಿವಾದ
ಭೀಮೇಶ್​​ ಪೂಜಾರ್
| Updated By: ಗಂಗಾಧರ​ ಬ. ಸಾಬೋಜಿ|

Updated on: Nov 02, 2024 | 6:15 PM

Share

ರಾಯಚೂರು, ನವೆಂಬರ್​ 02: ಭೂಮಿ ಕಳೆದುಕೊಳ್ಳೋ ಆತಂಕದಲ್ಲಿದ್ದ ರೈತರು ಪ್ರತಿಭಟನೆ ನಡೆಸಿದ್ದರು. ಸರ್ಕಾರದ ವಿರುದ್ಧ ಸಿಕ್ಕಿದ್ದ ಹೊಸ ಅಸ್ತ್ರ ಹಿಡಿದು ಬಿಜೆಪಿ ಹೋರಾಟಕ್ಕೆ ಇಳಿದಿತ್ತು. ಜಿಲ್ಲೆ ಜಿಲ್ಲೆಗೂ ಹರಡಿದ್ದ ವಕ್ಫ್‌ ವಿವಾದ (Waqf Board) ಇದೀಗ ರಾಯಚೂರು ಜಿಲ್ಲೆಗೂ ಕಾಲಿಟ್ಟಿದೆ. ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಉಲ್ಲೇಖಿಸಿದ್ದನ್ನು ನೋಡಿ ರೈತರು ಶಾಕ್‌ ಆಗಿದ್ದಾರೆ.

ಜಿಲ್ಲೆಯ ಸಿಂಧನೂರು ತಾಲೂಕು ವ್ಯಾಪ್ತಿಯ 40ಕ್ಕೂ ಹೆಚ್ಚು ಗ್ರಾಮಗಳ ರೈತರ ಸುಮಾರು ಎರಡು ಸಾವಿರ ಎಕರೆ ಜಮೀನಿನ ಪಹಣಿಯಲ್ಲಿ ವಕ್ಫ್‌ ಆಸ್ತಿಯೆಂದು ನಮೂದಿಸಿ ಈಗಾಗಲೇ ಹಲವರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಇದನ್ನೂ ಓದಿ: ವಕ್ಫ್ ಜಮೀನನ್ನು ವಾಪಸ್ಸು ಪಡೆಯುವ ಬಗ್ಗೆ ಬೊಮ್ಮಾಯಿ ಮಾತಾಡಿದ ವಿಡಿಯೋ ತೋರಿಸಿದ ಜಮೀರ್

ಮಾಧ್ಯಮಗಳಲ್ಲಿ ವರದಿ ನೋಡಿ ಹಲವು ರೈತರು ಪಹಣಿ ಪರಿಶೀಲಿಸಿದ್ದು, ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಉಲ್ಲೇಖಿಸಿದ್ದನ್ನು ನೋಡಿ ಶಾಕ್‌ ಆಗಿದ್ದಾರೆ. ಹಣ ನೀಡಿ ಖರೀದಿಸಿದ್ದ ಜಮೀನಿನ ಪಹಣಿಯಲ್ಲೂ ವಕ್ಫ್‌ ಆಸ್ತಿ ಎಂದು ಉಲ್ಲೇಖಿಸಲಾಗಿದೆ. ಕೂಡಲೇ ವಕ್ಫ್‌ ಆಸ್ತಿ ಅನ್ನೋದನ್ನು ತೆಗೆದು ಹಾಕುವಂತೆ ರೈತರು ಆಗ್ರಹಿಸಿದ್ದಾರೆ.

ಕೋಲಾರ ಜಿಲ್ಲೆಯಲ್ಲೂ ವಕ್ಫ್‌ ಆಸ್ತಿಯೆಂದು ಪಹಣಿಯಲ್ಲಿ ನಮೂದು

ಅದೇ ರೀತಿಯಾಗಿ ಕೋಲಾರ ಜಿಲ್ಲೆಯಲ್ಲೂ ವಕ್ಫ್‌ ಆಸ್ತಿಯೆಂದು ಪಹಣಿಯಲ್ಲಿ ನಮೂದಿಸಿರುವುದು ಬೆಳಕಿಗೆ ಬಂದಿದೆ. ಕೋಲಾರ ತಾಲೂಕಿನ ದೊಡ್ಡಹಸಾಳ ಗ್ರಾಮದ ಅಮೀರ್ ಸಾಬ್ ಎಂಬುವರಿಗೆ ಮಂಜೂರಾಗಿದ್ದ ಫರೀರ್ ಇನಾಂತಿ 5 ಎಕರೆ 34 ಗುಂಟೆ ಜಾಗದ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ.

ದೊಡ್ಡಹಸಾಳ ಗ್ರಾಮದ ಸರ್ವೆ ನಂಬರ್​ 57ರಲ್ಲಿರುವ ಜಮೀನು. ಸದ್ಯ ಅಮೀರ್ ಸಾಬ್ ಕುಟುಂಬಸ್ಥರು ಆಸ್ತಿ ಪಾಲು ಮಾಡಿಕೊಳ್ಳಲಾಗದೆ ಪರದಾಡುವಂತಾಗಿದೆ. ಕೋರ್ಟ್​ಗೆ ಹಲವು ದಿನಗಳಿಂದ ಅಲೆದಾಡುತ್ತಿದ್ದಾರೆ. ಪಹಣಿಯಲ್ಲಿ ಹಾಗೂ ಮ್ಯುಟೇಷನ್​ನಲ್ಲಿ ನಮೂದಾಗಿರುವ ವಕ್ಫ್​ ಬೋರ್ಡ್​ ಆಸ್ತಿ ತೆಗೆದುಕೊಡುಂತೆ ಅಧಿಕಾರಿಗಳ ಬಳಿ ಕುಟುಂಬ ಅಲೆಯುತ್ತಿದೆ.

ಇದನ್ನೂ ಓದಿ: ವಕ್ಫ್ ವಿವಾದ: ಸಿಎಂ ಕೇವಲ ನೋಟಿಸ್ ವಾಪಸ್ ಪಡೆದರೆ ಸಮಸ್ಯೆ ಬಗೆಹರಿಯಲ್ಲ ಎಂದ ತೇಜಸ್ವಿ ಸೂರ್ಯ

ಇನ್ನು​ ಬಳ್ಳಾರಿ ಜಿಲ್ಲೆಯಲ್ಲೂ ರೈತರಿಗೆ ವಕ್ಫ್​ ಬೋರ್ಡ್​ ನೋಟಿಸ್ ಜಾರಿ ಮಾಡಲಾಗಿದೆ. ಬಳ್ಳಾರಿ ತಾಲೂಕಿನ ಬೊಮ್ಮನಹಾಳದ ಒಂದೇ ಗ್ರಾಮದ 10ಕ್ಕೂ ಹೆಚ್ಚು ರೈತರಿಗೆ ನೋಟಿಸ್ ನೀಡಲಾಗಿದೆ. ವಕ್ಫ್ ನೀಡಿದ​ ನೋಟಿಸ್​ಗೆ​​​​ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಪಿತ್ರಾರ್ಜಿತ 8 ಎಕರೆ ಜಮೀನಿಗೆ ವಕ್ಫ್ ಆಸ್ತಿ‌ ಅಂತಾ ನೋಟಿಸ್ ನೀಡಿದ್ದು, ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.