ಸಿಎಂ ಕುರ್ಚಿಗೆ 2,500 ಕೋಟಿ ಹಣ ಕೇಳ್ತಾರೆಂಬ ಯತ್ನಾಳ್ ಹೇಳಿಕೆಗೆ ವಿರೋಧ; ಶಾಸಕ ಯತ್ನಾಳ್ ಹೇಳಿಕೆ ಪಕ್ಷಕ್ಕೆ ಮುಜುಗರ ತರುತ್ತಿದೆ ಎಂದ ಸಚಿವ ವಿ.ಸೋಮಣ್ಣ
ಶಾಸಕ ಯತ್ನಾಳ್ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ತರುತ್ತಿದೆ. ಯತ್ನಾಳ್ ಅನುಭವಿಗಳು ಇಂಥ ಹೇಳಿಕೆಗಳನ್ನು ನೀಡಬಾರದು. ಯತ್ನಾಳ್ ಯಾಕೆ ಇಂಥ ಹೇಳಿಕೆ ನೀಡುತ್ತಿದ್ದಾರೋ ಗೊತ್ತಿಲ್ಲ. ಯತ್ನಾಳ್ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ದೇನೆ ಅವರು ಸಿಗುತ್ತಿಲ್ಲ. -ಸಚಿವ ವಿ.ಸೋಮಣ್ಣ
ಹಾಸನ: ಸಿಎಂ ಪೋಸ್ಟ್ಗೆ 2500 ಕೋಟಿ ಬೇಡಿಕೆ ಇಟ್ಟಿದ್ದರು ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ರಾಜಕೀಯ ವಲಯದಲ್ಲಿ ಪರ ವಿರೋಧ ಹೇಳಿಕೆಗಳು ಹೊರ ಬೀಳುತ್ತಿವೆ. ಕಾಂಗ್ರೆಸ್, ಬಿಜೆಪಿಯ ನಾಯಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹಾಸನದ ಅರಕಲಗೂಡಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು 2000 ಕೋಟಿಗೆ ಸಿಎಂ ಪೋಸ್ಟು, 1000 ಕೋಟಿಗೆ ಮಂತ್ರಿ ಪೋಸ್ಟು, ಒಂದು ಕೋಟಿಗೆ ಯಾವ್ ಅಪಾಯಿಂಟ್ ಮೆಂಟ್, 50 ಲಕ್ಷಕ್ಕೆ ಯಾವ ಅಪಾಯಿಂಟ್ ಮೆಂಟು ಅಂತಾ ಒಂದು ಪತ್ರಿಕೆಯವರು ಲಿಸ್ಟ್ ಹಾಕಿದ್ದಾರೆ. ಅಪಾಯಿಂಟ್ ಮೆಂಟ್ ಗೆಷ್ಟು, ಪೋಸ್ಟಿಂಗ್ಗೆ ಎಷ್ಟು ಅಂತಾ ಬಿಲ್ ಹಾಕಿದ್ದಾರೆ. ತಾಕತ್ ಇದ್ರೆ ಸರ್ಕಾರದವರು ಕೊಡ್ಲಿ ಅವರಿಗೆ ನೊಟೀಸ್ ನೋಡೋಣಾ ಎಂದು ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.
ಬಹಳ ದೊಡ್ಡ ದೊಡ್ಡ ಹಗರಣಗಳೆಲ್ಲವನ್ನೂ ಹಿಂದಿನಿಂದ ತೆಗೆದಿದ್ದಾರೆ. ಫ್ರಂಟ್ ಪೇಜ್ ಗೆ ಹಾಕಿದ್ದಾರೆ. ತಾಕತ್ ಇದ್ರೆ ಕೊಡ್ಲಿ ನೋಡೋಣ ಅವರಿಗೆ ನೊಟೀಸ್. ಅನೇಕ ಪ್ರಕರಣಗಳು ಹಳ್ಳಹಿಡಿದಿವೆ ಎಂಬ ಕುಮಾರಸ್ವಾಮಿ ಹೇಳಿಕೆ ಹಿನ್ನೆಲೆ ಬೇರಲ್ಲ ಮುಚ್ಚಾಕಿದೆ ಅಂತಾ ಅವರು ಹೇಳಬಹುದು. ಅವರು ಇದ್ದಾರಲ್ಲಾ, ಹೋರಾಟ ಮಾಡೋದಕ್ಕೆ ಅಂತಾನೇ ಅವರದೂ ಒಂದ್ ಪಾರ್ಟಿ ಇದೆ. ಅವರ ಪಕ್ಷದ ಒಂದು ಬದ್ದತೆ ಇದೆ, ಹೋರಾಟ ಮಾಡಬೇಕು ಈ ವಿಚಾರದಲ್ಲಿ ಎಂದು ತಿಳಿಸಿದ್ದಾರೆ.
ರಾಜ್ಯದ ಇತರೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಶಾಸಕ ಯತ್ನಾಳ್ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ತರುತ್ತಿದೆ ಇನ್ನು ಯತ್ನಾಳ್ ಹೇಳಿಕೆ ಸಂಬಂಧ ಮಾತನಾಡಿರುವ ವಸತಿ ಸಚಿವ ವಿ.ಸೋಮಣ್ಣ, ಶಾಸಕ ಯತ್ನಾಳ್ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ತರುತ್ತಿದೆ. ಯತ್ನಾಳ್ ಅನುಭವಿಗಳು ಇಂಥ ಹೇಳಿಕೆಗಳನ್ನು ನೀಡಬಾರದು. ಯತ್ನಾಳ್ ಯಾಕೆ ಇಂಥ ಹೇಳಿಕೆ ನೀಡುತ್ತಿದ್ದಾರೋ ಗೊತ್ತಿಲ್ಲ. ಯತ್ನಾಳ್ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ದೇನೆ ಅವರು ಸಿಗುತ್ತಿಲ್ಲ. ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ ಅಂತ ಹೈಕಮಾಂಡ್ ಹೇಳಿದೆ. ಸಿಎಂ ಬದಲಾವಣೆ ಎಂಬುದು ಕಟ್ಟು ಕಥೆ. ಸಿಎಂ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಬೊಮ್ಮಾಯಿ ಅವರ ಸ್ಪೀಡ್ ಕೆಲವರಿಗೆ ಮುಜುಗರ ತಂದಿದೆ ಎಂದರು.
ಯಾರು ಹಣ ಕೇಳಿದ್ದಾರೆ ಎಂಬುದನ್ನು ಯತ್ನಾಳ್ ಹೇಳಬೇಕು ಸಿಎಂ ಕುರ್ಚಿ $2,500 ಕೋಟಿಗೆ ಹರಾಜಿಗಿದೆ ಎಂದು ಹೇಳಿದ್ದಾರೆ. ಯಾರು ಹಣ ಕೇಳಿದ್ದಾರೆ ಎಂಬುದನ್ನು ಯತ್ನಾಳ್ ಹೇಳಬೇಕು. ಈ ಬಗ್ಗೆ ಯತ್ನಾಳ್ ಅವರೇ ಎಸಿಬಿಗೆ ದೂರು ನೀಡಲಿ ಎಂದು ವಿಜಯಪುರದಲ್ಲಿ ಕಾಂಗ್ರೆಸ್ MLC ಪ್ರಕಾಶ್ ರಾಥೋಡ್ ಹೇಳಿದ್ದಾರೆ. ಹಣ ಕೇಳಿದವರು ಯಾರು ಎಂಬುದನ್ನು ಬಹಿರಂಗಪಡಿಸಬೇಕು. ಇಲ್ಲವಾದರೆ ಯತ್ನಾಳ್ರನ್ನು ವಿಚಾರಣೆ ನಡೆಸಿ. ರಾಜ್ಯದಲ್ಲಿನ ಭ್ರಷ್ಟಾಚಾರ ವಿಚಾರದಲ್ಲಿ ಪ್ರಧಾನಿ ಮೌನವಾಗಿದ್ದಾರೆ. ಭ್ರಷ್ಟಾಚಾರಕ್ಕೆ ಬಿಜೆಪಿ ಹೈಕಮಾಂಡ್ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರ ಭ್ರಷ್ಟಾಚಾರದಿಂದ ತುಂಬಿದೆ. ಮುಖ್ಯಮಂತ್ರಿ ಕುರ್ಚಿ ಹರಾಜಿಗಿದೆ ಎಂದಿದ್ದಾರೆ. 2500 ಕೋಟಿ ಕೊಟ್ಟರೆ ಸಿಎಂ ಸ್ಥಾನ ಸಿಗುತ್ತದೆ ಎಂದು ಯತ್ನಾಳ್ ಅವರೇ ಹೇಳಿದ್ದಾರೆ. ಹಣ ಕೇಳಿದವರು ಯಾರು ಅನ್ನೋದನ್ನ ಯತ್ನಾಳ್ ಮಾಹಿತಿ ನೀಡಬೇಕು. ಯತ್ನಾಳ್ ಅವರನ್ನು ಬಂಧಿಸಿ ತನಿಖೆ ಮಾಡಬೇಕು ಎಂದು ಪ್ರಕಾಶ ರಾಠೋಡ ಆಗ್ರಹಿಸಿದ್ದಾರೆ. ಯತ್ನಾಳ್ ಹೇಳಿಕೆ ಬಗ್ಗೆ ಸೂಕ್ತವಾದ ತನಿಖೆ ನಡೆಸಬೇಕು. ಪಿಎಸ್ಐ ಅಕ್ರಮ ಪರೀಕ್ಷೆ ಬಗ್ಗೆ ಮಾತನಾಡಿದ ಪ್ರಿಯಾಂಕಾ ಖರ್ಗೆ ಅವರಿಗೆ ಸಿಐಡಿ ನೋಟಿಸ್ ನೀಡಿದ್ದಾರೆ. ಪಿಎಸ್ ಐ ಅಕ್ರಮ ಹಿನ್ನೆಲೆಯಲ್ಲಿ ನೈತಿಕ ಹೊಣೆಹೊತ್ತು ಗೃಹ ಸಚಿವ ರಾಜೀನಾಮೆ ನೀಡಬೇಕು. ದಿವ್ಯಾ ಹಾಗರಗಿ ಅವರು ಗೃಹ ಸಚಿವರ ಮನೆಗೆ ಹೋಗಿದ್ದರು. ಸಿಐಡಿ ಗೃಹ ಸಚಿವರ ಅಡಿಯಲ್ಲೇ ಬರೋದ್ರಿಂದ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದರು.
Published On - 2:08 pm, Sun, 8 May 22