Mandya News: ಸ್ನೇಹಿತರ ದಿನದಂದೇ ಮಂಡ್ಯದಲ್ಲಿ ಚಾಕುವಿನಿಂದ ಇರಿದು ಗೆಳೆಯನ ಭೀಕರ ಕೊಲೆ

ನಿನ್ನೆ ಅಂದರೆ ಆಗಸ್ಟ್ 07ರಂದು ಸ್ನೇಹಿತರ ದಿನಾಚರಣೆ ಸಂಭ್ರಮದಲ್ಲಿದ್ದರೆ, ಇತ್ತ ಮಂಡ್ಯದಲ್ಲಿ ತನ್ನ ಗೆಳೆಯನನ್ನೇ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

Mandya News: ಸ್ನೇಹಿತರ ದಿನದಂದೇ ಮಂಡ್ಯದಲ್ಲಿ ಚಾಕುವಿನಿಂದ ಇರಿದು ಗೆಳೆಯನ ಭೀಕರ ಕೊಲೆ
ಚಾಕುವಿನಿಂದ ಇರಿದು ಕೊಲೆ
Edited By:

Updated on: Aug 07, 2023 | 7:25 AM

ಮಂಡ್ಯ, (ಆಗಸ್ಟ್ 07): ನಿನ್ನೆ (ಆಗಸ್ಟ್ 06) ಸ್ನೇಹಿತರ ದಿನಾಚರಣೆಯನ್ನು(Friendship Day) ಆಚರಿಸಲಾಯ್ತು. ಸ್ನೇಹಿತರ (Friends) ದಿನವು ಸ್ನೇಹಿತರ ನಡುವಿನ ಪ್ರೀತಿಯ ಬಂಧಗಳನ್ನು ಆಚರಿಸುವ ವಿಶೇಷ ಸಂದರ್ಭವಾಗಿದೆ. ಹೀಗಾಗಿ ಕೆಲವರು ತಮ್ಮ-ತಮ್ಮ ಗೆಳೆತಿ-ಗೆಳೆಯರಿಗೆ ಶುಭಾಶಯಗಳನ್ನು ತಿಳಿಸಿ ಕೈಗೆ ಫ್ರೆಂಡ್​ಶಿಪ್​ ಬ್ಯಾಂಡ್​ ಕಟ್ಟಿ ಖುಷಿಪಟ್ಟಿದ್ದಾರೆ. ಆದ್ರೆ, ಮಂಡ್ಯದಲ್ಲಿ (Mandya) ಸ್ನೇಹಿತರ ದಿನದಂದೇ ಗೆಳೆಯನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಶುರುವಾದ ಮಾತಿನ ಚಕಮಕಿ ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ಮಂಡ್ಯ ತಾಲೂಕಿನ ಕೀಲಾರ ಗ್ರಾಮದಲ್ಲಿ ನಡೆದಿದ್ದು, ಜಯಂತ್( 24) ಕೊಲೆಯಾದ ಯುವಕ.

ಇದನ್ನೂ ಓದಿ: ಮಚ್ಚು ಹಿಡಿದು ಮೆರೆದವನು ಮಚ್ಚಿನಿಂದಲೇ ಅಂತ್ಯ, ತನ್ನ ಭವಿಷ್ಯವನ್ನು ತಾನೇ ನುಡಿದಿದ್ದ ಹತ್ಯೆಯಾದ ರೌಡಿಶೀಟರ್

ಕ್ಷುಲ್ಲಕ ಕಾರಣಕ್ಕೆ ಶುರುವಾದ ಮಾತಿನ ಚಕಮಕಿಯಲ್ಲಿ ಕೀರ್ತಿ ಎಂಬಾತ ತನ್ನ ಸ್ನೇಹಿತ ಜಯಂತ್ ಎನ್ನುವಾತನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಈ ಬಗ್ಗೆ ಕೆರೆಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,, ತಲೆಮರೆಸಿಕೊಂಡಿರುವ ಕೀರ್ತಿನನ್ನ ಬಂಧಿಸಲು ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Prashantha B

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More
Follow Us