AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: 1.57 ಕೋಟಿ ರೂ. ಮೌಲ್ಯದ ಅಂಬರ್​​ಗ್ರೀಸ್ ಮಾರಾಟಕ್ಕೆ ಯತ್ನ, ಮೂವರ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ 1.57 ಕೋಟಿ ಮೌಲ್ಯದ ಅಂಬರ್​ಗ್ರೀಸ್ ವಶಕ್ಕೆ ಪಡೆದಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಇದೇ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿ 90 ಲಕ್ಷ ಮೌಲ್ಯದ 900 ಗ್ರಾಂ ಅಂಬರ್ ಗ್ರಿಸ್ ವಶಕ್ಕೆ ಪಡೆದಿದ್ದರು.

ಮಂಗಳೂರು: 1.57 ಕೋಟಿ ರೂ. ಮೌಲ್ಯದ ಅಂಬರ್​​ಗ್ರೀಸ್ ಮಾರಾಟಕ್ಕೆ ಯತ್ನ, ಮೂವರ ಬಂಧನ
ಮೂವರನ್ನು ಬಂಧಿಸಿ ಅಂಬರ್​ಗ್ರೀಸ್ ವಶಕ್ಕೆ ಪಡೆದುಕೊಂಡ ಮಂಗಳೂರು ಸಿಸಿಬಿ ಪೊಲೀಸರು
Follow us
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: Rakesh Nayak Manchi

Updated on: Nov 25, 2023 | 8:01 PM

ಮಂಗಳೂರು, ನ.25: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಸಿಸಿಬಿ (Mangaluru CCB) ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ 1.57 ಕೋಟಿ ಮೌಲ್ಯದ ಅಂಬರ್​ಗ್ರೀಸ್ (Ambergris) ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ಪಂಪ್​ವೆಲ್ ಬಳಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ವಿಟ್ಲ ನಿವಾಸಿ ಪ್ಯಾರೇಜಾನ್ ಅಲಿಯಾಸ್ ಸೇಟು, ಬದ್ರುದ್ದೀನ್ ಅಲಿಯಾಸ್ ಬದ್ರು, ತಮಿಳುನಾಡಿನ ಆರ್.ರಾಜೇಶ್ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ 1.5 ಕೆಜಿ ಅಂಬರ್​ಗ್ರೀಸ್ ಅನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸೆಪ್ಟೆಂಬರ್ ತಿಂಗಳಲ್ಲಿ ಇದೇ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿ 90 ಲಕ್ಷ ಮೌಲ್ಯದ ಅಂಬರ್​ಗ್ರೀಸ್ ಅನ್ನು ಜಪ್ತಿ ಮಾಡಿದ್ದರು. ಸೆ.11 ರಂದು ಪಣಂಬೂರು ಬೀಚ್ ಬಳಿ ಅಂಬರ್ ಗ್ರಿಸ್ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿ 900 ಗ್ರಾಂ ಅಂಬರ್ ಗ್ರಿಸ್ ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ‘ಮನೆ ಬಾಗಿಲು ತೆಗೆಯಿರಿ’ ಮಂಗಳೂರಿನ ನಕ್ಸಲ್​​​ ಪೀಡಿತ ಪ್ರದೇಶದ ಒಂಟಿ ಮನೆಗೆ ಅಪರಿಚಿತ ಗ್ಯಾಂಗ್ ಭೇಟಿ

ಏನಿದು ಅಂಬರ್ ಗ್ರಿಸ್

ಸಾಮಾನ್ಯವಾಗಿ ತಿಮಿಂಗಲ ವಾಂತಿಗೆ ಅಂಬರ್ ಗ್ರಿಸ್ ಎನ್ನತ್ತಾರೆ. ಇದಕ್ಕೆ ದೇಶದಲ್ಲಿ ಭಾರೀ ಬೇಡಿಕೆ, ಬೆಲೆ ಇದೆ. 1 ಕೆ.ಜಿ. ತಿಮಿಂಗಿಲ ವಾಂತಿಗೆ ಒಂದು ಕೋಟಿ ರೂ.ಗಿಂತ ಅಧಿಕ ಬೆಲೆ ಇದೆ. ವಾಸ್ತವವಾಗಿ ಇದು ತಿಮಿಂಗಿಲದ ವಾಂತಿಯಲ್ಲ. ಬದಲಿಗೆ ತಿಮಿಂಗಿಲದ ಹೊಟ್ಟೆಯಲ್ಲಿ ಸೃಷ್ಟಿಯಾಗಿ ಗುದದ್ವಾರದಿಂದ ಹೊರಬರುವ ಮೇಣದಂತಹ ವಸ್ತು.

35 ರಿಂದ 45 ಟನ್‌ ಭಾರದ ದೈತ್ಯವಾಗಿರುವ ಸ್ಪರ್ಮ್ ವೇಲ್‌’ ಎಂಬ ತಿಮಿಂಗಿಲ ತಳಿಯೊಂದರಿಂದ ಅಂಬರ್ ಗ್ರಿಸ್ ಹೊರ ಬರುತ್ತದೆ. ಈ ಸ್ಪರ್ಮ್ ವೇಲ್‌ಗಳು 49 ರಿಂದ 59 ಅಡಿ ಉದ್ದ ಇರುತ್ತವೆ. ಸ್ಪರ್ಮ್ ವೇಲ್‌ ತಲೆಯಲ್ಲಿ ಎಣ್ಣೆಯಂತಹ ದ್ರವ ಇರುತ್ತದೆ. ಪುರಾತನ ನಾಗರಿಕತೆಯ ಕಾಲದಲ್ಲಿ ದೀಪಗಳನ್ನು ಬೆಳಗಲು ಈ ಸ್ಪರ್ಮ್ ವೇಲ್‌ಗಳನ್ನು ಕೊಂದು ಅದರ ಎಣ್ಣೆ ಸಂಗ್ರಹಿಸುವ ಪದ್ಧತಿ ಇತ್ತು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ