ರಾಯಚೂರು: ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುಮಾವಣೆಯ ಮತ ಎಣಿಕೆ ಭಾನುವಾರ (ಮೇ 2) ನಡೆಯಲಿದೆ. ರಾಯಚೂರು ನಗರದ ಎಸ್ಆರ್ಪಿಎಸ್ ಕಾಲೇಜಿನಲ್ಲಿ ಕೋವಿಡ್ ನಿಯಮಗಳನ್ನು ಗಮನದಲ್ಲಿ ಇರಿಸಿಕೊಂಡೇ ಮತ ಎಣಿಕೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ವೆಂಕಟೇಶ ಕುಮಾರ್ ಶನಿವಾರ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಮತಎಣಿಕೆಗಾಗಿ 3 ಕೊಠಡಿಗಳಲ್ಲಿ ಒಟ್ಟು 12 ಟೇಬಲ್ಗಳನ್ನ ಕಾಯ್ದಿರಿಸಲಾಗಿದೆ. 12 ಮೇಜುಗಳಿಗೆ 12 ಮತ ಎಣಿಕೆ ಮೇಲ್ವಿಚಾರಕರು, 12 ಮತ ಎಣಿಕೆ ಸಹಾಯಕರು, 12 ಮೈಕ್ರೋ ಅಬ್ಸರ್ವರ್ಗಳನ್ನು ನೇಮಕ ಮಾಡಲಾಗಿದೆ. 8 ತಂಡಗಳನ್ನು ಹೆಚ್ಚುವರಿಯಾಗಿ ಕಾಯ್ದಿರಿಸಲಾಗಿದೆ. ಮತ ಎಣಿಕೆಗಾಗಿ ಒಟ್ಟು 210 ಅಧಿಕಾರಿಗಳು / ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪೊಲೀಸ್ ಇಲಾಖೆ ವತಿಯಿಂದ 296 ಅಧಿಕಾರಿ / ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಈ ಪೈಕಿ 102 ಪೊಲೀಸ್ ಸಿಬ್ಬಂದಿಯನ್ನು ಮತ ಎಣಿಕೆ ಕೇಂದ್ರದಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ. ಕೋವಿಡ್ ಮುಂಜಾಗ್ರತ ಕ್ರಮವಾಗಿ ಜಿಲ್ಲಾ ಆರೋಗ್ಯಾಧಿಕಾರಿಯನ್ನು ಕೋವಿಡ್-19 ಮತ ಎಣಿಕೆ ಕೇಂದ್ರದ ನೋಡೆಲ್ ಅಧಿಕಾರಿಯಾಗಿ ಹಾಗೂ ತಾಲೂಕು ಆರೋಗ್ಯಾಧಿಕಾರಿಯನ್ನು ಮತ ಎಣಿಕೆ ಕೇಂದ್ರದ ಸಹಾಯಕ ನೋಡೆಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸುವ ಪ್ರತಿ ಅಭ್ಯರ್ಥಿ, ಎಜೆಂಟ್, ಮತ ಎಣಿಕೆ ಅಧಿಕಾರಿ, ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು ಹಾಗೂ ಪೊಲೀಸ್ ಸಿಬ್ಬಂದಿಗೆ ಆರ್ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದೆ. ಇವರು ನೆಗೆಟೆವ್ ವರದಿಯನ್ನು ಸಲ್ಲಿಸಿದ ನಂತರವೇ ಮತ ಎಣಿಕೆ ಕೇಂದ್ರದ ಒಳಗಡೆ ಪ್ರವೇಶಿಸಲು ಅವಕಾಶ ಸಿಗುತ್ತದೆ.
ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಸ್ಯಾನಿಟೈಸೇಶನ್ಗೆ ಅಗತ್ಯ ಸಿದ್ಧತೆ ಮಾಡಿಕಕೊಳ್ಳಲಾಗಿದೆ. ದೈಹಿಕ ತಾಪಮಾನ ಹೆಚ್ಚಾಗಿರುವರಿಗೆ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ನಿಷೇಧಿಸಿದೆ. ಮತ ಎಣಿಕೆ ಕರ್ತವ್ಯದ ಮೇಲಿರುವ ಎಲ್ಲರಿಗೂ ಮಾಸ್ಕ್, ಫೆಸ್ಶೀಲ್ಡ್ ಹಾಗೂ ಗ್ಲೌಸ್ ಧರಿಸಲು ಸೂಚಿಸಲಾಗಿದೆ.
ಮತ ಎಣಿಕೆ ಕೇಂದ್ರದೊಳಗೆ ಏಜೆಂಟರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಆದರೆ ಪ್ರತಿ ಇಬ್ಬರು ಏಜೆಂಟರ ಮಧ್ಯೆ ಒಬ್ಬ ಎಜೆಂಟ್ ಪಿಪಿಇ ಕಿಟ್ ಧರಿಸಿ ಕೂರಬೇಕು ಎಂದು ಸೂಚಿಸಲಾಗಿದೆ. ಮತ ಎಣಿಕೆ ಕೇಂದ್ರದ ಕೋಣೆ ಹಾಗೂ ಆವರಣವನ್ನು ಆರೋಗ್ಯಕರವಾಗಿಡಲು ಸ್ಯಾನಿಟೈಸೇಶನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಎಸಿ ಹಾಗೂ ಫ್ಯಾನ್ಗಳನ್ನು ಅಳವಡಿಸಲಾಗಿದೆ.
ಕೋವಿಡ್ ಮುಂಜಾಗ್ರತ ಕ್ರಮವಾಗಿ ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಫೋಸ್ಟೈಲ್ ಬ್ಯಾಲೆಟ್ ಏಣಿಕೆಗಾಗಿ ಪ್ರತ್ಯೇಕವಾಗಿ ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಮುಂಜಾಗ್ರತ ಕ್ರಮವಾಗಿ ಸದರಿ ದಿನದಂದು ವಿಜೇತ ಅಭ್ಯರ್ಥಿ ಪರ ಮೆರವಣಿಗೆ ಮಾಡುವುದು ಮತ್ತು ಜನರು ಗುಂಪುಗುಡುವುದನ್ನು ನಿಷೇಧಿಸಲಾಗಿದೆ. ಅಭ್ಯಥಿಯ ಜೊತೆಗೆ ಇಬ್ಬರಿಗೆ ಮಾತ್ರ ವಿಜೇತ ಪ್ರಮಾಣ ಪತ್ರವನ್ನು ಸ್ವೀಕರಿಸಲು ಅವಕಾಶ ನೀಡಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ನಿಯಮಗಳ ಉಲ್ಲಂಘನೆ ಕಂಡುಬಂದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
(Maski By Election Preparation Underway for Counting Day)
ಇದನ್ನೂ ಓದಿ: TV9 Byelection Exit Poll: ಮಸ್ಕಿಯಲ್ಲಿ ಕಾಂಗ್ರೆಸ್ ಮುಂದು, ಫೋಟೋ ಫಿನಿಶ್ ಸಾಧ್ಯತೆ
ಇದನ್ನೂ ಓದಿ: Karnataka Bypolls: ಬೆಳಗಾವಿ ಶೇ 54, ಮಸ್ಕಿ ಶೇ 70, ಬಸವಕಲ್ಯಾಣ ಶೇ 59 ಮತದಾನ: ಮೇ 2ಕ್ಕೆ ಮತ ಎಣಿಕೆ
Published On - 5:02 pm, Sat, 1 May 21