TV9 Byelection Exit Poll: ಮಸ್ಕಿಯಲ್ಲಿ ಕಾಂಗ್ರೆಸ್ ಮುಂದು, ಫೋಟೋ ಫಿನಿಶ್ ಸಾಧ್ಯತೆ
Maski Byelection Exit Poll: ಏಪ್ರಿಲ್ 17 ರಂದು ನಡೆದಿದ್ದ ಉಪಚುನಾವಣೆಯ ಮತ ಎಣಿಕೆ ರವಿವಾರ ನಡೆಯಲಿದೆ. ಈ ಮಧ್ಯೆ ಟಿವಿ9 ನಡೆಸಿದ್ದ ಚುನಾವಣೋತ್ತರ ಸಮೀಕ್ಷೆಯ ವಿವರ ಹೊರಬಿದ್ದಿದ್ದು ಆ ಪ್ರಕಾರ, ಕಾಂಗ್ರೆಸ್ ಮುಂದಿದೆ.
ಏಪ್ರಿಲ್ 17 ರಂದು ನಡೆದ ಉಪಚುನಾವಣೆಯ ಮತ ಎಣಿಕೆ ನಾಡಿದ್ದು ರವಿವಾರ ನಡೆಯಲಿದೆ. ಈ ಬಾರಿ ಕರ್ನಾಟಕದಲ್ಲಿ ಉಪಚುನಾವಣೆ ಕಾವು ಈ ಬಾರಿ ಜೋರಾಗಿಯೇ ಇತ್ತು. ಒಂದು ಕಡೆ, ಕೊರೊನಾ ಎರಡನೇ ಅಲೆ ಆತಂಕ ಮತ್ತೊಂದೆಡೆ ಸಾರಿಗೆ ನಿಗಮಗಳ ಮುಷ್ಕರ ನಡುವೆಯೂ ಜನರು ಮತಗಟ್ಟೆಗಳಿಗೆ ಬಂದು ಮತ ಚಲಾವಣೆ ಮಾಡಿದ್ದರು. ರಾಜಕೀಯವಾಗಿಯೂ ಜಿದ್ದಾಜಿದ್ದಿ ಜೋರಾಗಿಯೇ ಇತ್ತು. ಟಿವಿ9 ನಡೆಸಿದ ಎಕ್ಸಿಟ್ ಪೋಲ್ನ ವಿವರ ಈಗ ಹೊರಬಿದ್ದಿದ್ದು, ಆ ಪ್ರಕಾರ ಮಸ್ಕಿಯಲ್ಲಿ ಕಾಂಗ್ರೆಸ್ ಮುಂದಿದೆ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಅಂತರ ಬರೀ 1 ಪ್ರತಿಶತ ಮಾತ್ರ. ಆದ್ದರಿಂದ, ವಿಜಯದ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬುದು ರವಿವಾರವೇ ಹೊರಬೀಳಲಿದೆ. ಈ ಎಕ್ಸಿಟ್ ಪೋಲ್ನಲ್ಲಿ ಯಾವ ರೀತಿಯ ಪ್ರಶ್ನೆ ಕೇಳಲಾಗಿತ್ತು ಮತ್ತು ಜನ ಅದಕ್ಕೆ ಹೇಗೆ ಉತ್ತರ ಕೊಟ್ಟಿದ್ದಾರೆ ಎಂಬ ವಿವರ ಇಲ್ಲಿದೆ.
ಮಸ್ಕಿ ಮತದಾನ ವಿವರ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 70.48ರಷ್ಟು ಮತದಾನವಾಗಿದೆ. ಈ ಹಿಂದೆ 2018ರ ವಿಧಾನಸಭಾ ಚುನಾವಣೆಯಲ್ಲಿ ಶೇ. 69 ರಷ್ಟು ಮತದಾನವಾಗಿತ್ತು. ಒಟ್ಟು 2,06,429 ಮತದಾರರ ಪೈಕಿ 1,45,482 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆಯು ಪುರುಷರಗಿಂತಲೂ ಹೆಚ್ಚಿನ ಪ್ರಮಾಣದಲ್ಲಿತ್ತು. 73,311 ಪುರುಷ ಮತದಾರರು, 72,169 ಮಹಿಳಾ ಮತದಾರರು ಮತ ನೀಡಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಮತದಾನದ ಪ್ರಮಾಣ ಹೆಚ್ಚಾಗಿರುವುದು ಗಮನಾರ್ಹ ಸಂಗತಿ.
2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಜಯಗಳಿಸಿದ್ದ ಪ್ರತಾಪ್ಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೂ ಶನಿವಾರವೇ ಮತದಾನ ನಡೆಯಲಿದೆ. ಈ ಬಾರಿ ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ, ಕಾಂಗ್ರೆಸ್ನಿಂದ ಬಸನಗೌಡ ತುರುವಿಹಾಳ ನಡುವೆ ನೇರ ಹಣಾಹಣಿ ಇದೆ. ಕಣದಲ್ಲಿ 8 ಅಭ್ಯರ್ಥಿಗಳಿದ್ದಾರೆ.
ಟಿವಿ9 ಮತದಾನೋತ್ತರ ಸಮೀಕ್ಷೆಯಲ್ಲಿ ಯಾವೆಲ್ಲ ಪ್ರಶ್ನೆ ಕೇಳಲಾಗಿತ್ತು ಮತ್ತು ಜನ ಯಾವ ರೀತಿಯ ಉತ್ತರ ಕೊಟ್ಟಿದ್ದರು ಎಂಬ ವಿವರ ಇಲ್ಲಿದೆ ನೋಡಿ.
ಮಸ್ಕಿ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ – ಎಕ್ಸಿಟ್ ಪೋಲ್ ಫಲಿತಾಂಶ
Q6 | ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲ್ ಅವರು ಪಕ್ಷ ಬದಲಿಸಿದ್ದನ್ನು ನೀವು ಒಪ್ಪಿಕೊಳ್ಳುತ್ತೀರಾ? | |||||||||
ಉತ್ತರ | 1 | ಬದಲಿಸಿದ್ದು ಸರಿ 27% | 2 | ಬದಲಿಸಿದ್ದು ತಪ್ಪು 41% | 3 | ಹೇಳೋಕಾಗಲ್ಲ 32% | ||||
Q7 | ನಿಮ್ಮ ಪ್ರಕಾರ ಸಿಡಿ ಪ್ರಕರಣ ಯಾವ ಪಕ್ಷಕ್ಕೆ ಹೆಚ್ಚು ಹೊಡೆತ ಕೊಟ್ಟಿದೆ? | |||||||||
ಉತ್ತರ | 1 | ಬಿಜೆಪಿ 54% | 2 | ಕಾಂಗ್ರೆಸ್ 14% | 3 | ಹೇಳೋಕಾಗಲ್ಲ 32% | ||||
Q8 | ನಿಮಗೆ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರದ ಕಾರ್ಯವೈಖರಿ ಇಷ್ಟವಾಗಿದೆಯೇ? | |||||||||
ಉತ್ತರ | 1 | ಹೌದು 40% | 2 | ಇಲ್ಲ 42% | 3 | ಹೇಳೋಕಾಗಲ್ಲ 18% | ||||
Q9 | ನೀವು ಯಾವ ನಾಯಕನಿಂದ ಪ್ರಭಾವಿತರಾಗಿ ಈ ಚುನಾವಣೆಯಲ್ಲಿ ಮತ ಚಲಾಯಿಸಿದ್ದೀರಾ? | |||||||||
ಉತ್ತರ | 1 | ಬಿ.ಎಸ್.ಯಡಿಯೂರಪ್ಪ 42% | 2 | ಸಿದ್ದರಾಮಯ್ಯ 51% | 3 | ಹೇಳೋಕಾಗಲ್ಲ 7% | ||||
Q10 | ಮಸ್ಕಿ ಉಪ ಚುನಾವಣೆಯಲ್ಲಿ ಈಗ ನೀವು ಯಾರಿಗೆ ಮತ ಹಾಕಿದ್ದೀರಿ? | |||||||||
ಉತ್ತರ | 1 | ಬಿಜೆಪಿ 47% | 2 | ಕಾಂಗ್ರೆಸ್ 48% | 3 | ಇತರೆ 5% | ||||
(TV9 exit poll predicts Congress candidate has a slight chance in Maski assembly bypoll)
ಇದನ್ನೂ ಓದಿ: ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ವೇಳೆ ಆಯೋಗ ಮುಟ್ಟುಗೋಲು ಹಾಕಿಕೊಂಡ ಮೊತ್ತ ₹ 1000 ಕೋಟಿ
ಇದನ್ನೂ ಓದಿ: ರಾಜಕೀಯ ವಿಶ್ಲೇಷಣೆ | ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ; ಯಾರಿಗೆ ಹೂವು? ಯಾರಿಗೆ ಮುಳ್ಳು?
Published On - 7:13 pm, Thu, 29 April 21