AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭೆ ಚುನಾವಣೆ ಪ್ರೇರಿತ ಅಲ್ಲ: ಅಭಿವೃದ್ಧಿಪರ ಅಭೂತಪೂರ್ವ ಬಜೆಟ್: ಸಚಿವ ಪ್ರಲ್ಹಾದ್​ ಜೋಶಿ

ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿದ ಬಜೆಟ್ ಇದಲ್ಲ. ಬದಲಾಗಿ ದೇಶದ ಹಿತ, ಬಡವರ ಹಿತದೃಷ್ಟಿ ಹಾಗೂ ಅಭಿವೃದ್ಧಿಪರ ಬಜೆಟ್ ಆಗಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್​ ಜೋಶಿ ಪ್ರತಿಪಾದಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆ ಪ್ರೇರಿತ ಅಲ್ಲ: ಅಭಿವೃದ್ಧಿಪರ ಅಭೂತಪೂರ್ವ ಬಜೆಟ್: ಸಚಿವ ಪ್ರಲ್ಹಾದ್​ ಜೋಶಿ
ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್​ ಜೋಶಿ
ಗಂಗಾಧರ​ ಬ. ಸಾಬೋಜಿ
|

Updated on: Feb 01, 2024 | 5:54 PM

Share

ಬೆಂಗಳೂರು, ಫೆಬ್ರುವರಿ 1: ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿದ ಬಜೆಟ್ ಇದಲ್ಲ. ಬದಲಾಗಿ ದೇಶದ ಹಿತ, ಬಡವರ ಹಿತದೃಷ್ಟಿ ಹಾಗೂ ಅಭಿವೃದ್ಧಿಪರ ಬಜೆಟ್ ಆಗಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್​ ಜೋಶಿ (Pralhad Joshi) ಹೇಳಿದ್ದಾರೆ. ಬಜೆಟ್ ಮಂಡನೆ ಬಳಿಕ ಮಾತನಾಡಿರುವ ಅವರು, ದೇಶದ ಹಣಕಾಸಿನ ಭದ್ರತೆ ಜೊತೆಗೆ ಅಭಿವೃದ್ಧಿಪರವಾಗಿ ಇರುವಂಥ ಮಧ್ಯಂತರ ಬಜೆಟ್​ನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ಲೋಕಸಭೆ ಚುನಾವಣೆ ಪ್ರೇರಿತವಾಗಿ ಏನು ಬೇಕಾದರೂ ಮಾಡಬಹುದಾಗಿತ್ತು. ಆದರೆ, ಹಾಗೆ ಮಾಡದೆ ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ವಸತಿ, ಆರೋಗ್ಯ, ರಸ್ತೆ, ಸಾರಿಗೆ ಹೀಗೆ ಮೂಲ ಸೌಕರ್ಯಕ್ಕೆ ಒತ್ತು ಕೊಟ್ಟು ಮಂಡಿಸಿದಂತಹ ಮುಂಗಡ ಪಾತ್ರವಾಗಿದೆ ಎಂದು ಸಮರ್ಥಿಸಿಕೊಂಡದರು.

ಈ ಕುರಿತಾಗಿ ಟ್ವೀಟ್ ಮಾಡಿರುವ ಪ್ರಲ್ಹಾದ್​ ಜೋಶಿ, ಇಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದಂಥ ಬಜೆಟ್ ಅಭೂತಪೂರ್ವವಾಗಿದೆ. ಇದು ಮಧ್ಯಂತರ ಮುಂಗಡ ಪತ್ರವಾಗಿದ್ದು ಈ ಅವಧಿಯ ಕೊನೆಯ ಮುಂಗಡ ಪತ್ರವಿದು. ಮುಂಬರುವ ಚುನಾವಣೆಯ ದೃಷ್ಟಿಯಲ್ಲಿಟ್ಟುಕೊಳ್ಳದೆ ದೇಶದ ಹಿತ ಹಾಗೂ ಬಡವರ ಹಿತವನ್ನು ಗಮನದಲ್ಲಿಟ್ಟುಕೊಂಡು ಹಣಕಾಸಿನ ಭದ್ರತೆಯ ಜೊತೆಗೆ ಅಭಿವೃದ್ಧಿಪರ ಬಜೆಟ್ ಅನ್ನು ಅವರು ಮಂಡಿಸಿದ್ದಾರೆ. ಅವರಿಗೆ ಸಮಸ್ತ ದೇಶದ ಹಾಗೂ ಕರ್ನಾಟಕದ ಜನತೆಯ ಪರವಾಗಿ ಧನ್ಯವಾದಗಳು ಮತ್ತು ಅಭಿನಂದನೆಗಳನ್ನು ತಿಳಿಸಿದ್ದಾರೆ.

ಪ್ರಲ್ಹಾದ್​ ಜೋಶಿ ಟ್ವೀಟ್ 

ಈ ವಿಕಸಿತ ಭಾರತ ಬಜೆಟ್‌ನಲ್ಲಿ ಘೋಷಿಸಿದಂತೆ ರೈಲ್ವೆ ಕಾರಿಡಾರ್ ಕಾರ್ಯಕ್ರಮ ಕಲ್ಲಿದ್ದಲು ಸಚಿವಾಲಯದ ಫಸ್ಟ್ ಮೈಲ್ ಕನೆಕ್ಟಿವಿಟಿ ಯೋಜನೆಗಳಿಗೆ ಪೂರಕವಾಗಿದೆ. ವಿತ್ತ ಸಚಿವರು ಕೃಷಿ, ಮೀನುಗಾರಿಕೆ, ಆರೋಗ್ಯ ಕ್ಷೇತ್ರಗಳಿಗೆ ಸಾಕಷ್ಟು ಒತ್ತು ಕೊಟ್ಟಿದ್ದಾರೆ. 11.11 ಲಕ್ಷ ಕೋಟಿ ರೂಪಾಯಿ ಮೂಲಭೂತ ಸೌಕರ್ಯಗಳಿಗೆ ಮೀಸಲಿಟ್ಟಿರುವುದು ಗಮನಾರ್ಹವಾಗಿದೆ ಎಂದಿದ್ದಾರೆ.

ರಾಷ್ಟ್ರೀಯ ಮಿಷನ್ ದಾಖಲೆ ಸಿದ್ಧ

ಕೇಂದ್ರ ಸರ್ಕಾರ 2030ರ ವೇಳೆಗೆ 100 ಮಿಲಿಯನ್ ಟನ್ ಕಲ್ಲಿದ್ದಲು ಅನಿಲೀಕರಣಕ್ಕಾಗಿ ರಾಷ್ಟ್ರೀಯ ಮಿಷನ್ ದಾಖಲೆ ಸಿದ್ಧಪಡಿಸಿದೆ. ಸುಸ್ಥಿರ ಬಳಕೆಗಾಗಿ ಕಲ್ಲಿದ್ದಲಿನ ವೈವಿಧ್ಯೀಕರಣದತ್ತ ಸಾಗುತ್ತಿದ್ದೇವೆ. ಜಾಗತಿಕವಾಗಿ ಬೆಳೆಯುತ್ತಿರುವ ಪರಿಸರ ಕಾಳಜಿ ಮತ್ತು ಭಾರತ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ವಿಸ್ತರಿಸುವ ಗುರಿಯೊಂದಿಗೆ ಹೆಜ್ಜೆ ಹಾಕಿದ್ದೇವೆ ಎಂದು ಪ್ರತಿಪಾದಿಸಿದರು.

ಇದನ್ನೂ ಓದಿ: Budget 2024: ಇದು ವಿನಾಶಕಾರಿ ಬಜೆಟ್​ ಎಂದ ಸಿಎಂ ಸಿದ್ದರಾಮಯ್ಯ

ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರ ದೂರದೃಷ್ಟಿ, ಪ್ರೋತ್ಸಾಹದ ಕಾರಣ ನಾವಿಂದು ಸ್ವಾವಲಂಬಿ ಭಾರತದತ್ತ ಸಾಗಿದ್ದೇವೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.