ಮೈಸೂರು: ಪ್ರಾಚೀನ ಕ್ರೀಡೆಗಳಲ್ಲೊಂದು ಎನಿಸಿಕೊಂಡಿರುವ ಕುಸ್ತಿಗೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಮತ್ತು ವಿಶೇಷತೆ ಇದೆ. ಇಂತಹ ಕ್ರೀಡೆಗೆ ವಯೋಮಿತಿ ನಿಗದಿಯಾಗಿರುವುದರಿಂದ ವಯಸ್ಸಾದ ಮೇಲೆ ಕುಸ್ತಿ ಆಡಿ ಸಾಧನೆ ಮಾಡುತ್ತೇನೆ ಎಂದುಕೊಂಡಿದ್ದರೆ ಅದು ಅಸಾಧ್ಯವಾದದ್ದು ಎನ್ನುವ ಮಾತು ಈ ಹಿಂದೆ ಇತ್ತು. ಆದರೆ ಇದೀಗ ಕುಸ್ತಿಯಲ್ಲಿ ಹಿರಿಯರಿಗೂ ಅವಕಾಶ ಸಿಕ್ಕಿದ್ದು, ತಮ್ಮ ವಯಸ್ಸನ್ನು ಮರೆತು ಅಖಾಡದಲ್ಲಿ ಕುಸ್ತಿಪಟುಗಳು ಸೆಣೆಸಾಡಿ ಸೈ ಎನಿಸಿಕೊಂಡಿದ್ದಾರೆ.
ಮದಗಜಗಳ ರೀತಿ ಸೆಣೆಸಾಡುತ್ತಾ, ಒಬ್ಬರನ್ನು ಮತ್ತೊಬ್ಬರು ಕೆಡವಿ ಕೇಳಗೆ ಹಾಕಿ, ಶಕ್ತಿ ಪ್ರದರ್ಶನ ಮಾಡುತ್ತಾ ತೊಡೆತಟ್ಟಿ ನಿಲ್ಲುವುದು ನಿಜಕ್ಕೂ ಕುಸ್ತಿಯ ಪ್ರಮುಖ ಆಕರ್ಷಣೆ. ಮೈಸೂರು ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಕೂಡ ಇಂತಹದ್ದೇ ವಾತವರಣ ಸೃಷ್ಟಿಯಾಗಿದ್ದು, ಕ್ರೀಡಾಪಟುಗಳು ಅತ್ಯಂತ ಉತ್ಸಾಹದಿಂದ ಈ ಕುಸ್ತಿಯಲ್ಲಿ ಭಾಗವಹಿಸಿದ್ದಾರೆ.
ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ಪ್ರಾರಂಭವಾದ ರಾಜ್ಯಮಟ್ಟದ ಹಿರಿಯರ ಕುಸ್ತಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಮಾರ್ಚ್ 27ರಂದು ಚಾಲನೆ ನೀಡಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ನೂರೈವತ್ತಕ್ಕೂ ಹೆಚ್ಚು ಕುಸ್ತಿಪಟುಗಳು ಇಲ್ಲಿ ಆಗಮಿಸಿ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ.
ಸಾಮಾನ್ಯವಾಗಿ ಕುಸ್ತಿ ಆಟದಲ್ಲಿ 30 ವರ್ಷಕ್ಕೆ ಕುಸ್ತಿಪಟುಗಳ ಕ್ರೀಡಾ ಜೀವನ ಮುಗಿದು ಹೋಗುತ್ತಿತ್ತು. ಕುಸ್ತಿ ಆಡಲು ಶಕ್ತಿ ಇದ್ದರು ಅಂತವರಿಗೆ ಅವಕಾಶ ಸಿಗುತ್ತಿರಲಿಲ್ಲ. ಆದರೆ ದೇಶದಲ್ಲೆ ಇದೀಗಾ ಮೊದಲ ಮಾಸ್ಟರ್ ಕುಸ್ತಿಗಳ ಚಾಂಪಿಯನ್ ಆಯ್ಕೆ ಪ್ರಾರಂಭವಾಗಿದ್ದು, ಇದಕ್ಕಾಗಿ ಮೂವತ್ತು ವರ್ಷ ಮೇಲ್ಪಟ್ಟವರ ರಾಜ್ಯಮಟ್ಟದ ಕುಸ್ತಿ ಪಂದ್ಯ ಆಯೋಜಿಸಲಾಗಿದೆ.
ಸದ್ಯ ಇಲ್ಲಿ ಗೆದ್ದ ಕುಸ್ತಿಪಟುಗಳನ್ನು ರಾಜ್ಯ ಕುಸ್ತಿ ಚಾಂಪಿಯನ್ ಆಗಿ ಆಯ್ಕೆ ಮಾಡಿ ನಂತರ ಅವರನ್ನು ಅಂತರಾಜ್ಯ ಚಾಂಪಿಯನ್ ಶಿಫ್ಗೆ ಕಳುಹಿಸಲಾಗುತ್ತದೆ. ಇದು ದೇಶದಲ್ಲೇ ಮೊದಲ ಮಾಸ್ಟರ್ ಕುಸ್ತಿ ಚಾಂಪಿಯನ್ ಎಂಬ ಹೆಗ್ಗಳಿಕೆಗೂ ಕೂಡ ಪಾತ್ರವಾಗಿದೆ.
ಸದ್ಯ 30 ರಿಂದ 40 ವಯಸ್ಸಿನ ವರಗೆಗಿನ ವಯೋಮಿತಿ, 40 ರಿಂದ 50 ವಯೋಮಿತಿ, 50 ರಿಂದ 60 ವಯಸ್ಸಿನ ವಯೋಮಿತಿಯವರಿಗೆ ಈ ಕುಸ್ತಿ ನಡೆಸಲಾಗುತ್ತಿದೆ. ಜೊತೆಗೆ 58 ರಿಂದ 97 ಕೆ.ಜಿ. ತೂಕದವರೆಗೆ ವಿಂಗಡನೆ ಮಾಡಿ ಇದನ್ನು ನಡೆಸಲಾಗುತ್ತಿದೆ. ಸದ್ಯ ರಾಜ್ಯದ ಮೂಲೆ ಮೂಲೆಗಳಿಂದ ಕುಸ್ತಿಪಟುಗಳು ಆಗಮಿಸಿ ಕುಸ್ತಿ ಅಖಾಡದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ.
ಒಟ್ಟಾರೆ ಮೈಯಲ್ಲಿ ಕುಸ್ತಿ ಆಡುವ ಶಕ್ತಿ ಇದ್ದರೂ 30 ವರ್ಷಕ್ಕೆ ಕುಸ್ತಿ ಪಟುಗಳ ಕ್ರೀಡಾ ಜೀವನ ಕೊನೆಯಾಗುತ್ತಿತ್ತು. ಆದರೆ ಇದೀಗಾ ನಡೆಯುತ್ತಿರುವ ಮಾಸ್ಟರ್ ಕುಸ್ತಿ ಚಾಂಪಿಯನ್ ಶಿಫ್ ಹಿರಿಯ ಕುಸ್ತಿ ಪಟುಗಳಿಗೂ ಟಾನಿಕ್ನಂತಾಗಿದೆ. ಸದ್ಯ ಇದನ್ನ ಇಲ್ಲಿಗೆ ಕೊನೆ ಮಾಡದೆ ಮುಂದೆಯು ಇದನ್ನ ನಡೆಸಿಕೊಂಡು ಹೋಗಲಿ ಎಂಬುವುದೇ ನಮ್ಮ ಆಶಯ.
ಇದನ್ನೂ ಓದಿ:
ಫೈನಲ್ನಲ್ಲಿ ಸೋಲು: ಆತ್ಮಹತ್ಯೆಗೆ ಶರಣಾದ ದಂಗಲ್ ಕುಸ್ತಿಪಟು ಗೀತಾ- ಬಬಿತಾ ಫೋಗಾಟ್ ಸೋದರಸಂಬಂಧಿ ರಿತಿಕಾ ಫೋಗಾಟ್
ಲೋಕಲ್ ‘ದಂಗಲ್’ನಿಂದ ಕೊಂಚ ಬ್ರೇಕ್ ಪಡೆದು.. ಕುಸ್ತಿ ಪಂದ್ಯಾವಳಿಗೆ ಚಾಲನೆ ಕೊಟ್ಟ ಹೊನ್ನಾಳಿ ಶಾಸಕ M.P.ರೇಣುಕಾಚಾರ್ಯ