ಮೈಸೂರು: ಜಿಲ್ಲೆಯ ಇನ್ನರ್‌ವೀಲ್ ಸಂಸ್ಥೆಯಿಂದ ಮೈಸೂರು ಮಹಾನಗರ ಪಾಲಿಕೆಗೆ 18 ಮೆಸ್‌ಗಳನ್ನು ಕೊಡುಗೆ ನೀಡಲಾಗಿದೆ. ಯಾದವಗಿರಿ ಚೆಲುವಾಂಬ ಪಾರ್ಕ್‌ನಲ್ಲಿನ ಕಾರ್ಯಕ್ರಮದಲ್ಲಿ ಪಾಲಿಕೆ ಆರೋಗ್ಯಾಧಿಕಾರಿ ಡಾ. ಡಿ. ಜಿ. ನಾಗರಾಜುಗೆ ಮೈಸೂರಿನ ಇನ್ನರ್‌ವೀಲ್ ಸಂಸ್ಥೆಯ ಸದಸ್ಯರು ಹಸ್ತಾಂತರ ಮಾಡಿದ್ದಾರೆ.
ಮೆಶ್‌ನಲ್ಲಿ ಒಣ ಎಲೆ ಸಂಗ್ರಹಿಸಿ ಗೊಬ್ಬರ ತಯಾರಿಕೆ ಮಾಡಲು 18 ಮೆಸ್‌ಗಳನ್ನು ನೀಡಿದ್ದು, ಅದನ್ನು ಮೈಸೂರಿನ ಪಾರ್ಕ್‌ಗಳಿಗೆ ಬಳಸಲು ನಿರ್ಧಾರ ಮಾಡಲಾಗಿದೆ.
ಇದೀಗ ಎಲೆ ಉದುರುವ ಕಾಲ ಆರಂಭವಾಗಿದ್ದು ಎಲ್ಲೆಡೆ ಮರಗಳು ಎಲೆಗಳನ್ನು ಉದುರಿಸುತ್ತಿವೆ. ನೆಲಕ್ಕೆ ಬಿದ್ದ ಎಲೆಗಳನ್ನು ಸಂಗ್ರಹಿಸಿ ಒಂದೆಡೆ ಶೇಖರಿಸಿದರೆ ಅತ್ಯಂತ ಕನಿಷ್ಠ ಸಂಸ್ಕರಣೆಯಿಂದ ಉತ್ತಮ ಎಲೆಗೊಬ್ಬರ ತಯಾರಿಸಬಹುದಾಗಿದೆ. ಈ ಶ್ಲಾಘನೀಯ ಕಾರ್ಯಕ್ಕೆ ಮೈಸೂರಿನ ಇನ್ನರ್‌ವೀಲ್ ಸಂಸ್ಥೆ ಕೈಜೋಡಿಸಿದೆ.
ಸಾವಯವ ಕೃಷಿ ಪದ್ಧತಿಯಲ್ಲಿ ಯಶಸ್ಸು ಕಂಡ ಮಹಿಳೆಯರು: ವೇದಿಕ್ ಸಂಸ್ಥೆ ಮೂಲಕ ಸ್ವಾವಲಂಬಿ ಬದುಕು
Published On - 8:46 pm, Wed, 10 February 21