ಮಡಿಕೇರಿ: ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯದ್ಯಂತ ಕಠಿಣ ನಿಯಮಗಳನ್ನು ಜಾರಿಗೊಳಿಸಳಾಗಿದೆ. ಈ ನಡುವೆ ಮೆಡಿಕಲ್ ವಿದ್ಯಾರ್ಥಿಗಳು ಕೊರೊನಾ ನಿಯಮ ಉಲ್ಲಂಘಿಸಿ ಜಾಲಿ ಟ್ರಿಪ್ ಹೋಗಿದ್ದರು. ಕೊವಿಡ್ ನಿಯಮ ಉಲ್ಲಂಘಿಸಿ ಜಾಲಿ ಟ್ರಿಪ್ ಹೋಗಿದ್ದ ವಿದ್ಯಾರ್ಥಿಗಳಿಗೆ ಒಂದು ವಾರ ಮೆಡಿಕಲ್ ಕಾಲೇಜಿನಲ್ಲಿ ಕೊವಿಡ್ ಡ್ಯೂಟಿ ಮಾಡುವ ಶಿಕ್ಷೆಯನ್ನು ನೀಡಲಾಗಿದೆ.
ಮೆಡಿಕಲ್ ವಿದ್ಯಾರ್ಥಿಗಳು ಮಡಿಕೇರಿ ಸಮೀಪದ ಕಾಲೂರಿಗೆ ಟ್ರಿಪ್ ಹೋಗಿದ್ದರು. ಮಾಸ್ಕ್ ಧರಿಸದೆ ನಾಲ್ಕು ಬೈಕ್ಗಳಲ್ಲಿ ವಿದ್ಯಾರ್ಥಿಗಳು ಓಡಾಡುತ್ತಿದ್ದರು. ಗ್ರಾಮಸ್ಥರು ಕಾಲೇಜು ವಿದ್ಯಾರ್ಥಿಗಳಿಗೆ ಕ್ಲಾಸ್ ತೆಗೆದುಕೊಂಡರು. ದೂರಿನ ಹಿನ್ನೆಲೆ ಕಾಲೇಜು ಡೀನ್ ಕಾರ್ಯಪ್ಪ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡಿದ್ದಾರೆ. ಒಂದು ವಾರ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡಬೇಕೆಂದು ಸೂಚನೆ ನೀಡಿದ್ದಾರೆ.
ನೀರಿಗೆ ಹಾಹಾಕಾರ
ರಾಯಚೂರು: ರಿಮ್ಸ್ ಆಸ್ಪತ್ರೆಯಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಕುಡಿಯುವುದಕ್ಕೂ ನೀರಿಲ್ಲದೆ ರೋಗಿಗಳು ಪರದಾಟ ಪಡುತ್ತಿದ್ದಾರೆ. ದುಡ್ಡು ಕೊಟ್ರೆ ಮಾತ್ರ ಬಾಟಲ್ ನೀರು ಸಿಗುತ್ತದೆ. ಕೊರೊನಾ ಸೋಂಕಿತರ ಗೋಳಾಟಕ್ಕೆ ಸ್ಪಂದಿಸದ ರಿಮ್ಸ್ ವೈದ್ಯಕೀಯ ಆಡಳಿತ ಮಂಡಳಿ ವಿರುದ್ಧ ಸೋಂಕಿತರು ಆಕ್ರೋಶ ಹೊರ ಹಾಕಿದ್ದಾರೆ.
ಬೆಡ್ ಸಿಗದೆ ಕೊರೊನಾ ಸೋಂಕಿತೆ ಪರದಾಟ
ಚಿತ್ರದುರ್ಗ: ಇಡೀ ರಾತ್ರಿ ಹಲವು ಆಸ್ಪತ್ರೆಗಳನ್ನು ಸುತ್ತಿದ್ದರು ಸೋಂಕಿತೆಗೆ ಬೆಡ್ ಸಿಗುತ್ತಿಲ್ಲ. ಕೊನೆಗೆ ಬೆಡ್ಗಾಗಿ ಲ್ಲಾಸ್ಪತ್ರೆಯ ಬಳಿ ರಾತ್ರಿ 2 ಗಂಟೆಯಿಂದ ಕಾಯುತ್ತಿದ್ದಾರೆ. ಜಿಲ್ಲೆಯ ಹೊಸದುರ್ಗ ಪಟ್ಟಣದ ವನಿತಾ ಎಂಬುವವರು ಬೆಡ್ಗಾಗಿ ಅಂಬುಲೆನ್ಸ್ನಲ್ಲಿ ಕಾಯುತ್ತಿದ್ದಾರೆ. ಆದರೆ ಇನ್ನು ಬೆಡ್ ಸಿಕ್ಕಿಲ್ಲ. ಆಸ್ಪತ್ರೆ ಸಿಬ್ಬಂದಿಯ ವಿರುದ್ಧ ವನಿತಾ ಪತಿ ತಿಮ್ಮಪ್ಪ ಕಿಡಿಕಾರಿದ್ದು, ಖಾಸಗಿ ಆಸ್ಪತ್ರೆಗಳಲ್ಲೂ ಬೆಡ್ ಸಿಗುತ್ತಿಲ್ಲ ಅಂತ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ
ಶ್ವೇತಭವನಕ್ಕೆ ಮತ್ತೊಬ್ಬ ಭಾರತೀಯ ಮೂಲದ ಮಹಿಳೆ ಎಂಟ್ರಿ! ನೀರಾ ಟಂಡನ್ ಅಧ್ಯಕ್ಷ ಜೋ ಬೈಡನ್ಗೆ ಹಿರಿಯ ಸಲಹೆಗಾರ್ತಿ!
ಬೆಳಗಾವಿ ಉಪಚುನಾವಣೆ ಮತ ಎಣಿಕೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಉಪ ತಹಶೀಲ್ದಾರ್ ಕೊರೊನಾಗೆ ಬಲಿ
(Medical students take a jolly trip in violation of Corona rule and dean of college has sentenced students)