ನಮ್ಮ ಪಾಲಿಕೆಯ ಎದುರಿನ ಕನ್ನಡ ಧ್ವಜವನ್ನು ತೆಗೆಯಬೇಕಂತೆ! ನಾಳೆ MES ಪ್ರತಿಭಟನೆ
ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜಸ್ತಂಭ ಸ್ಥಾಪನೆ ಮಾಡಲಾಗಿದೆ. ಕನ್ನಡ ಧ್ವಜ ತೆರವಿಗೆ ಆಗ್ರಹಿಸಿ ನಾಳೆ ಎಂಇಎಸ್ ಪ್ರತಿಭಟನೆ ನಡೆಸಲು ಮುಂದಾಗಿದೆ. ಜೊತೆಗೆ MES ಪ್ರತಿಭಟನೆಗೆ ಮಹಾರಾಷ್ಟ್ರದ ಶಿವಸೇನೆ ಬೆಂಬಲ ವ್ಯಕ್ತಪಡಿಸಿದೆ.
ಬೆಳಗಾವಿ: ನಾಡದ್ರೋಹಿ ಎಂಇಎಸ್ ನಾಳೆ ಪ್ರತಿಭಟನೆಗೆ ಮುಂದಾಗಿದೆ. ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜಸ್ತಂಭ ಸ್ಥಾಪನೆ ಮಾಡಲಾಗಿದೆ. ಪಾಲಿಕೆ ಎದುರಿರುವ ಕನ್ನಡ ಧ್ವಜ ತೆರವಿಗೆ ಆಗ್ರಹಿಸಿ ನಾಳೆ ಎಂಇಎಸ್ ಪ್ರತಿಭಟನೆ ನಡೆಸಲು ಮುಂದಾಗಿದೆ. ಜೊತೆಗೆ MES ಪ್ರತಿಭಟನೆಗೆ ಮಹಾರಾಷ್ಟ್ರದ ಶಿವಸೇನೆ ಬೆಂಬಲ ವ್ಯಕ್ತಪಡಿಸುವ ಮೂಲಕ ಮತ್ತೆ ಶಿವಸೇನೆ ಕೊಲ್ಲಾಪುರ ಜಿಲ್ಲಾಧ್ಯಕ್ಷ ವಿಜಯ್ ದೇವನೆ ನಾಲಿಗೆ ಹರಿಬಿಟ್ಟಿದ್ದಾರೆ.
ಜನವರಿ 21ರಂದು ಮಹಾನಗರ ಪಾಲಿಕೆ ಎದುರುಗಿನ ಕನ್ನಡ ಬಾವುಟವನ್ನು ಕರ್ನಾಟಕ ರಕ್ಷಣಾ ವೇದಿಕೆಯವರು ತೆರವುಗೊಳಿಸಬೇಕು. ಇಲ್ಲವಾದ್ರೆ MES ಪ್ರತಿಭಟನೆಯಲ್ಲಿ ನಾವು ಭಾಗಿಯಾಗುತ್ತೇವೆ ಎಂದು ಶಿವಸೇನೆ ಸ್ಪಷ್ಟಪಡಿಸಿದೆ. ಇನ್ನು ಕರ್ನಾಟಕ ಆಕ್ರಮಿಕ ಪ್ರದೇಶಗಳನ್ನು ಕರ್ನಾಟಕದಲ್ಲಿರಲು ಬಿಡಲ್ಲ. ಅದನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡೋದಾಗಿ ಈಗಾಲೇ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಈಗ MES ಮತ್ತು ಶಿವಸೇನೆ ತನ್ನ ಪುಂಡಾಟ ಪ್ರದರ್ಶಿಸುತ್ತಿದೆ.
ಶಿವಸೇನೆ ಪುಂಡರು ಬೆಳಗಾವಿ ಚಲೋ ಎಂಬ ಪೋಸ್ಟ್ಗಳನ್ನ ವೈರಲ್ ಮಾಡುತ್ತಿದ್ದಾರೆ. ನಾಳೆ ನಡೆಯುವ ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ಕರೆ ಕೊಟ್ಟಿದ್ದಾರೆ. ಆದ್ರೆ ನಾಳೆ ಈ ಪ್ರತಿಭಟನೆಯ ಕೂಗು ಎಷ್ಟರ ಮಟ್ಟಿಗೆ ನಿಲ್ಲುತ್ತೆ ಎಂಬುದನ್ನು ಕಾದು ನೋಡಬೇಕಿದೆ.
ಕೃಷಿ ಕಾಯ್ದೆ ವಿರೋಧಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ.. ಟ್ವೀಟ್ ಮೂಲಕ ಪ್ರತ್ಯುತ್ತರ ಕೊಟ್ಟ ಬಿಜೆಪಿ