ಮೇಕೆದಾಟು ಅಣೆಕಟ್ಟು ಸಂಬಂಧ ಅರ್ಜಿ ವಿಚಾರಣೆ: ತಮಿಳುನಾಡು ಸರ್ಕಾರದ ನಡೆಗೆ ಸುಪ್ರೀಂಕೋರ್ಟ್ ಗರಂ
ಮೇಕೆದಾಟು ಅಣೆಕಟ್ಟು ಯೋಜನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮತ್ತೆ ಮುಂದೂಡುವಂತೆ ಮನವಿ ಮಾಡಿದ ತಮಿಳುನಾಡು ಸರ್ಕಾರದ ವಕೀಲರ ನಡೆಗೆ ಸುಪ್ರೀಂಕೋರ್ಟ್‌ನ ನ್ಯಾ. ವಿಕ್ರಮ್ ನಾಥ್ ಪೀಠ ತೀವ್ರ ಆಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿದೆ. ಈ ಪ್ರಕರಣ ಬಹುತೇಕ ಮುಗಿದುಹೋಗಿದೆ. ಇಂತಹ ಅರ್ಜಿಗಳಿಂದ ಬಾಕಿ ಪ್ರಕರಣಗಳ ಹೊರೆ ಹೆಚ್ಚುತ್ತಿದೆ ಎಂದು ಪೀಠ ತಿಳಿಸಿದೆ.
ನವದೆಹಲಿ, ನವೆಂಬರ್ 27: ಮೇಕೆದಾಟು ಅಣೆಕಟ್ಟು ಸಂಬಂಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ತಮಿಳುನಾಡು ಸರ್ಕಾರದ ನಡೆಗೆ ಸುಪ್ರೀಂಕೋರ್ಟ್ ಗರಂ ಆದ ಪ್ರಸಂಗ ನಡೆದಿದೆ. ವಿಚಾರಣೆ ಮತ್ತೆ ಮುಂದೂಡಲು ತಮಿಳುನಾಡು ವಕೀಲರು ಮನವಿ ಮಾಡಿದ ಹಿನ್ನೆಲೆ ಆಕ್ರೋಶ ವ್ಯಕ್ತಪಡಿಸಿದ ನ್ಯಾ.ವಿಕ್ರಮ್ ನಾಥ್ ಪೀಠ, ಹಿಂದಿನ ವಿಚಾರಣೆಯಲ್ಲೂ ಇದೇ ನೆಪ ಹೇಳಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದೆ. ಈ ಪ್ರಕರಣ ಬಹುತೇಕ ಮುಗಿದುಹೋಗಿದೆ. ಇಂತಹ ಅರ್ಜಿಗಳಿಂದ ಬಾಕಿ ಪ್ರಕರಣಗಳ ಹೊರೆ ಹೆಚ್ಚುತ್ತಿದೆ ಎಂದು ತಿಳಿಸಿದೆ. ಮೇಕೆದಾಟು ಅಣೆಕಟ್ಟು ಯೋಜನೆ ವಿರೋಧಿಸಿ ಸುಪ್ರೀಂಕೋರ್ಟ್‌ಗೆ ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ವೇಳೆ ತಮಿಳುನಾಡು ಸರ್ಕಾರದ ಪರ ವಕೀಲರು ಹಾಜರಿರಲಿಲ್ಲ. ಹೀಗಾಗಿ ತಮ್ಮ ಹಿರಿಯ ವಕೀಲರ ಅನುಪಸ್ಥಿತಿ ಕಾರಣ ವಿಚಾರಣೆಯನ್ನು ಬೇರೊಂದು ದಿನಕ್ಕೆ ಮುಂದೂಡುವಂತೆ ಮನವಿ ಮಾಡಲಾಗಿತ್ತು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 27, 2026 12:38 PM
Loading...
Unable to load recommendations.
Follow Us
