ಕೊರೊನಾ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದ ಮಣಿಪಾಲ ವಿಶ್ವವಿದ್ಯಾಲಯ
ಇಡೀ ಕ್ಯಾಂಪಸ್ಅನ್ನು ಕಂಟೈನ್ಮೆಂಟ್ ಮಾಡಿ, ಫಿಲ್ಟರ್ ಮಾಡಿದ್ದೇ ಕೊರೋನಾವನ್ನು ನಿಯಂತ್ರಣಕ್ಕೆ ತರುವಲ್ಲಿ ಪ್ರಯತ್ನ ಪಟ್ಟಿದ್ದು, ಈ ಕಾರ್ಯ ಯಶಸ್ವಿಯಾಗಿದೆ ಎಂದು ಮಣಿಪಾಲ ವಿವಿ ರಿಜಿಸ್ಟಾರ್ಡಾ ನಾರಾಯಣ ಸಭಾಹಿತ್ ಹೇಳಿದ್ದಾರೆ.
ಉಡುಪಿ: ಕೊರೊನಾ ವಿರುದ್ಧ ದೇಶ ಯುದ್ಧ ಸಾರಿದೆ, ಪ್ರಧಾನಿ ಮೋದಿ ಮೈಕ್ರೋ ಕಂಟೈನ್ಮೆಂಟ್ ಝೋನ್ ಒಂದೇ ಕೊರೊನಾ ನಿಯಂತ್ರಣಕ್ಕೆ ಸುಲಭ ಸೂತ್ರ ಎಂದಿದ್ದಾರೆ. ಈ ನಡುವೆ ಕೊರೊನಾ ಸ್ಪೋಟದಿಂದ ನಲುಗಿದ್ದ, ಮಣಿಪಾಲದ ಎಂಐಟಿ ಕ್ಯಾಂಪಸ್ ಕೊರೊನಾದಿಂದ ಎದ್ದು ಬಂದಿದೆ. ಕಳೆದೊಂದು ವಾರದಿಂದ ಯಾವುದೇ ಕೊವಿಡ್ ಪ್ರಕರಣಗಳು ಇಲ್ಲದಿರುವುದರಿಂದ ಎಂಐಟಿ ಮಾಡೆಲ್ ಈಗ ಎಲ್ಲಾ ಕಡೆ ಚರ್ಚೆ ಆಗುತ್ತಿದೆ. ಹಾಗಿದ್ದರೆ ಏನಿದು ಎಂಐಟಿ ಮಾಡೆಲ್ ಎಂಬ ಸುದ್ದಿಗೆ ಉತ್ತರ ಇಲ್ಲಿದೆ.
ಮಣಿಪಾಲ ವಿವಿಯಲ್ಲಿ 56ಕ್ಕೂ ಹೆಚ್ಚು ದೇಶದ ವಿದ್ಯಾರ್ಥಿಗಳು ಇದ್ದಾರೆ. ಎಂಐಟಿಯಲ್ಲಿ 30 ವಿಭಾಗದ ವಿದ್ಯಾರ್ಥಿಗಳು ಇದ್ದಾರೆ. ಒಂದೇ ಕ್ಯಾಂಪಸ್ನ 7000 ವಿದ್ಯಾರ್ಥಿಗಳೂ, 3000 ಸಿಬಂದಿಗಳನ್ನು ಕೊರೊನಾದಿಂದ ತಪ್ಪಿಸುವುದು ಜಿಲ್ಲಾಡಳಿತ, ಆರೋಗ್ಯ ಇಲಾಖೆಗೂ ಸವಾಲಾಗಿತ್ತು. ಕಂಟೈನ್ಮೆಂಟ್ ಘೋಷಣೆ ಆಗುತ್ತಿದ್ದ ಹಾಗೆ, ಕ್ಯಾಂಪಸ್ನಲ್ಲಿದ್ದ ವಿದ್ಯಾರ್ಥಿಗಳನ್ನು ಬ್ಲಾಕ್ ಮಾಡಲಾಯ್ತು. ಫೀವರ್ ಕ್ಲೀನಿಕ್ ತೆರೆದು ಎಲ್ಲರ ಸ್ಯಾಂಪಲ್ ತೆಗೆಯಲಾಯಿತು. ದಿನಕ್ಕೆ 1500 ಕ್ಕೂ ಅಧಿಕ ಸ್ವಾಬ್ ಟೆಸ್ಟ್ ನಡೆಸಲಾಯ್ತು. ಎಲ್ಲಾ ಪ್ರೈಮರಿ ಕಾಂಟ್ಯಾಕ್ಟ್ ಟ್ರೇಸ್ ಮಾಡಲಾಯ್ತು. ದಿನಕ್ಕೆ 200 ಕೇಸ್ ಪತ್ತೆ ಆದರೂ ದೃತಿಗೆಡಲಿಲ್ಲ. ಕ್ಯಾಂಪಸ್ನಲ್ಲಿ ಒಟ್ಟು ಪ್ರಕರಣ 1055 ಕ್ಕೆ ಏರಿಕೆಯಾದಾಗ ಈ ಹೋರಾಟ ನಿರ್ಣಾಯಕ ಘಟ್ಟ ತಲುಪಿತ್ತು ಎಂದು ಡಿಹೆಚ್ಒ ಡಾ.ಸುಧೀರ ಚಂದ್ರ ಸೂಡ ಹೇಳಿದ್ದಾರೆ.
ಮಾರ್ಚ್ ತಿಂಗಳ ಕೊರೊನಾ ಪ್ರಕರಣಗಳ ಸಂಖ್ಯೆ ಮಾರ್ಚ್ 20 : 42 ಪ್ರಕರಣ ಮಾರ್ಚ್ 21 : 145 ಪ್ರಕರಣ ಮಾರ್ಚ್ 22 : 72 ಪ್ರಕರಣ ಮಾರ್ಚ್ 25 : 111 ಪ್ರಕರಣ ಮಾರ್ಚ್ 26 : 184 ಪ್ರಕರಣ ಮಾರ್ಚ್ 27 : 136 ಪ್ರಕರಣ ಮಾರ್ಚ್ 28 : 70 ಪ್ರಕರಣ ಮಾರ್ಚ್ 29 : 41 ಪ್ರಕರಣ
ಮಾರ್ಚ್ ಅಂತ್ಯದ ವೇಳೆಗೆ 40ರ ಆಸುಪಾಸಿನಲ್ಲಿದ್ದ ಪ್ರಕರಣಗಳು ಏಪ್ರಿಲ್ 1 ರಿಂದ 11, 22, 05, 06, 02, ಹೀಗೆ ಇಳಿಮುಖವಾಗುತ್ತಾ ಏಪ್ರಿಲ್ 6ರ ನಂತರ ಶೂನ್ಯಕ್ಕೆ ಇಳಿದಿದೆ. ಇಡೀ ಕ್ಯಾಂಪಸ್ ಅನ್ನು ಕಂಟೈನ್ಮೆಂಟ್ ಮಾಡಿ, ಫಿಲ್ಟರ್ ಮಾಡಿದ್ದೇ ಕೊರೋನಾವನ್ನು ನಿಯಂತ್ರಣಕ್ಕೆ ತರುವಲ್ಲಿ ಸಹಕಾರಿಯಾಗಿದೆ. ಹೀಗಾಗಿಯೇ ನಮ್ಮ ಕಾರ್ಯ ಯಶಸ್ವಿಯಾಗಿದೆ ಎಂದು ಮಣಿಪಾಲ ವಿವಿ ರಿಜಿಸ್ಟ್ರಾರ್ ನಾರಾಯಣ ಸಭಾಹಿತ್ ಹೇಳಿದ್ದಾರೆ.
ಪ್ರಧಾನಿ ಹೇಳಿದ ಮೈಕ್ರೋ ಕಂಟೈನ್ಮೆಂಟ್ ಒಂದೇ ಕೊರೋನಾ ಎರಡನೇ ಅಲೆಗೆ ಪರಿಹಾರ ಎನ್ನುವುದು ಎಂಐಟಿಯಲ್ಲಿ ಸಾಭೀತಾಗಿದೆ. ಈಗ ಬಫರ್ ಜೋನ್ನಲ್ಲಿ ಟೆಸ್ಟಿಂಗ್ ನಡೆಯುತ್ತಿದೆ. ಮುಂದೆ ಕಂಟೈನ್ಮೆಂಟ್ ರದ್ದಾಗಲಿದೆ. ಒಟ್ಟಾರೆ ಎಂಐಟಿ ಕೊರೊನಾ ತಡೆಗಟ್ಟುವಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ.
ಇದನ್ನೂ ಓದಿ:
ಇಂದಿನಿಂದ ರೈಲ್ವೆ ಪ್ಲಾಟ್‌ಫಾರ್ಮ್ ಟಿಕೆಟ್ ದರ 50 ರೂ.ಗೆ ಹೆಚ್ಚಳ; ಕೊರೊನಾ ನಿಯಂತ್ರಣಕ್ಕೆ ಕ್ರಮ