ಬೆಳಗಾವಿ ಉಪಚುನಾವಣೆ ಮತ ಎಣಿಕೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಉಪ ತಹಶೀಲ್ದಾರ್ ಕೊರೊನಾಗೆ ಬಲಿ

ವಿಜಯಶ್ರೀ ಸದ್ಯ ಬೆಳಗಾವಿಯ ಉಪ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಉಪ ತಹಶೀಲ್ದಾರ್ ವಿಜಯಶ್ರೀ ನಾಗನೂರೆ ಕುಟುಂಬದ ಹತ್ತು ಜನರಿಗೆ ಸೋಂಕು ದೃಢವಾಗಿದ್ದು, ಕುಟುಂಬಸ್ಥರು ಹೋಮ್ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳಗಾವಿ ಉಪಚುನಾವಣೆ ಮತ ಎಣಿಕೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಉಪ ತಹಶೀಲ್ದಾರ್ ಕೊರೊನಾಗೆ ಬಲಿ
ಕೊರೊನಾ ವೈರಸ್
Follow us
sandhya thejappa
|

Updated on: May 15, 2021 | 10:12 AM

ಬೆಳಗಾವಿ: ಲೋಕಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶದ ದಿನ ಡ್ಯೂಟಿ ಮಾಡಿದ್ದ ಉಪ ತಹಶೀಲ್ದಾರ್ ಕೊರೊನಾಗೆ ಬಲಿಯಾಗಿದ್ದಾರೆ. 52 ವರ್ಷದ ವಿಜಯಶ್ರೀ ನಾಗನೂರೆ ಸೋಂಕಿಗೆ ಬಲಿಯಾದ ಅಧಿಕಾರಿ. ಇವರು ಬೆಳಗಾವಿ ನಗರದ ಯಮನಾಪುರ ನಿವಾಸಿ. ವಿಜಯಶ್ರೀ ನಾಗನೂರೆಗೆ ಮೇ 3 ರಂದು ಕೊರೊನಾ ಸೋಂಕು ದೃಢವಾಗಿತ್ತು. ಕಳೆದ ಹನ್ನೆರಡು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು (ಮೇ 15) ಬೆಳಗಿನ ಜಾವ ಸಾವನ್ನಪ್ಪಿದ್ದಾರೆ.

ವಿಜಯಶ್ರೀ ಸದ್ಯ ಬೆಳಗಾವಿಯ ಉಪ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಉಪ ತಹಶೀಲ್ದಾರ್ ವಿಜಯಶ್ರೀ ನಾಗನೂರೆ ಕುಟುಂಬದ ಹತ್ತು ಜನರಿಗೆ ಸೋಂಕು ದೃಢವಾಗಿದ್ದು, ಕುಟುಂಬಸ್ಥರು ಹೋಮ್ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬ್ಲ್ಯಾಕ್ ಫಂಗಸ್​ಗೆ ಹೆಡ್ ಕಾನ್ಸ್​ಟೇಬಲ್​ ಸಾವು ಶಂಕೆ ಕಲಬುರಗಿ: ಬ್ಲ್ಯಾಕ್ ಫಂಗಸ್​ಗೆ ಅಶೋಕ ನಗರ ಠಾಣೆಯ ಹೆಡ್ ಕಾನ್ಸ್​ಟೇಬಲ್ ಸಾವನ್ನಪ್ಪಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಹೆಡ್ ಕಾನ್ಸ್​ಟೇಬಲ್ ಮಲ್ಲಿಕಾರ್ಜುನ ಕೊರೊನಾದಿಂದ ಗುಣಮುಖರಾಗಿದ್ದರು. ಕೊರೊನಾ ಚೇತರಿಕೆ ಬಳಿಕ 530 ರಷ್ಟು ಶೂಗರ್​ನಿಂದ ಬಳಲುತ್ತಿದ್ದರು. ಕೊರೊನಾ ಚೇತರಿಕೆ ಬಳಿಕ ಮನೆಗೆ ಬಂದಾಗ ಕಣ್ಣು ಕಳೆದುಕೊಂಡಿದ್ದರು. 45 ವರ್ಷದ ಮಲ್ಲಿಕಾರ್ಜುನ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಇವರು ಬ್ಲಾಕ್ ಫಂಗಸ್​ಗೆ ಬಲಿಯಾದರಾ ಅಥವಾ ಬೇರೆಯದಕ್ಕೆ ಬಲಿಯಾದರ ಎನ್ನುವುದನ್ನು ಆರೋಗ್ಯ ಇಲಾಖೆ ಸ್ಪಷ್ಟ ಪಡಿಸಬೇಕಾಗಿದೆ.

16 ವರ್ಷದ ಬಾಲಕಿ ಕೊವಿಡ್​ಗೆ ಬಲಿ ತುಮಕೂರು: ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ 16 ವರ್ಷದ ಬಾಲಕಿ ಕೊವಿಡ್​ಗೆ ಬಲಿಯಾಗಿದ್ದಾರೆ. ಕೊರೊನಾ ಹಿನ್ನೆಲೆ ಮೇ 3ರಂದು ತುಮಕೂರಿನ ರಾಜೀವ್ ಗಾಂಧಿ ನಗರದ ಬಾಲಕಿ ಆಸ್ಪತ್ರೆಗೆ ದಾಖಲಾಗಿದ್ದರು. ಕಫ ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ( ಮೇ 14) ರಾತ್ರಿ ಮರಣ ಹೊಂದಿದ್ದಾರೆ.

ಇದನ್ನೂ ಓದಿ

ಭಾರತದಲ್ಲಿ ಹೊಸ ಪ್ರಕರಣಗಳಿಗಿಂತ ಗುಣಮುಖ ಆಗುತ್ತಿರುವವರ ಸಂಖ್ಯೆ ಹೆಚ್ಚು; ಸಂಕಟದ ನಡುವೆ ಆಶಾದಾಯಕ ಬೆಳವಣಿಗೆ

ನಗರದಲ್ಲಿ 3 ಲಕ್ಷ ಬೀದಿನಾಯಿ, ಲಾಕ್​ಡೌನ್​ ವೇಳೆ ಊಟ ಸಿಗದೇ ಮನುಷ್ಯರ ಮೇಲೆ ದಾಳಿ, ವೃದ್ಧೆ ಸಾವು: ಬಿಬಿಎಂಪಿ ಎಚ್ಚೆತ್ತುಕೊಳ್ಳುತ್ತಾ?

(Deputy Tahsildar of Belgaum has died of corona infection)