ಪ್ರತಿ ವರ್ಷ 30 ಸಾವಿರ ಯಾತ್ರಾರ್ಥಿಗಳಿಗೆ ಕಾಶಿ ಭೇಟಿಗೆ ವ್ಯವಸ್ಥೆ: ಶಶಿಕಲಾ ಜೊಲ್ಲೆ

| Updated By: ನಯನಾ ರಾಜೀವ್

Updated on: Jul 11, 2022 | 2:33 PM

ತಿ ವರ್ಷವೂ 30 ಸಾವಿರ ಯಾತ್ರಾರ್ಥಿಗಳಿಗೆ ಕಾಶಿ ಭೇಟಿಗೆ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಕಾಶಿಯಾತ್ರೆಗಾಗಿ ಯಾತ್ರಾರ್ಥಿಗಳ ಖಾತೆಗೆ 5 ಸಾವಿರ ರೂ. ಜಮಾವಣೆ ಮಾಡುವ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿ ವರ್ಷ 30 ಸಾವಿರ ಯಾತ್ರಾರ್ಥಿಗಳಿಗೆ ಕಾಶಿ ಭೇಟಿಗೆ ವ್ಯವಸ್ಥೆ: ಶಶಿಕಲಾ ಜೊಲ್ಲೆ
Shashikala Jolle
Follow us on

ಬೆಂಗಳೂರು: ಪ್ರತಿ ವರ್ಷವೂ 30 ಸಾವಿರ ಯಾತ್ರಾರ್ಥಿಗಳಿಗೆ ಕಾಶಿ ಭೇಟಿಗೆ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಕಾಶಿಯಾತ್ರೆಗಾಗಿ ಯಾತ್ರಾರ್ಥಿಗಳ ಖಾತೆಗೆ 5 ಸಾವಿರ ರೂ. ಜಮಾವಣೆ ಮಾಡುವ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಶಿಯಾತ್ರೆ ಕೈಗೊಂಡರೆ ಜೀವನ ಪಾವನ ಎಂಬ ಭಾವನೆಯಿಂದ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಬೆಂಗಳೂರಿನಿಂದ ರೈಲ್ವೆ ಮೂಲಕ ಯಾತ್ರಾರ್ಥಿಗಳಿಗೆ ವ್ಯವಸ್ಥೆ ಮಾಡಲಾಗಿದೆ.

ರೈಲ್ವೆ ಸಚಿವರ ಜತೆ ಚರ್ಚೆ ಮಾಡಿ ರೈಲು ವ್ಯವಸ್ಥೆ ಮಾಡಲಾಗಿದೆ, ಭಾರತ್ ಗೌರವ್ ಯೋಜನೆಯಡಿ ರೈಲ್ವೆ ಇಲಾಖೆಯಿಂದ ಸೇವೆಗಾಗಿ, ಬಜೆಟ್ ನಲ್ಲಿ 15 ಕೋಟಿ ಮೀಸಲಿಡಾಗಿದೆ, 3 ಟೈಯರ್ ಎಸಿ ರೈಲಿನ ವ್ಯವಸ್ಥೆಗೆ ಅವಕಾಶ ಮಾಡಲಾಗಿದೆ.

ಒಂದು ಬೋಗಿಯನ್ನ ಮಂದಿರವನ್ನಾಗಿ ಮಾರ್ಪಾಡು ಮಾಡಲು ಅವಕಾಶ ನೀಡಲಾಗಿದ್ದು, 14 ಬೋಗಿಗಳುಳ್ಳ ಒಂದು ಬೋಗಿಯನ್ನ ಕ್ಯಾಂಟೀನ್ ಗಾಗಿ ವ್ಯವಸ್ಥೆ ಮಾಡಲಾಗಿದೆ.

7 ದಿನಗಳ ಪ್ರಯಾಣದಲ್ಲಿ ಕಾಶಿ, ಪ್ರಯಾಗ್ ರಾಜ್, ಅಯೋಧ್ಯೆ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. ಒಬ್ಬ ಯಾತ್ರಾರ್ಥಿಗೆ 15ಸಾವಿದ ವೆಚ್ಚವಾಗಲಿದ್ದು, ಅದರಲ್ಲಿ 5 ಸಾವಿರ ಮುಜರಾಯಿ ಇಲಾಖೆಯಿಂದ ನೀಡಲಾಗುತ್ತದೆ ಎಂದು ಜೊಲ್ಲೆ ತಿಳಿಸಿದ್ದಾರೆ.

ಮುಜರಾಯಿ ಇಲಾಖೆಯ ಎ ಗ್ರೇಡ್ ದೇವಸ್ಥಾನಗಳ ಚಿತ್ರ ರೈಲ್ವೆ ಬೋಗಿಯ ಹೊರಗಡೆ ಹಾಕಲು ವ್ಯವಸ್ಥೆ ಮಾಡಲಾಗುತ್ತದೆ. ಅಯೋಧ್ಯೆಯಿಂದ ಅಂಜನಾದ್ರಿಗೂ ವ್ಯವಸ್ಥೆ ಕುರಿತಂತೆ ಚಿಂತನೆ ನಡೆಸಲಾಗುತ್ತಿದೆ ಎಂದರು.

4161ಕಿಲೋ ಮೀಟರ್ ದೂರದ ಪ್ರಯಾಣಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಆನ್ ಲೈನ್ ಅಪ್ಲಿಕೇಷನ್ ಹಾಕೋಕೆ ಅವಕಾಶ ನೀಡಲಾಗುವುದು 365 ಅರ್ಜಿಗಳು ಈಗಾಗಲೇ ಮುಜರಾಯಿ‌ ಇಲಾಖೆಗೆ ಬಂದಿವೆ, ಕಾಶಿಯಲ್ಲಿ ಕರ್ನಾಟಕ ಭವನದಲ್ಲಿ ಸಕಲ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಮುಜರಾಯಿ ಇಲಾಖೆಗೆ ಈ ಬಾರಿ ಸರ್ಕಾರ ಹೆಚ್ಚಿನ ಅನುದಾನ ನೀಡಿದೆ, ಅರ್ಚಕರ ತಸ್ತಿಕ್ ಹಣವನ್ನೂ ಹೆಚ್ಚಳ ಮಾಡಿದ್ದೀವಿ
ಅಭಿವೃದ್ಧಿ ಏನಾಗಿದೆ ಅಂತ ಜನ ಹೇಳುತ್ತಾರೆ, ಬೇರೆ ಸರ್ಕಾರದಲ್ಲಿ ಆಗದ ಅಭಿವೃದ್ಧಿ ಕೆಲಸ ನಮ್ಮ ಸರ್ಕಾರದ ಅವಧಿಯಲ್ಲಿ ನಡೆದಿದೆ ಎಂದರು.
ವಿರೋಧ ಪಕ್ಷದವರು ಟೀಕೆ ಮಾಡೋದೆ ಅವರ ಕೆಲಸ ವಿರೋಧ ಪಕ್ಷದವರ ಮಾತುಗಳು ಕೇಳುವ ಅವಶ್ಯಕತೆ ಇಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.