ಫೆ.12ರಿಂದ ಧಾರವಾಡ ಮುರುಘಾ ಮಠದ ಜಾತ್ರೆ

ಫೆಬ್ರವರಿ 12 ರ ಬೆಳಗ್ಗೆ 9 ಕ್ಕೆ ದುರದುಂಡೀಶ್ವರ ಮಠದ ನೀಲಕಂಠ ಸ್ವಾಮೀಜಿ ಅವರಿಂದ ಷಟ್‌ಸ್ಥಲ ಧ್ವಜಾರೋಹಣ ನಡೆಯಲಿದೆ. ನಿಜಗುಣ ಶಿವಯೋಗಿ ಸ್ವಾಮೀಜಿ ಸಾನಿಧ್ಯವಹಿಸುವರು.

ಫೆ.12ರಿಂದ ಧಾರವಾಡ ಮುರುಘಾ ಮಠದ ಜಾತ್ರೆ
ಮುರುಘಾ ಮಠ
Follow us
preethi shettigar
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 10, 2021 | 8:43 PM

ಧಾರವಾಡ: ಫೆಬ್ರವರಿ 12 ರಿಂದ ಧಾರವಾಡದ ಪ್ರಸಿದ್ಧ ಮುರುಘಾಮಠದ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಸಮಯದಲ್ಲಿ ವಿಶೇಷ ಉಪನ್ಯಾಸ, ಮೃತ್ಯುಂಜಯ ಮಹಾಂತ ಪ್ರಶಸ್ತಿ ಪ್ರದಾನ, ಸಾಹಿತ್ಯ-ಸಂಗೀತ-ಸಾಂಸ್ಕೃತಿಕ ಕಾರ್ಯಕ್ರಮ, ವಚನ ಗಾಯನ ಮತ್ತು ರಥೋತ್ಸವ ಜರುಗಲಿದೆ. ಮುರುಘಾಮಠದ ಪೀಠಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮೀಜಿ ನೇತ್ರತ್ವದಲ್ಲಿ 5 ದಿನಗಳ ಕಾಲ ಜಾತ್ರೆ ನಡೆಯಲಿದೆ.

ಲಿಂಗೈಕ್ಯ ಮೃತ್ಯುಂಜಯಪ್ಪ ಕನ್ನಡ ನಾಡು ಕಂಡ ಅಪ್ರತಿಮ ತ್ರಿವಿಧ ದಾಸೋಹಿಗಳು. ಅಪ್ಪ ಎನ್ನುವ ಶಬ್ದದ ಗೌರವ ಹೆಚ್ಚಿಸಿದ ಮಹಾತ್ಮರು, ಅವರ ಮಾರ್ಗದರ್ಶನದಂತೆ ಈ ಸಲದ ಜಾತ್ರೆಯು ಶರಣತತ್ವ ಸೌರಭ, ಸಾರಸ್ವತ ಪ್ರಭೆ ಹಾಗೂ ಸಾಂಸ್ಕೃತಿಕ ಮಹಾ ಉತ್ಸವದ ಮೂಲಕ ಜರುಗಲಿದೆ ಎಂದು ಮುರುಘಾಮಠದ ಪೀಠಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದ್ದಾರೆ.

ಜಾತ್ರೆಯ ಅಂಗವಾಗಿ ನಡೆಯಲಿರುವ ಕಾರ್ಯಕ್ರಮಗಳು ಫೆಬ್ರವರಿ 12 ರ ಬೆಳಗ್ಗೆ 9ಕ್ಕೆ ದುರದುಂಡೀಶ್ವರ ಮಠದ ನೀಲಕಂಠ ಸ್ವಾಮೀಜಿ ಅವರಿಂದ ಷಟ್‌ಸ್ಥಲ ಧ್ವಜಾರೋಹಣ ನಡೆಯಲಿದೆ. ನಿಜಗುಣ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯವಹಿಸುವರು. ಸಂಜೆ 6:30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ ಜಾತ್ರಾ ಮಹೋತ್ಸವ ಉದ್ಘಾಟಿಸಲಿದ್ದಾರೆ. ಬಳಿಕ 3000 ಮಠದ ಸ್ವಾಮೀಜಿಗೆ ಗುರುವಂದನೆ ನಡೆಯಲಿದೆ. ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕಾರ್​ ಅತಿಥಿಯಾಗಿ ಪಾಲ್ಗೊಳ್ಳುವರು. ಇದೇ ವೇಳೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ವೀರೇಶ ಅಂಚಟಗೇರಿ ಅವರನ್ನು ಸನ್ಮಾನಿಸಲಾಗುವುದು.

ಫೆಬ್ರವರಿ 13 ರಂದು ಸಂಜೆ 6:30 ಕ್ಕೆ ಜಗದ್ಗುರು ಫಕೀರ ಸಿದ್ಧರಾಮ ಸ್ವಾಮೀಜಿ ಸಾನಿಧ್ಯದಲ್ಲಿ ಜಾತ್ರಾ ಮಹೋತ್ಸವ ವಿಶೇಷ ಉಪನ್ಯಾಸ ನಡೆಯಲಿದ್ದು, ವೀರೇಶ ಪಾಟೀಲ ಉಪನ್ಯಾಸ ನೀಡಲಿದ್ದಾರೆ. ಬಳಿಕ ಶಾಸಕರಾದ ಅರವಿಂದ ಬೆಲ್ಲದ, ಕುಸುಮಾ ಎಸ್. ಶಿವಳ್ಳಿ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಕೆ.ಎಲ್.ಇ. ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಈ ಜಾತ್ರಾ ಮಹೋತ್ಸವದಲ್ಲಿ ಸವಿತಾ ಅಮರಶೆಟ್ಟಿ, ಡಾ. ವೀರಣ್ಣ ಬೋಳಿಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು.

Murughamath

ಮುರುಘಾಮಠದ ಪೀಠಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮೀಜಿ

Murughamath ಫೆ.12 ಮುರುಘಾಮಠದ ಜಾತ್ರಾ ಮಹೋತ್ಸವ

ಫೆ. 14 ರ ಸಂಜೆ 6:30 ಕ್ಕೆ ಅಖಿಲ ಭಾರತ ಶಿವಾನುಭವ ಸಂಸ್ಥೆಯ 79ನೇ ಸಮ್ಮೇಳನದ ವಿಶೇಷ ಉಪನ್ಯಾಸ ನಡೆಯಲಿದ್ದು, ಸಿದ್ಧಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸುತ್ತಾರೆ. ಡಾ.ವೈ. ಎಂ. ಯಾಕೋಳ್ಳಿ ಉಪನ್ಯಾಸ ನೀಡಲಿದ್ದು, ಮುಖ್ಯಮಂತ್ರಿ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಶಾಸಕರಾದ ಅಮೃತ ದೇಸಾಯಿ, ಶಂಕರ ಪಾಟೀಲ ಮುನೇನಕೊಪ್ಪ, ವಿಆರ್‌ಎಲ್ ಸಮೂಹದ ವಿಜಯ ಸಂಕೇಶ್ವರ, ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಚೇರಮನ್ ಜಗದೀಶ ಗುಡಗುಂಟಿಮಠ ಪಾಲ್ಗೊಳ್ಳುವರು. ಕರ್ನಾಟಕ ವಿಶ್ವ ವಿದ್ಯಾಲಯದ ಕುಲಪತಿ ಡಾ.ಕೆ.ಬಿ. ಗುಡಸಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಹಾಗೂ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಶಂಕರಗೌಡ ಪಾಟೀಲ ಅವರನ್ನು ಸನ್ಮಾನಿಸಲಾಗುವುದು.

Murughamath

ಮೃತ್ಯುಂಜಯಪ್ಪ ವಿದ್ಯಾರ್ಥಿ ನಿಲಯ

ಫೆ. 15ರ ಸಂಜೆ 6:30 ಕ್ಕೆ ಚಿತ್ರದುರ್ಗ ಬ್ರಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಮೃತ್ಯುಂಜಯ-ಮಹಾಂತ ಪ್ರಶಸ್ತಿಯನ್ನು ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿವರಿಗೆ ಪ್ರದಾನ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಈ ವೇಳೆ ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಎಂ. ಕವಟಗಿಮಠ ಅವರನ್ನು ಸನ್ಮಾನಿಸಲಾಗುವುದು. ಫೆ. 16 ರಂದು ಲಿಂಗದೀಕ್ಷೆ ಸಮಾರಂಭ ನಡೆಯಲಿದೆ. ಸಂಜೆ 4 ಕ್ಕೆ ಚಿತ್ರದುರ್ಗ ಮುರುಘಾ ಶರಣರಿಂದ ಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳ ರಥೋತ್ಸವವು ನೆರವೇರಲಿದ್ದು, ನಾಡಿನ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ.

Murughamath

ಮೃತ್ಯುಂಜಯಪ್ಪ ವಿದ್ಯಾರ್ಥಿ ನಿಲಯದ ಚಿತ್ರಣ