ವಕ್ಫ್ ವಿವಾದ: ಸಿಎಂ ಕೇವಲ ನೋಟಿಸ್ ವಾಪಸ್ ಪಡೆದರೆ ಸಮಸ್ಯೆ ಬಗೆಹರಿಯಲ್ಲ ಎಂದ ತೇಜಸ್ವಿ ಸೂರ್ಯ

ವಿಜಯಪುರ ವಕ್ಫ್​ ವಿಚಾರ ಸದ್ಯ ಸಾಕಷ್ಟು ಚರ್ಚೆ ಮಾಡಲಾಗಿದೆ. ಇದರ ಬೆನ್ನಲ್ಲೇ ಇಂದು ಸಿಎಂ ಸಿದ್ದರಾಮಯ್ಯ ರೈತರಿಗೆ ನೀಡಿರುವ ವಕ್ಫ್ ನೋಟಿಸ್ ವಾಪಸ್ ಪಡೆಯುಲು ಸೂಚಿಸಿದ್ದಾರೆ. ಇದೀಗ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಕರ್ನಾಟಕದಲ್ಲಿ 50,000 ಎಕರೆಗೂ ಹೆಚ್ಚು ರೈತರ ಭೂಮಿಯನ್ನು ವಕ್ಫ್ ಬೋರ್ಡ್ ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.

ವಕ್ಫ್ ವಿವಾದ: ಸಿಎಂ ಕೇವಲ ನೋಟಿಸ್ ವಾಪಸ್ ಪಡೆದರೆ ಸಮಸ್ಯೆ ಬಗೆಹರಿಯಲ್ಲ ಎಂದ ತೇಜಸ್ವಿ ಸೂರ್ಯ
ವಕ್ಪ್ ವಿವಾದ: ಸಿಎಂ ಕೇವಲ ನೋಟಿಸ್ ವಾಪಸ್ ಪಡೆದರೆ ಸಮಸ್ಯೆ ಬಗೆಹರಿಯಲ್ಲ ಎಂದ ತೇಜಸ್ವಿ ಸೂರ್ಯ
Follow us
ಕಿರಣ್​ ಹನಿಯಡ್ಕ
| Updated By: ಗಂಗಾಧರ​ ಬ. ಸಾಬೋಜಿ

Updated on:Nov 02, 2024 | 3:07 PM

ಬೆಂಗಳೂರು, ನವೆಂಬರ್​ 02: ರೈತರ ಜಮೀನು ವಕ್ಫ್​ ಹೆಸರಿಗೆ ಮಾಡಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ 50 ಸಾವಿರಕ್ಕೂ ಹೆಚ್ಚು ಎಕರೆ ಜಮೀನು ವಕ್ಫ್​​ ವಶಕ್ಕೆ ಪಡೆದುಕೊಂಡಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಕೇವಲ ನೋಟಿಸ್ ವಾಪಸ್ ಪಡೆದರೆ ಸಮಸ್ಯೆ ಬಗೆಹರಿಯಲ್ಲ ಎಂದು ಹೇಳಿದ್ದಾರೆ.

ನ. 6, 7ರಂದು ಜೆಪಿಸಿ ಅಧ್ಯಕ್ಷೆ ಜಗದಾಂಬಿಕಾ ಪಾಲ್ ರಾಜ್ಯಕ್ಕೆ ಭೇಟಿ ಸಾಧ್ಯತೆ

ರೈತರ ಭೂಮಿಯನ್ನ ಯಾವಾಗ ವಕ್ಫ್​​​​ಗೆ ಮಾಡಿಕೊಡುತ್ತೋ ಹೇಳಲಾಗಲ್ಲ. ಈ ವಿಚಾರವನ್ನು ಜಂಟಿ ಸಂಸದೀಯ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ಹುಬ್ಬಳ್ಳಿ, ಬೆಂಗಳೂರಿಗೆ ಬಂದು ರೈತರ ಮನವಿ ಸ್ವೀಕರಿಸಲು ಜೆಪಿಸಿ ಅಧ್ಯಕ್ಷೆ ಜಗದಾಂಬಿಕಾ ಪಾಲ್​ ಅವರಿಗೆ ಮನವಿ ಮಾಡಿದ್ದೇನೆ. ನ. 6, 7ರಂದು ಎರಡು ದಿನ ರಾಜ್ಯ ಪ್ರವಾಸ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರೈತರಿಗೆ ನೀಡಿರುವ ವಕ್ಫ್ ನೋಟೀಸ್ ತಕ್ಷಣ ವಾಪಸ್ ಪಡೆಯಿರಿ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

ಸಿಎಂ ಸೂಚನೆ ಮೇರೆಗೆ ವಕ್ಫ್​ ಸಚಿವ ಜಮೀರ್ ಅಹಮದ್ ಜಿಲ್ಲೆಗಳಿಗೆ ವಕ್ಫ್​​ ಅದಾಲತ್ ಮಾಡುತ್ತಿದ್ದಾರೆ. ವಕ್ಪ್ ಅದಾಲತ್ ಯಾವ ಕಾನೂನಿನ ಕೆಳಗೆ ಬಂದಿದೆ? ಅದಕ್ಕೆ ಯಾವ ಕಾನೂನಿನ ಮಾನ್ಯತೆ ಇದೆ? ಸಂವಿಧಾನದ ಯಾವ ವಿಧಿಯ ಕೆಳಗೆ ಅದಾಲತ್ ನಡೆಸಬಹುದು? ವಕ್ಫ್ ಅದಾಲತ್ ಕಾಂಗ್ರೆಸ್ ಪಕ್ಷದ ಅಸಾಂವಿಧಾನಿಕ ಅನ್ವೇಷಣೆ. ವಕ್ಪ್ ಅದಾಲತ್ ನಿಲ್ಲಿಸುವವರೆಗೆ ಕೂಡ ಬಿಜೆಪಿ ಹೋರಾಟ ನಡೆಯುತ್ತದೆ ಎಂದಿದ್ದಾರೆ.

ದಕ್ಷಿಣ ಭಾರತದಲ್ಲಿ ಹಲವು ರಾಜ್ಯಗಳಲ್ಲಿ ವಕ್ಪ್ ಪ್ರಕರಣಗಳು ಜೆಪಿಸಿ ಮುಂದೆ ಬಂದಿವೆ. ಇಸ್ಲಾಂ ಹುಟ್ಟುವುದಕ್ಕೂ ಹಿಂದಿನ ದೇವಸ್ಥಾನಗಳನ್ನು ನಮ್ಮದು‌ ಅಂತಾ ಹೇಳಿದ್ದಾರೆ. ಯಾವಾಗೆಲ್ಲಾ ಚುನಾವಣೆ ಬಂದಿದೆಯೋ ಆಗೆಲ್ಲಾ ಕಾಂಗ್ರೆಸ್ ವಕ್ಫ್ ಬೋರ್ಡ್​ಗೆ ಪವರ್ ಕೊಡುತ್ತಾ ಬಂದಿದೆ. ಈಗ ರಾಜ್ಯದಲ್ಲಿ ಮೂರು ಉಪಚುನಾವಣೆ ಇರುವ ಕಾರಣ ಮತ್ತೆ ಇದನ್ನು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಫ್ರೀ ಅಂತಾ ಕಾಂಗ್ರೆಸ್​ಗೆ ವೋಟ್ ಹಾಕಿದ್ರೆ: ಮನೆ, ಮಠ ಎಲ್ಲಾ​ ಸಾಬರಿಗೆ ಕೊಡ್ತಾರೆ

ಕಾಂಗ್ರೆಸ್​ನವರು ಉಚಿತ ಬಸ್ ಕೊಡುತ್ತಾರೆ, 2000 ರೂ. ಹಣ ಕೊಡುತ್ತಾರೆ ಅಂತಾ ಅವರಿಗೆ ವೋಟ್​ ಹಾಕಿದರೆ ನಮ್ಮ ದೇವಸ್ಥಾನ, ಮನೆ, ಮಠ ಎಲ್ಲಾ ತೆಗೆದುಕೊಂಡು ಹೋಗಿ ಸಾಬರಿಗೆ ಕೊಟ್ಟು ಬಿಡುತ್ತಾರೆ. ಹೀಗೆ ಕಾಂಗ್ರೆಸ್​ಗೆ ವೋಟ್ ಹಾಕುತ್ತಲೇ ಇದ್ದರೆ ಉಚಿತ ಬಸ್ ಇರಲ್ಲ, ಧರ್ಮಸ್ಥಳ, ಶೃಂಗೇರಿ ದೇವಸ್ಥಾನಗಳೂ ಇರಲ್ಲ ಎಂದಿದ್ದಾರೆ.

ಕೇಂದ್ರ ಸರ್ಕಾರ ವಕ್ಪ್ ಕಾಯ್ದೆಗೆ ತಿದ್ದುಪಡಿ ತರಲು ಜೆಪಿಸಿ ಮಾಡಿದೆ. ಈಜಿಪ್ಟ್, ಸಿಂಗಾಪುರದಲ್ಲಿ ಈಗಾಗಲೇ ವಕ್ಪ್ ನಿಷೇಧ ಮಾಡಿದ್ದಾರೆ. ನಾವ್ಯಾರೂ ವಕ್ಪ್ ಬ್ಯಾನ್ ಮಾಡಿ ಅಂತಾ ಹೇಳುತ್ತಿಲ್ಲ, ಅವರ ಜಮೀನೂ ಕೇಳುತ್ತಿಲ್ಲ. ನಿಮಗೆ ನ್ಯಾಯಯುತವಾಗಿರುವುದನ್ನುಇಟ್ಟುಕೊಳ್ಳಿ, ನಮ್ಮ ಜಾಗಕ್ಕೆ ಬರಬೇಡಿ ಅಂತಾ ಅಷ್ಟೇ ನಾವು ಹೇಳುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಕ್ಫ್ ವಿವಾದ: ರೈತರಿಗೆ ನೀಡಿದ್ದ ನೋಟಿಸ್​ ಹಿಂಪಡೆಯಲು ಡಿಸಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ ಎಂದ ಪರಮೇಶ್ವರ್​

ಜಮೀರ್ ಅಹಮದ್ ಮುಜರಾಯಿ ಮತ್ತು ವಕ್ಪ್ ಅನ್ನು ಹೋಲಿಕೆ ಮಾಡಿದ್ದಾರೆ. ರಾಜ್ಯದಲ್ಲಿ ಎಲ್ಲಾ ಮುಜರಾಯಿ ದೇವಸ್ಥಾನಗಳು ಸರ್ಕಾರದ ನಿಯಂತ್ರಣದಲ್ಲಿದೆ. ವಕ್ಫ್​ಗೆ ಯಾಕೆ ಆ ನಿಯಂತ್ರಣ ಇಲ್ಲ. ನಾಳೆ ಜಮೀರ್ ಅಹಮದ್ ವಕ್ಫ್ ಅನ್ನು ಸರ್ಕಾರದ ನಿಯಂತ್ರಣಕ್ಕೆ ಕೊಡಲು ರೆಡಿ ಇದ್ದಾರಾ? ವಕ್ಫ್​ಗೆ ಇರುವ ಅನಿಯಂತ್ರಿತ ಪವರ್ ಅನ್ನು ಕಡಿತ ಮಾಡಲು ಕೇಂದ್ರ ಸರ್ಕಾರ ಹೋಗುತ್ತಿದೆ. ಅವರ ಒಂದು ಇಂಚು ಜಮೀನು ಕೂಡ ನಮಗೆ ಬೇಡ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:01 pm, Sat, 2 November 24

ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು