AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಕಣ ಸೂರ್ಯ ಗ್ರಹಣ, ತುಮಕೂರಿನ ಬಹುತೇಕ ದೇಗುಲಗಳು ಬಂದ್

ತುಮಕೂರು: ನಾಳೆ ಕಂಕಣ ಸೂರ್ಯ ಗ್ರಹಣ ಇರುವ ಹಿನ್ನೆಲೆ ತುಮಕೂರು ಜಿಲ್ಲೆಯ ಬಹುತೇಕ ದೇಗುಲಗಳ ಬಾಗಿಲು ಬಂದ್ ಆಗಲಿವೆ. ಇಂದು ಸಂಜೆಯಿಂದಲೇ ದೇವಾಲಯಗಳಲ್ಲಿ ಗ್ರಹಣ ಶಾಂತಿ ಪೂಜೆ ಆಚರಣೆ ಮಾಡಲಾಗುತ್ತದೆ. ರಾತ್ರಿ ಪೂಜೆ ಸಲ್ಲಿಸಿ ನಂತರ ದೇವಾಲಯಗಳನ್ನು ಬಂದ್ ಮಾಡಲಾಗುತ್ತದೆ. ಗ್ರಹಣ ಹಿನ್ನಲೆ ಯಡಿಯೂರು ಸಿದ್ದಲಿಂಗೇಶ್ವರನಿಗೆ ವಿಶೇಷ ಪೂಜೆ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಗ್ರಹಣದ ನಂತರ ರುದ್ರಾಭಿಷೇಕ ಆಯೋಜಿಸಲಾಗಿದೆ. ದಸರೀಘಟ್ಟ ಚೌಡೇಶ್ವರಿ ದೇವಸ್ಥಾನ, ಗೊರವನಹಳ್ಳಿ ಲಕ್ಷ್ಮಿದೇವಸ್ಥಾನ, ಗುಬ್ಬಿ ಚನ್ನಬಸವೇಶ್ವರ ದೇವಾಸ್ಥಾನ, ದೇವರಾಯನದುರ್ಗದ ಯೋಗ ನರಸಿಂಹ […]

ಕಂಕಣ ಸೂರ್ಯ ಗ್ರಹಣ, ತುಮಕೂರಿನ ಬಹುತೇಕ ದೇಗುಲಗಳು ಬಂದ್
ಸಾಧು ಶ್ರೀನಾಥ್​
|

Updated on: Dec 25, 2019 | 9:07 AM

Share

ತುಮಕೂರು: ನಾಳೆ ಕಂಕಣ ಸೂರ್ಯ ಗ್ರಹಣ ಇರುವ ಹಿನ್ನೆಲೆ ತುಮಕೂರು ಜಿಲ್ಲೆಯ ಬಹುತೇಕ ದೇಗುಲಗಳ ಬಾಗಿಲು ಬಂದ್ ಆಗಲಿವೆ. ಇಂದು ಸಂಜೆಯಿಂದಲೇ ದೇವಾಲಯಗಳಲ್ಲಿ ಗ್ರಹಣ ಶಾಂತಿ ಪೂಜೆ ಆಚರಣೆ ಮಾಡಲಾಗುತ್ತದೆ. ರಾತ್ರಿ ಪೂಜೆ ಸಲ್ಲಿಸಿ ನಂತರ ದೇವಾಲಯಗಳನ್ನು ಬಂದ್ ಮಾಡಲಾಗುತ್ತದೆ.

ಗ್ರಹಣ ಹಿನ್ನಲೆ ಯಡಿಯೂರು ಸಿದ್ದಲಿಂಗೇಶ್ವರನಿಗೆ ವಿಶೇಷ ಪೂಜೆ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಗ್ರಹಣದ ನಂತರ ರುದ್ರಾಭಿಷೇಕ ಆಯೋಜಿಸಲಾಗಿದೆ. ದಸರೀಘಟ್ಟ ಚೌಡೇಶ್ವರಿ ದೇವಸ್ಥಾನ, ಗೊರವನಹಳ್ಳಿ ಲಕ್ಷ್ಮಿದೇವಸ್ಥಾನ, ಗುಬ್ಬಿ ಚನ್ನಬಸವೇಶ್ವರ ದೇವಾಸ್ಥಾನ, ದೇವರಾಯನದುರ್ಗದ ಯೋಗ ನರಸಿಂಹ ದೇವಸ್ಥಾನ ಸೇರಿದ್ದಂತೆ ಹಲವು ದೇವಾಲಯಗಳು ಗ್ರಹಣ ಕಾಲದಲ್ಲಿ ಮುಚ್ಚಿರಲಿವೆ. ಗ್ರಹಣ ಪ್ರಯುಕ್ತ ನೋಣವಿನಕೆರೆ ಕಾಡುಸಿದ್ದೇಶ್ವರ ಮಠದಲ್ಲಿ ಕರಿವೃಷಭ ದೇಶಿ ಕೇಂದ್ರ ಸ್ವಾಮೀಜಿಯಿಂದ ವಿಶೇಷ ಕಳಸ ಪೂಜೆ ಮಾಡಲಾಗುತ್ತದೆ.