ಮಂಗಳೂರು, ಸೆಪ್ಟೆಂಬರ್ 12: ವಕ್ಫ್ (Waqf property) ತಿದ್ದುಪಡಿ ಕಾಯ್ದೆ-2024 ಜಾರಿಗೆ ಪ್ರಯತ್ನ ವಿಚಾರವಾಗಿ ಕಾಯ್ದೆ ಜಾರಿ ವಿರೋಧಿಸಿ ನಗರದ ಕ್ಲಾಕ್ ಟವರ್ ಬಳಿ ಎಸ್ಡಿಪಿಐ ಪ್ರತಿಭಟನೆ ಮಾಡಿದೆ. ಈ ವೇಳೆ ಪ್ರತಿಭಟನೆಯಲ್ಲಿ ಎಸ್ಡಿಪಿಐನ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾ ಸಭೆಯಲ್ಲ ಎಸ್ಡಿಪಿಐ ಮುಖಂಡ ರಿಯಾಝ್ ಕಡಂಬು ಮಾಧ್ಯಮದವರೊಂದಿಗೆ ಮಾತನಾಡಿದ್ದು, ವಕ್ಫ್ ಆಸ್ತಿ ಹಿಂದೆಯೂ ಮುಸಲ್ಮಾನರದ್ದಾಗಿತ್ತು. ಇಂದು ಹಾಗೂ ಮುಂದೆಯೂ ಮುಸಲ್ಮಾನರದ್ದಾಗಿರುತ್ತದೆ. ಇದನ್ನು ಯಾರಿಂದಲೂ ಕಬಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಈದ್ ಮೆರವಣಿಗೆ ವೇಳೆ ಹಿಂದೂಗಳು ದಾಳಿ ಮಾಡಿದ್ರೆ ಏನಾಗುತ್ತೆ ಊಹೆ ಇದೆಯಾ: ಪಂಪ್ ವೆಲ್ ಪ್ರಚೋದನಕಾರಿ ಹೇಳಿಕೆ
ವಕ್ಫ್ ಆಸ್ತಿಯ ಉಳಿವಿಗಾಗಿ ಯಾವುದೇ ತ್ಯಾಗಕ್ಕೂ ನಾವು ಸಿದ್ಧ. ಅಗತ್ಯ ಬಿದ್ದಲ್ಲಿ ಪ್ರಾಣ ಅರ್ಪಿಸಿ ವಕ್ಫ್ ಆಸ್ತಿ ಉಳಿಸುತ್ತೇವೆ. ವಕ್ಫ್ ಆಸ್ತಿ ಮೇಲೆ ಬಿಜೆಪಿಗಾಗಲಿ ಯಾವುದೇ ಸರಕಾರಕ್ಕಾಗಲಿ ಅಧಿಕಾರವಿಲ್ಲ. ಬಾಬರಿ ಮಸೀದಿಯನ್ನು ಕಸಿದುಕೊಂಡಂತೆ ವಕ್ಫ್ ಆಸ್ತಿ ಕಸಿದುಕೊಳ್ಳಲು ಮುಂದಾಗಬೇಡಿ. ಜೀವ ಭಯ ಬಿಟ್ಟು ಸಾವಿಗೂ ಹೆದರದೆ ಹೋರಾಟ ಮುಂದುವರೆಸುತ್ತೇವೆ ಎಂದಿದ್ದಾರೆ.
ಮುಸಲ್ಮಾನರ ಮೇಲೆ ದಾಳಿ ನಡೆದಾಗ ಪ್ರತಿಭಟಿಸಿದವರನ್ನು ಜೈಲಿಗೆ ಹಾಕಿದರು. ಬೀದಿಗಿಳಿದು ಹೋರಾಡಿದ ಕಾರಣ ಎನ್‌ಆರ್‌ಸಿಯನ್ನು ಶಕ್ತವಾಗಿ ಎದುರಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಗಲಭೆ ಮಂಗಳೂರಿನ ವಿವಿಧೆಡೆ ಪ್ರತಿಭಟನೆ ಮಾಡಲಾಗಿದೆ. ಮಂಗಳೂರಿನ ಮಲ್ಲಿಕಟ್ಟೆ ಸರ್ಕಲ್ ಬಳಿ ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ಪ್ರತಿಭಟನೆ ಮಾಡಲಾಗಿದೆ.
ಇದನ್ನೂ ಓದಿ: ನಾಗಮಂಗಲ ಗಲಭೆ ಪ್ರಕರಣ; ಯಾವುದೇ ಧರ್ಮದವರಾಗಿರಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು-ಸಿದ್ದರಾಮಯ್ಯ
ಪ್ರಕರಣದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಜಿಹಾದಿಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.